ಸುರತ್ಕಲ್‌ ಶಾಲೆಗೆ ಮಳೆ ನೀರು ಕೊಯ್ಲು ಯಂತ್ರೋಪಕರಣ ಘಟಕ

KannadaprabhaNewsNetwork |  
Published : Mar 25, 2025, 12:51 AM IST
ಸುರತ್ಕಲ್‌ ಶಾಲೆಯ ಮಳೆ ನೀರು ಕೊಯ್ಲು ಯಂತ್ರೋಪಕರಣ ಘಟಕ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಸುರತ್ಕಲ್‌ನ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶ್ರೀ ವಿದ್ಯಾ ವಿನಾಯಕ ಆವರಣದಲ್ಲಿ ರೋಟರಿ ಸಂಸ್ಥೆಯು ನಿರ್ಮಿಸಿದ್ದ 2 ಲಕ್ಷ ರು. ಮೌಲ್ಯದ ಮಳೆ ನೀರು ಕೊಯ್ಲಿನ ಯಂತ್ರೋಪಕರಣ ಘಟಕವನ್ನು ಸೋಮವಾರ ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ರೋಟರಿ ಕ್ಲಬ್ ಸುರತ್ಕಲ್ ಹಾಗೂ ರೋಟರಿ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ಸುರತ್ಕಲ್‌ನ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶ್ರೀ ವಿದ್ಯಾ ವಿನಾಯಕ ಆವರಣದಲ್ಲಿ ರೋಟರಿ ಸಂಸ್ಥೆಯು ನಿರ್ಮಿಸಿದ್ದ 2 ಲಕ್ಷ ರು. ಮೌಲ್ಯದ ಮಳೆ ನೀರು ಕೊಯ್ಲಿನ ಯಂತ್ರೋಪಕರಣ ಘಟಕವನ್ನು ಸೋಮವಾರ ಉದ್ಘಾಟಿಸಲಾಯಿತು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ರೋಟರಿ ಜಿಲ್ಲಾ 3181ರ ಗವರ್ನರ್‌ ವಿಕ್ರಮ್‌ ದತ್ತ ಮಾತನಾಡಿ, ರೋಟರಿ ಸಂಸ್ಥೆಯು ಸಮಾಜದಲ್ಲಿರುವ ಆರ್ಥಿಕವಾಗಿ ಹಿಂದುಳಿದ ವರ್ಗದವರ ಮೂಲಭೂತ ಸೌಕರ್ಯಕ್ಕೆ ಸ್ಪಂದಿಸುತ್ತಿದ್ದು, ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.

ಬಳಿಕ ರೋಟರಿ ಸಂಸ್ಥೆಯವರು ಶಾಲೆಗೆ ದಾನದ ರೂಪದಲ್ಲಿ ನೀಡಿದ 40 ಸಾವಿರ ರು. ಮೌಲ್ಯದ ದೃಶ್ಯ ಮತ್ತು ಶ್ರಾವ್ಯ ಮಾಧ್ಯಮ ಉಪಕರಣವನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ನಾಗವೇಣಿ ಮತ್ತು ಮಾಲಿನಿ ಬಂಗೇರ ಅವರಿಗೆ ಹಸ್ತಾಂತರಿಸಲಾಯಿತು. ದ.ಕ. ಜಿಲ್ಲಾ ನಿರ್ಮಿತಿ ಕೇಂದ್ರದ ಕಾರ್ಯ ನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಅವರು ಮಳೆ ನೀರು ಕೊಯ್ಲಿನ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಶಾಲಾ ಆಡಳಿತ ಸಮಿತಿ ಅಧ್ಯಕ್ಷ ರಮಾನಂದ ರಾವ್, ರೋಟರಿ ವಲಯ ಸಹಾಯಕ ಗವರ್ನರ್‌ ಡಾ. ರಂಜನ್, ಕೆ.ಎಂ. ಹೆಗ್ಡೆ ಇದ್ದರು. ರೋಟರಿ ಕ್ಲಬ್ ಸುರತ್ಕಲ್‌ ಅಧ್ಯಕ್ಷ ಸಂದೀಪ್ ರಾವ್ ಸ್ವಾಗತಿಸಿದರು. ರೋಟರಿ ಕ್ಲಬ್ ಸಿಟಿ ಸಂಸ್ಥೆಯ ಅಧ್ಯಕ್ಷ ಗಣೇಶ್ ಕೊಡ್ಲಮೊಗರು ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