ಉಪ್ಪಿನಂಗಡಿ: ಹಿಂದೆ ವೈಯಕ್ತಿಕವಾಗಿ ನನ್ನ ಬದುಕಿನ ಸಂಕಷ್ಟಗಳನ್ನು ದೂರ ಮಾಡಿದ್ದ ವಾಸ್ತು ಗಿಡವೇ ಇಂದು ನನ್ನಂತೆ ಸಾವಿರಾರು ಮಂದಿಯ ಬಾಳಿಗೆ ಬೆಳಕಾಗಿದೆ. ನಾನು ಪೂಜಿಸಿಕೊಡುವ ವಾಸ್ತು ಗಿಡದ ಪರಿಣಾಮದಿಂದಲೇ ಹಲವಾರು ಮಂದಿ ಸಂಕಷ್ಟಗಳಿಂದ ದೂರವಾಗಿ ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ವಾಸ್ತುಗಿಡದ ಮೂಲಕ ದೇಶವಿದೇಶಗಳಲ್ಲಿ ಪ್ರಸಿದ್ಧರಾಗಿರುವ ದ.ಕ ಜಿಲ್ಲೆ ಪುತ್ತೂರು ತಾಲೂಕಿನ ಕೈಲಾರ್ ರಾಜಗೋಪಾಲ್ ಭಟ್.ಸಮಾಜಸೇವೆ, ಸಾಮಾಜಿಕ ಕಾಳಜಿಯ ಕಾರ್ಯಗಳಲ್ಲೂ ಹೆಸರುವಾಸಿ ರಾಜಗೋಪಾಲ್ ಭಟ್ ಹೆಚ್ಚು ಪ್ರಸಿದ್ಧರಾಗಿರುವುದು ವಾಸ್ತು ಗಿಡ ಮಹತ್ವ ಪ್ರಚಾರದ ಮೂಲಕ. ಅವರು ನೊಂದವರಿಗೆ ಸಾಂತ್ವನ ಹೇಳಿ ಜೀವನೋತ್ಸಾಹ ತುಂಬಿಸಿ ಕೌನ್ಸಿಲಿಂಗ್ ಮಾಡುವವರೂ ಹೌದು.ಸುಮಾರು ೨೦ ವರ್ಷದ ಹಿಂದೆ ಅವರನ್ನು ಕಾಡಿದ ಸಮಸ್ಯೆಗಳು ಮಹಾಗಣಪತಿಯನ್ನು ಪೂಜಿಸಿ ಇರಿಸಲ್ಪಟ್ಟ ವಾಸ್ತು ಗಿಡದ ಕಾರಣಕ್ಕೆ ಮಂಜಿನಂತೆ ಕರಗಿಹೋಯಿತು. ಈ ಉತ್ತಮ ಅಂಶದ ಪರಿಣಾಮ ನಾಡಿನೆಲ್ಲೆಡೆಯ ಜನರಿಗೆ ಲಭಿಸಲಿ ಎಂದು ನಂಬಿ ಬಂದ ಜನರಿಗೂ ಮಹಾಗಣಪತಿಯನ್ನು ಪೂಜಿಸಿ ಗಿಡವನ್ನು ನೀಡಿದೆ. ಬಹಳಷ್ಟು ಮಂದಿ ಪರಿಣಾಮ ಕಂಡುಕೊಂಡು ಜೀವನದಲ್ಲಿ ನೆಮ್ಮದಿ ಅನುಭವಿಸಿದ್ದಾರೆ ಎನ್ನುತ್ತಾರೆ ಅವರು.ಈ ತನಕ, ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿದ ಜನರನ್ನು ಮುಖತಃ, ಪೋನ್ ಮೂಲಕ ಸಂಪರ್ಕಿಸಿ ಅವರವರ ಸಮಸ್ಯೆಗಳನ್ನು ಆಲಿಸಿ ಹತಾಶೆಯ ನಿರ್ಧಾರಗಳನ್ನು ಬದಲಾಯಿಸುವಲ್ಲಿ ಕೈಲಾರ್ ರಾಜಗೋಪಾಲ ಭಟ್ ಯಶಸ್ವಿಯಾಗಿದ್ದಾರೆ. ಮಾರಕ ಕಾಯಿಲೆ, ಕೌಟುಂಬಿಕ ಸಮಸ್ಯೆ, ಆರ್ಥಿಕ ಮುಗ್ಗಟ್ಟಿನಿಂದ ಮುಕ್ತನಾಗುವ ಸಲುವಾಗಿ ಆತ್ಮಹತ್ಯೆಯ ಹಾದಿ ತುಳಿದವರಿಗೆ ಸಾಂತ್ವನದ ನುಡಿಗಳನ್ನಾಡಿ, ತಾವು ಪೂಜಿಸುವ ಮಹಾಗಣಪತಿಯ ಕೃಪೆಯಿಂದ ಜೀವನೋತ್ಸಾಹ ತುಂಬುತ್ತಾರೆ. ಪರಿಣಾಮವಾಗಿ ಕಳೆದ ಒಂದು ವರ್ಷದಲ್ಲೇ ಸುಮಾರು ೪೩ ಮಂದಿಯನ್ನು ಕೆಟ್ಟ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದ್ದಾರೆ. ತಾವು ಪಡೆದುಕೊಂಡ ವಾಸ್ತು ಗಿಡದ ಕಾರಣದಿಂದಲೇ ಉದ್ಯೋಗ ಪ್ರಾಪ್ತಿ, ಪದೋನ್ನತಿ, ಸಂತಾನ ಭಾಗ್ಯ, ಕೌಟುಂಬಿಕ ಕಲಹ ನಿವಾರಣೆಯಾದ ಬಗ್ಗೆ ನೂರಾರು ಮಂದಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಬರಬೇಕಾದ ಹಣ ಕೈಸೇರಿತೆಂದು, ಬರಬೇಕಾದ ಆಸ್ತಿ ಲಭಿಸಿತ್ತೆಂದೂ ಅಭಿಪ್ರಾಯಗಳನ್ನು ಬರೆದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಜೀವನೋತ್ಸಾಹವನ್ನು ಮೂಡಿಸುವ ಮೂಲಕ ತನ್ನ ಕಾಯಕದಲ್ಲಿ ಸಾಮಾಜಿಕ ಕಾಳಜಿಯನ್ನು ಕೈಲಾರ್ ರಾಜಗೋಪಾಲ ಭಟ್ ವ್ಯಕ್ತಪಡಿಸುತ್ತಾರೆ.
-ಕೈಲಾರ್ ರಾಜಗೋಪಾಲ ಭಟ್, ವಾಸ್ತು ತಜ್ಞ.