ವಿಜ್ಞಾನ, ತಂತ್ರಜ್ಞಾನಕ್ಕೆ ರಾಜೀವ್‌ ಗಾಂಧಿ ಕೊಡುಗೆ ಅಪಾರ: ಅನಂತ ಕುಮಾರ್

KannadaprabhaNewsNetwork | Published : May 22, 2024 12:57 AM

ಸಾರಾಂಶ

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ರಾಜೀವ್‌ ಗಾಂಧಿಯವರ ೩೩ನೇ ಪುಣ್ಯಸ್ಮರಣೆ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ/ ಚಳ್ಳಕೆರೆ

ದೇಶ ಇಂದಿನ ದಿನಮಾನದಲ್ಲಿ ಮಾಹಿತಿ ತಂತ್ರಜ್ಞಾನ, ವಿಜ್ಞಾನದಲ್ಲಿ ಮುಂದುವರೆದಿದೆ ಎಂದರೆ ಅದಕ್ಕೆ ರಾಜೀವಗಾಂಧಿ ಯವರ ಕೊಡುಗೆ ಕಾರಣವಾಗಿದೆ ಎಂದು ಕಾಂಗ್ರೆಸ್‌ನ ರಾಜೀವ್‌ ಗಾಂಧಿ ಪಂಚಾಯತ್ ರಾಜ್ಯ ವಿಭಾಗದ ಆಧ್ಯಕ್ಷರಾದ ಅನಂತಕುಮಾರ್ ತಿಳಿಸಿದರು.

ಚಿತ್ರದುರ್ಗ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜೀವ್‌ಗಾಂಧಿಯವರ ೩೩ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ರಾಜೀವ್‌ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ರಾಜೀವಗಾಂಧಿಯವರು ಸ್ಥಳಿಯ ನಾಯಕರುಗಳಿಂದ ಮಾತ್ರ ಸಮಸ್ಯೆ ಪರಿಹಾರ ಸಾಧ್ಯ ಇದೆ ಎಂದು ಅರಿತಿದ್ದ ಅವರು ಮೂರು ವಿಭಾಗಗಳಲ್ಲಿ ಪಂಚಾಯತ್‌ಗಳನ್ನು ವಿಭಾಗ ಮಾಡುವುದರ ಮೂಲಕ ಜನರಿಗೆ ಅಧಿಕಾರವನ್ನು ನೀಡಿದರು ಎಂದರು.

ಅವರ ಅಧಿಕಾರ ಅವಧಿಯಲ್ಲಿ ನಮ್ಮ ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಾಗಿ ಒತ್ತು ನೀಡಿದ್ದರಿಂದ ಅದು ನಮ್ಮ ದೇಶದಲ್ಲಿ ಹೆಚ್ಚಿನ ರೀತಿಯಲ್ಲಿ ಬೆಳೆಯಲು ಕಾರಣವಾಯಿತು, ಈಗ ದೇಶ ಇದರಲ್ಲಿ ಮುಂದುವರೆದಿದೆ ಎಂದರೆ ಅದಕ್ಕೆ ರಾಜೀವಗಾಂಧಿಯವರ ಕೂಡುಗೆ ಕಾರಣವಾಗಿದೆ ಇದನ್ನು ನಾವುಗಳು ಇಂದು ಸ್ಮರಣೆ ಮಾಡಬೇಕಿದೆ ಅಲ್ಲದೆ ಇದನ್ನು ಇಂದಿನ ಯುವ ಜನತೆಗೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆ ಎಂದರು.

ಡಿಸಿಸಿ ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ ಮಾತನಾಡಿ, ರಾಜೀವಗಾಂಧಿಯವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ನೀಡಿದ್ದಾರೆ, ಯುವಜನತೆಗೆ ೧೮ಕ್ಕೆ ಮತದಾನ ಹಕ್ಕನ್ನು ನೀಡುವುದರ ಮೂಲಕ ಜವಾಬ್ದಾರಿಯನ್ನು ನೀಡಿದರು. ಇವರ ದೂರದೃಷ್ಟಿಯಿಂದ ಇಂದು ನಮ್ಮ ದೇಶದ ತಂತ್ರಜ್ಞಾನದಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿದೆ. ಈಗ ಬಿಜೆಪಿ ಮಾಡುತ್ತಿರುವ ಹೈವೆ ಅಂದಿನ ಕಾಲದಲ್ಲಿಯೇ ರಾಜೀವಗಾಂಧಿಯವರು ಮಾಡಿದ್ದರು, ಇದ್ದಲ್ಲದೆ ಮಹಿಳೆಯರು ಸಹಾ ರಾಜಕೀಯಕ್ಕೆ ಬರಬೇಕೆಂದು ಶೇ.೩೩ರಷ್ಟು ಮೀಸಲಾತಿಯನ್ನು ಜಾರಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಿಸಿಸಿ ಅಧ್ಯಕ್ಷರಾದ ತಾಜ್‌ಪೀರ್ ಮಾತನಾಡಿ, ರಾಜೀವಗಾಂಧಿಯವರು ಚಿಕ್ಕ ವಯಸ್ಸಿನಲ್ಲಿಯೇ ಪ್ರಧಾನ ಮಂತ್ರಿಯಾಗುವುದರ ಮೂಲಕ ದೇಶವನ್ನು ಉನ್ನತ ಮಟ್ಟದಲ್ಲಿ ಕೊಂಡೊಯ್ದಿದ್ದಾರೆ. ಪಂಚಾಯತ್ ನೀಡುವುದು ಗಾಂಧಿಜೀಯವರ ಕನಸಾಗಿತ್ತು ಅದನ್ನು ರಾಜೀವಗಾಂಧಿಯವರು ನನಸು ಮಾಡಿದರು. ಸ್ವಾತಂತ್ರ ಪೂರ್ವದಲ್ಲಿ ಹೋರಾಟವನ್ನು ಮಾಡುವುದರ ಮೂಲಕ ದೇಶವನ್ನು ಬ್ರಿಟಿಷರಿಂದ ಮುಕ್ತರಾಗಿ ಮಾಡಲಾಯಿತು ಎಂದರು.

