ಮಾನ್ವಿ: ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ 4ಲಕ್ಷ ಜನರು ಜೆಡಿಎಸ್ ಬೆಂಬಲಿಸುವ ಮತದಾರರಿರುವುದರಿಂದ ರಾಜಾ ಅಮರೇಶ್ವರನಾಯಕ ರವರ ಗೆಲುವಿಗೆ ಮೈತ್ರಿಯಿಂದ ಅನುಕೂಲವಾಗಲಿದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.ತಾಲೂಕಿನ ಮದ್ಲಪೂರ ಗ್ರಾಮದಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ ಪರ ಮತಯಾಚನೆ ಮಾಡಿ ಮಾತನಾಡಿ, ಸಂಸದರು ಕ್ಷೇತ್ರದ ಅಭಿವೃದ್ಧಿಗಾಗಿ 20ಕೋಟಿ ರು. ಸಂಸದರ ಅನುದಾನ ಬಳಸಿಕೊಂಡು ಶಾಶ್ವತವಾದ ಹಲವು ಯೋಜನೆ ತಂದಿದ್ದಾರೆ ಕುಡಿಯುವ ನೀರಿನ ಯೋಜನೆ, ರಸ್ತೆಗಳ ಅಭಿವೃದ್ಧಿ, ರೈಲ್ವೆಯೋಜನೆ ಜಾರಿಗೆಗೆ ಶ್ರಮಿಸಿದ್ದಾರೆ. ದೇಶದಲ್ಲಿನ 550 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಕೇವಲ 220ರಲ್ಲಿ ಮಾತ್ರ ಸ್ಪರ್ಧೆ ನಡೆಸಿದ್ದು, ಆ ಕ್ಷೇತ್ರಗಳಲ್ಲಿ 50 ಸ್ಥಾನ ಮಾತ್ರ ಗೇಲುವುದಕ್ಕೆ ಸಾಧ್ಯವಾಗುತ್ತದೆ. ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತಹಾಕದೆ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಲು ಮೇ 7ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಕೋರಿದರು.