ಬೀದರ್: ಬೆಳಿಗ್ಗೆಯಿಂದ ಬಿಸಿಲಿನ ಧಗೆಗೆ ಸುಸ್ತಾಗಿದ್ದ ಬೀದರ್ ಜಿಲ್ಲೆಯ ಜನರು ಭಾನುವಾರ ಸಾಯಂಕಾಲ ಸುಮಾರಿಗೆ ಗುಡುಗು ಸಹಿತ ಸುರಿದ ಮಳೆಯಿಂದ ಬೀದರ್ ಜನರು ತಂಪು ವಾತಾವರಣ ಅನುಭವಿಸಿದರು. ಬೀದರ್ ನಗರ ಸೇರಿದಂತೆ ಸುತ್ತಮುತ್ತ ಕೆಲಹೊತ್ತು ಗುಡುಗು ಹಾಗೂ ಸಿಡಿಲಿನ ಅಬ್ಬರದ ಮಧ್ಯೆ ಸುರಿದ ಮಳೆಗೆ ರಸ್ತೆಯಲ್ಲಿ ನೀರು ನಿಂತಿದ್ದವು. ಕಳೆದ ಮೂರು ದಿನಗಳಿಂದ ಬಿಸಿಲಿನ ಮಧ್ಯದಲ್ಲಿಯೇ ಗುಡುಗು ಸಹಿತ ಮಳೆ ಬಿಳುತ್ತಿದೆ. ಶನಿವಾರ ಸಂಜೆ ಕೂಡ ಆಲಿಕಲ್ಲಿನ ಮಳೆಯಾಗಿದೆ. ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಮಾಪೂರ ಗ್ರಾಮದಲ್ಲಿ ಸಿಡಿಲಿನ ಅಬ್ಬರಕ್ಕೆ ಆಕಳೊಂದು ಸಾವನಪ್ಪಿದೆ. --