ಮಹಾರಾಷ್ಟ್ರ ಮೂಲದ ಮಂಗಲಂ ಟ್ರೇಡರ್ಸ್ ಮಾಲೀಕ ಅನಿಲಕುಮಾರ ಪಾಂಡುರಂಗ ಪಾಟೀಲ ಎಂಬುವವರಿಗೆ ₹78.58 ಲಕ್ಷ ವಂಚಿಸಿದ ಬಗ್ಗೆ ಜಮಖಂಡಿಯ 16 ಜನರ ವಿರುದ್ಧ ಮಹಾರಾಷ್ಟ್ರ ರಾಜ್ಯದ ತಾಸಗಾಂವ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೂವರನ್ನು ತಾಸಗಾಂವ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ಮಹಾರಾಷ್ಟ್ರ ಮೂಲದ ಮಂಗಲಂ ಟ್ರೇಡರ್ಸ್ ಮಾಲೀಕ ಅನಿಲಕುಮಾರ ಪಾಂಡುರಂಗ ಪಾಟೀಲ ಎಂಬುವವರಿಗೆ ₹78.58 ಲಕ್ಷ ವಂಚಿಸಿದ ಬಗ್ಗೆ ಜಮಖಂಡಿಯ 16 ಜನರ ವಿರುದ್ಧ ಮಹಾರಾಷ್ಟ್ರ ರಾಜ್ಯದ ತಾಸಗಾಂವ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೂವರನ್ನು ತಾಸಗಾಂವ ಪೊಲೀಸರು ಬಂಧಿಸಿದ್ದಾರೆ. ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ಜಗದೀಶ ಹನುಮಂತ ಹೂಗಾರ, ಶ್ರೀಧರ ಬಸಪ್ಪ ಕಾಸರ ಮತ್ತು ಚಿಕ್ಕಲಕಿಯ ರಾಜೇಶ ನಂದಪ್ಪ ಗೌರೋಜಿ ಬಂಧಿತರು. ತೊದಲಬಾಗಿ ನಿವಾಸಿಗಳಾದ ಶ್ರೀಧರ ಬಸಪ್ಪ ಕಾಸರ, ಬಸಪ್ಪ ಹನ್ಮಾನರ ಹೂಗಾರ, ರಾಜೇಂದ್ರ ಶಿವಪ್ಪ ರಾಯಪ್ಪಗೋಳ, ಆನಂದ ಸದಾಶಿವ ಬಿಳಗಲಿ, ಆನಂದ ಸದಾಶಿವ ಬಿಳಗಲಿ, ಮಲ್ಕಾರಿ ಒಡೆಯರ, ರಮೇಶ ರುಕ್ಮಾಬಾಸರ, ರಮೇಶ ರುಕ್ಮಾಬಾಸರ, ಗೋರಖನಾಥ ಭಗವಂತ ಕದಂ, ಜಗದೀಶ ಹನ್ಮಂತ ಹೂಗಾರ, ರವಿ ಮಾದರ, ರಾಜು ಕಾಳೆ, ಸಂಗಪ್ಪ ಮಾಳಪ್ಪ ತಳವಾರ, ಪ್ರಕಾಶ ಗುಣಚಿ ಚಿಕ್ಕಲಕಿಯ ರಾಜೇಶ ಗೌರೋಜಿ, ರಾಜು ಸದಾಶಿವ ಕಾಳೆ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ.
ಏಪ್ರಿಲ್ 2019ರಿಂದ ಫೆಬ್ರವರಿ 2023ರ ವರೆಗೆ, ಒಣದ್ರಾಕ್ಷಿ ವ್ಯಾಪಾರಿ ಅನಿಲಕುಮಾರ ಪಾಟೀಲ ಕರ್ನಾಟಕ ರಾಜ್ಯದ ದ್ರಾಕ್ಷಿ ಬೆಳೆಗಾರ ರೈತರಿಗೆ ಕಾಲಕಾಲಕ್ಕೆ ಹಣವನ್ನು ಪಾವತಿಸಿದ್ದರು. ಅವರಲ್ಲಿ ಶ್ರೀಧರ ಕಾಸರ ಒಣದ್ರಾಕ್ಷಿ ಯಂತ್ರದ ಘಟಕ ನಿರ್ಮಾಣಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅದರಿಂದ ಬಂದ ಲಾಭ ಮತ್ತು ಅಂಗಡಿಯಲ್ಲಿ ಮಾರಾಟಕ್ಕಿರುವ ಒಣದ್ರಾಕ್ಷಿ ಸರಕುಗಳಿಂದ ಬಂದ ಹಣದಲ್ಲಿ ₹53.23 ಲಕ್ಷ ತೆಗೆದುಕೊಂಡಿದ್ದರು. ಒಣದ್ರಾಕ್ಷಿ ಪೂರೈಸಲು 15 ರೈತರು ಕಂಪನಿಯಿಂದ ₹ 78.58 ಲಕ್ಷ ನಗದು ಮತ್ತು ಆನ್‌ಲೈನ್ ರೂಪದಲ್ಲಿ ಮುಂಗಡವಾಗಿ ಪಡೆದಿದ್ದರು. ಆದರೆ, ಒಡಂಬಡಿಕೆಯಂತೆ ಕಂಪನಿಗೆ ಒಣದ್ರಾಕ್ಷಿ ಕೊಡದೇ ತಾವೇ ಮಾರಾಟ ಮಾಡಿ ವಂಚನೆ ಎಸಗಲು ಸಂಚು ರೂಪಿಸಿದ್ದಾರೆ ಎಂದು ದೂರು ದಾಖಲಾಗಿತ್ತು.
₹78.58 ಲಕ್ಷ ವಂಚಿಸಿದ್ದಾರೆಂದು ತಾಸಗಾಂವದ ಮಂಗಲಂ ಟ್ರೇಡರ್ಸ್ ಅನಿಲಕುಮಾರ ಪಾಂಡುರಂಗ ಪಾಟೀಲ ಅವರು ಜಮಖಂಡಿ ತಾಲೂಕಿನ 16 ಜನ ಆರೋಪಿಗಳ ಪ್ರಕರಣ ದಾಖಲಾಗಿದ್ದು, ಮೂರು ಜನರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕಾಗಿ ತಂಡ ರಚಿಸಲಾಗಿದೆ.
- ಸೋಮನಾಥ ವಾಘ, ಪೊಲೀಸ್ ಅಧಿಕಾರಿ ತಾಸಗಾಂವ ಠಾಣೆ ಮಹಾರಾಷ್ಟ್ರ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.