- ಪುಣ್ಯತಿಥಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಡಿ.ಬಸವರಾಜ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಇಂದು ಶ್ರೀ ಸಾಮಾನ್ಯನ ಕೈಯಲ್ಲಿ ಮೊಬೈಲ್ ಫೋನ್ ಬರುವಂತ ತಂತ್ರಜ್ಞಾನಗಳಿಗೆ ಪ್ರೋತ್ಸಾಹಿಸಿದ್ದು ಪ್ರಧಾನಮಂತ್ರಿಯಾಗಿದ್ದ ರಾಜೀವ್ ಗಾಂಧಿ ಅವರು ಕಾರಣ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್ ಹೇಳಿದರು.
ಮಂಗಳವಾರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಇಂಟಕ್ ವಿಭಾಗವು ದಾವಣಗೆರೆ ನಗರದ ಎಂಸಿಸಿ ಎ ಬ್ಲಾಕ್‌ನಲ್ಲಿ ಏರ್ಪಡಿಸಿದ್ದ ದಿವಂಗತ ಮಾಜಿ ಪ್ರಧಾನಿ, ಭಾರತ ರತ್ನ ರಾಜೀವ್ ಗಾಂಧಿ ಅವರ 33ನೇ ಪುಣ್ಯತಿಥಿ ಅಂಗವಾಗಿ ನಡೆದ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವ ಅರ್ಪಿಸಿ ಅವರು ಮಾತನಾಡಿದರು.ರಾಜೀವ್ ಗಾಂಧಿ ಅವರು ಅತಿ ಕಿರಿಯ ವಯಸ್ಸಿಗೆ ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತ ದೇಶದ ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಐದು ವರುಷಗಳ ಕಾಲ ದೇಶಕ್ಕೆ ಉತ್ತಮ ಆಡಳಿತ ನೀಡಿದರು. ಅಧಿಕಾರದ ಅವಧಿಯಲ್ಲಿ ಅವರು ಭಾರತ ದೇಶವನ್ನು ಜಗತ್ತಿನ ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಶ್ರಮಿಸಿದರು. ಭಾರತ ದೇಶಕ್ಕೆ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದರು. ಇಡೀ ಪ್ರಪಂಚ ಭಾರತ ದೇಶದ ಕಡೆ ತಿರುಗಿ ನೋಡುವಂತೆ ಮಾಡಿದರು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಇಂಟಕ್ ವಿಭಾಗ ಅಧ್ಯಕ್ಷರಾದ ಕೆ.ಎಂ. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಬಿ.ಎಚ್. ಉದಯಕುಮಾರ್, ಸಿಂಗ್ರಹಳ್ಳಿ ವಿ. ನೀಲಕಂಠಪ್ಪ, ಶಿವಾನಂದ್, ಗಿರಿಧರ್ ಸತಾಲ್, ಡಿ.ಶಿವಕುಮಾರ್, ಎ.ರಾಜಶೇಖರ್, ನಿಟ್ಟುವಳ್ಳಿ ಡಿ.ಬಸವರಾಜ್, ಮುಬಾರಕ್, ಸುರೇಶ್, ಕುಮಾರ್ ಇತರರು ಹಾಜರಿದ್ದರು.- - - -21ಕೆಡಿವಿಜಿ35ಃ:
ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಇಂಟಕ್ ವಿಭಾಗದಿಂದ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ 33ನೇ ಪುಣ್ಯತಿಥಿ ಕಾರ್ಯಕ್ರಮ ಆಚರಿಸಲಾಯಿತು.