ಬಸವನಗುಡಿ, ಜಯನಗರ ಸುತ್ತ ಮಳೆ : ಹಲವೆಡೆ ರಸ್ತೆ ಜಲಾವೃತ- ಜೂನ್ 1ರವರೆಗೆ ಮಳೆ

KannadaprabhaNewsNetwork |  
Published : May 29, 2026, 03:45 AM IST
Rain

ಸಾರಾಂಶ

ನಗರದ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಗುರುವಾರ ಸಂಜೆ ಗುಡುಗು, ಮಿಂಚು, ಗಾಳಿ ಸಹಿತ ಜೋರು ಮಳೆಯಾಗಿದ್ದು ಅನೇಕ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರ ನಿಧಾನವಾಗಿತ್ತು. ಕೆಲವೆಡೆ ಮರಗಳು ಬಿದ್ದ ಕಾರಣ ವಾಹನ ಸಂಚಾರ ವ್ಯತ್ಯಯಗೊಂಡಿತ್ತು.

  ಬೆಂಗಳೂರು :  ನಗರದ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಗುರುವಾರ ಸಂಜೆ ಗುಡುಗು, ಮಿಂಚು, ಗಾಳಿ ಸಹಿತ ಜೋರು ಮಳೆಯಾಗಿದ್ದು ಅನೇಕ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರ ನಿಧಾನವಾಗಿತ್ತು. ಕೆಲವೆಡೆ ಮರಗಳು ಬಿದ್ದ ಕಾರಣ ವಾಹನ ಸಂಚಾರ ವ್ಯತ್ಯಯಗೊಂಡಿತ್ತು.

ಹಲವೆಡೆ ಜೋರು ಮಳೆ

ಬಸವನಗುಡಿ, ಬನಶಂಕರಿ, ಜಯನಗರ, ಜೆ.ಪಿ.ನಗರ, ಎಚ್‌ಎಸ್‌ಆರ್ ಲೇಔಟ್, ಬೊಮ್ಮನಹಳ್ಳಿ, ಬೇಗೂರು, ಅರೆಕೆರೆ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಮೆಜೆಸ್ಟಿಕ್ ಸುತ್ತಲಿನ ಪ್ರದೇಶಗಳಲ್ಲಿ ಹಗುರ ಮಳೆಯಾಗಿದೆ.

ಜೂನ್ 1ರವರೆಗೆ ಮಳೆಯಾಗಲಿದೆ

ಬಿಳೇಕಹಳ್ಳಿ, ಹೊಸೂರು ರಸ್ತೆಯಲ್ಲಿ ಡಬ್ಬಲ್ ಡೆಕ್ಕರ್ ಡೌನ್‌ ರ್‍ಯಾಂಪ್‌ ಬಳಿ, ಚಾಮರಾಜಪೇಟೆ ಉಮಾ ಚಿತ್ರಮಂದಿರ, ಸಿಲ್ಕ್ ಬೋರ್ಡ್ ಜಂಕ್ಷನ್, ಮಡಿವಾಳ ಅಂಡರ್‌ಪಾಸ್, ಹುಳಿಮಾವು ಗೇಟ್, ಕುಬೇರ ಜಂಕ್ಷನ್, ಸಾರಕ್ಕಿ ಸಿಗ್ನಲ್‌ ಬಳಿ ರಸ್ತೆಯಲ್ಲಿ ಮಳೆ ನೀರು ನಿಂತ ಕಾರಣ ವಾಹನಗಳ ಸಂಚಾರ ನಿಧಾನವಾಗಿತ್ತು. ತಾವರೆಕೆರೆ ಜಂಕ್ಷನ್, ಜೆ.ಪಿ.ನಗರ 100 ಅಡಿ ರಸ್ತೆ, ಆರ್.ವಿ. ಡೆಂಟಲ್ ಕಾಲೇಜು, ಸೌತ್ ಎಂಡ್ ಸರ್ಕಲ್, ಹೊಸ ರಸ್ತೆ ಜಂಕ್ಷನ್‌ ಬಳಿ ರಸ್ತೆಗೆ ಮರ ಬಿದ್ದ ಪರಿಣಾಮ ವಾಹನ ಸಂಚಾರ ವ್ಯತ್ಯಯವಾಯಿತು. ಗುರುವಾರ ಸಂಜೆ ದಕ್ಷಿಣ ಭಾಗದ ವಿವಿಧೆಡೆ ಸರಾಸರಿ 20 ಮಿ.ಮೀ ನಿಂದ 40 ಮಿ.ಮೀವರೆಗೆ ಮಳೆಯಾಗಿದೆ. ಜೂನ್ 1ರವರೆಗೆ ಮಳೆಯಾಗಲಿದೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬ್ರೇಕ್‌ಫಾಸ್ಟ್‌ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕ ವಿದಾಯ
ಸಿದ್ದು ಮಾರ್ಗದರ್ಶನದಲ್ಲಿ ನಡೆಯುವೆ : ಡಿಕೆಶಿ ವಾಗ್ದಾನ