ಸುಪ್ರೀಂ ಕೋರ್ಟ್‌ ಮೋರೆ ಹೋದ ರಾಜೇಗೌಡ

KannadaprabhaNewsNetwork |  
Published : May 09, 2026, 01:15 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರು ಎಣಿಕೆಯಲ್ಲಿನ ಅನ್ಯಾಯದ ವಿರುದ್ಧ ಇದೀಗ ಟಿ.ಡಿ.ರಾಜೇಗೌಡ ಸುಪ್ರೀಂ ಕೋರ್ಟ್‌ ಮೋರೆ ಹೋಗಿದ್ದಾರೆ.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರು ಎಣಿಕೆಯಲ್ಲಿನ ಅನ್ಯಾಯದ ವಿರುದ್ಧ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರು ಎಣಿಕೆಯಲ್ಲಿನ ಅನ್ಯಾಯದ ವಿರುದ್ಧ ಇದೀಗ ಟಿ.ಡಿ.ರಾಜೇಗೌಡ ಸುಪ್ರೀಂ ಕೋರ್ಟ್‌ ಮೋರೆ ಹೋಗಿದ್ದಾರೆ.

ರಾಜೇಗೌಡ ಪರ ವಕೀಲರು ಸಲ್ಲಿರುವ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ವಿಚಾರಣೆ ಬರುವ ಸಾಧ್ಯತೆ ಇದೆ. ಗುರುವಾರವೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದು ‘ಕನ್ನಡಪ್ರಭ’ಕ್ಕೆ ವಕೀಲ ಸುಧೀರ್‌ ಕುಮಾರ್‌ ಮುರೊಳ್ಳಿ ಮಾಹಿತಿ ನೀಡಿದ್ದಾರೆ.

ಯಾವ ಯಾವ ಅಂಶಗಳ ಮೇಲೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಿಲ್ಲ. ಆದರೆ, ಈ ಪ್ರಕರಣದಲ್ಲಿ ರಾಜೇಗೌಡ ಅವರಿಗೆ ಅನ್ಯಾಯವಾಗಿರುವುದು ಮಾತ್ರ ನಿಜ. ಅನ್ಯಾಯದ ವಿರುದ್ಧ ಹೋರಾಟ ಆರಂಭಿಸಲಾಗಿದೆ. ಕಾನೂನಿನ ಮೇಲೆ ವಿಶ್ವಾಸವಿದ್ದು, ರಾಜೇಗೌಡರಿಗೆ ನ್ಯಾಯ ದೊರೆಯಲಿದೆ ಎಂದು ಸುಧೀರ್‌ ಕುಮಾರ್‌ ಮುರೊಳ್ಳಿ ವಿಶ್ವಾಸ ವ್ಯಕ್ತಪಡಿಸಿದರು.

2023ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಟಿ.ಡಿ.ರಾಜೇಗೌಡ 201 ಮತದಿಂದ ಗೆಲುವು ಸಾಧಿಸಿದ್ದರು. ಪರಾಜಿತಗೊಂಡ ಬಿಜೆಪಿ ಅಭ್ಯರ್ಥಿ ಜೀವರಾಜ್‌ ಅಂಚೆ ಮತ ಎಣಿಕೆಯಲ್ಲಿ ಲೋಪ ಉಂಟಾಗಿದ್ದು, ತಿರಸ್ಕೃತಗೊಂಡ 279 ಅಂಚೆ ಮತ ಪುನರ್‌ ಪರಿಶೀಲನೆ ನಡೆಸಬೇಕೆಂದು ಹೈಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್‌ ತಿರಸ್ಕೃತ ಅಂಚೆ ಮತ ಪುನರ್‌ ಪರಿಶೀಲಿಸಬೇಕು. ಈ ಪೈಕಿ ಸಿಂಧು ಮತಗಳು ಕಂಡು ಬಂದರೆ, ಅಂಚೆ ಮತಗಳನ್ನು ಮರು ಎಣಿಕೆ ಮಾಡಬೇಕು ಎಂದು ಸೂಚಿಸಿತ್ತು. ಅದರಂತೆ ಮೇ 2 ರಂದು ಚುನಾವಣಾ ಆಯೋಗ ಅಂಚೆ ಮತ ಪರಿಶೀಲನೆ ಮತ್ತು ಮರು ಎಣಿಕೆ ನಡೆಸಿತ್ತು.

ಈ ವೇಳೆ 2023ರಲ್ಲಿ ಕಾಂಗ್ರೆಸ್‌ನ ರಾಜೇಗೌಡರು ಪಡೆದ ಅಂಚೆ ಮತದ ಪೈಕಿ ಬರೋಬ್ಬರಿ 255 ಮತ ಹಾಗೂ ಬಿಜೆಪಿಯ ಜೀವರಾಜ್‌ ಪಡೆದ ಮತಗಳ ಪೈಕಿ 2 ಮತ ಅಸಿಂಧು ಆಗಿದ್ದವು.

ಹೀಗಾಗಿ, 2023ರಲ್ಲಿ ಜಯಶಾಲಿಯಾಗಿದ್ದ ಟಿ.ಡಿ,ರಾಜೇಗೌಡ 52 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಬಿಜೆಪಿ ಅಭ್ಯರ್ಥಿ ಜೀವರಾಜ್‌ 52 ಮತದಿಂದ ಗೆಲುವು ಸಾಧಿಸಿದ್ದರು.

2023ರಲ್ಲಿ ಸಿಂಧು ಆಗಿದ್ದ ಮತಗಳು ಇದೀಗ ಅಸಿಂಧು ಆಗಿದ್ದು, ಹೇಗೆ?, ಮತಗಳನ್ನು ಟ್ಯಾಂಪರಿಂಗ್‌ ಮಾಡಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಜೀವರಾಜ್‌, ಅಂದಿನ ಚುನಾವಣಾಧಿಕಾರಿ ವೇದಮೂರ್ತಿ ಹಾಗೂ ಅಂದಿನ ಜಿಲ್ಲಾಚುನಾವಣಾಧಿಕಾರಿ ರಮೇಶ್‌ ವಿರುದ್ಧ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು. ಪೊಲೀಸರು ಸಹ ಎಫ್‌ಐಆರ್‌ ದಾಖಲಿಸಿ ತನಿಖೆಗೆ ಮುಂದಾಗಿದ್ದರು. ಈ ನಡುವೆ ಜೀವರಾಜ್‌ ಹೈಕೋರ್ಟ್‌ಗೆ ಎಫ್‌ಐಆರ್‌ ರದ್ದಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಎಫ್‌ಐಆರ್‌ ರದ್ದಿಗೆ ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಇದೀಗ ಟಿ,ಡಿ.ರಾಜೇಗೌಡ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.ಪೋಟೋ: ರಾಜೇಗೌಡ ಹಾಗೂ ಜೀವರಾಜ್‌ ಫೋಟೋ ಬಳಸುವುದು ಕಡ್ಡಾಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರಿ ಸಾಧನೆಗೆ ಶ್ರಮ, ಸಮಯ ಅಗತ್ಯ: ಡಾಲಿ ಧನಂಜಯ್
ಪೂರ್ಣಕುಂಭ ಹೊತ್ತು ಸಾಗಿದ ಸೌಭಾಗ್ಯ