ಕಾರ್ಯಕ್ರಮದಲ್ಲಿ ಗ್ಯಾರೆಂಟಿ ಯೋಜನೆ ಸಮಿತಿಯ ಅಧ್ಯಕ್ಷರಾದ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಎನ್.ಡಿ.ಕುಮಾರ್, ಲೋಕೇಶ್ ಮುದಸಿರ್, ರವಿಕುಮಾರ್, ಶಬ್ಬೀರ್, ವಾಸಿಂ, ಪ್ರಕಾಶ್ ರಾಮನಾಯ್ಕ್, ಅಂಜಿನಪ್ಪ, ಲಕ್ಷ್ಮೀಕಾಂತ್, ಅಬ್ದುಲ್ ಮುದಸಿರ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಅಭಿವೃದ್ಧಿ ಪಥದತ್ತ ದೇಶ ಕೊಂಡೊಯ್ದ ರಾಜೀವ್‌ ಗಾಂಧಿ: ಎ.ಜಾಕೀರ್ ಹುಸೇನ್ಚಿತ್ರದುರ್ಗ: ದೇಶವನ್ನು ಸಮಗ್ರವಾಗಿ ಅಭಿವೃದ್ಧಿ ಪಥದತ್ತ ಕೊಂಡೊಯ್ದ ಕೀರ್ತಿ ಮಾಜಿ ಪ್ರಧಾನಿ ದಿವಂಗತ ರಾಜೀವ್‍ ಗಾಂಧಿ ಸಲ್ಲುತ್ತದೆ ಎಂದು ಕೆಪಿಸಿಸಿ ಐಎನ್‍ಬಿಸಿಡಬ್ಲ್ಯೂಎಫ್ ಉಪಾದ್ಯಕ್ಷ ಎ.ಜಾಕೀರ್ ಹುಸೇನ್ ಹೇಳಿದರು

ಇಲ್ಲಿನ ದವಳಗಿರಿ ಬಡಾವಣೆಯಲ್ಲಿರುವ ಕೆಪಿಸಿಸಿ ಐಎನ್‍ಬಿಸಿಡಬ್ಲ್ಯೂಎಫ್ ಸ್ಥಳೀಯ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಳ್ಳ ಲಾಗಿದ್ದ ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು ಅತೀ ಚಿಕ್ಕವಯಸ್ಸಿನಲ್ಲಿ ಯೇ ದೇಶದ ಪ್ರಧಾನ ಮಂತ್ರಿಗಳಾಗಿ, ತಮ್ಮ ದೂರ ದೃಷ್ಟಿಯಿಂದ ಅನೇಕ ಮಹತ್ವಾ ಕಾಂಕ್ಷಿ ಯೋಜನೆಗಳನ್ನು ರಾಜೀವ್ ಗಾಂಧಿ ಜಾರಿಗೆ ತಂದ್ದರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಯಾರೂ ಮರೆಯಲಾಗದು ಎಂದು ಬಣ್ಣಿಸಿದರು.ಅಖಿಲ ಕರ್ನಾಟಕ ಟಿಪ್ಪು ಅಭಿಮಾನಿಗಳ ಸಂಘದ ಅಧ್ಯಕ್ಷ ಟಿಪ್ಪು ಖಾಸಿಂ ಅಲಿ ಮಾತನಾಡಿ, ದೇಶದಲ್ಲಿ ಇತ್ತೀಚಿನ ದಿನಮಾನ ಗಳಲಿ ನಡೆಯುತ್ತಿರುವ ವಿದ್ಯಮಾನಗಳು ಎಲ್ಲರಲ್ಲೂ ಆತಂಕ ಮೂಡಿಸುತ್ತಿದೆ. ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದು ಆಡಳಿತ ನಡೆಯುತ್ತಿಲ್ಲ. ಬದಲಾಗಿ ಯಾವುದೋ ಶಕ್ತಿ ಅಧಿಕಾರಸ್ಥರ ಮೇಲೆ ಪ್ರಭಾವ ಬೀರುತ್ತಿದೆ. ಇದರಿಂದ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿದೆ ಎಂದರು. ಜಿಲ್ಲಾ ಬಡಗಿ ನೌಕರರ ಸಂಘದ ಖಜಾಂಚಿ ಬಸವರಾಜಪ್ಪ, ಪದಾಧಿಕಾರಿಗಳಾದ ಸುರೇಶ್,ಜಗದೀಶಾಚಾರ್, ಗೋವಿಂದಪ್ಪ, ಜಗದೀಶ್ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಚಳ್ಳಕೆರೆಯಲ್ಲೂ ದಿ.ರಾಜೀವ್‌ ಗಾಂಧಿ ಪುಣ್ಯಸ್ಮರಣೆ

ಚಳ್ಳಕೆರೆ: ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾಜಿ ಪ್ರಧಾನ ಮಂತ್ರಿ ದಿವಂಗತ ರಾಜೀವ್‌ ಗಾಂಧಿಯವರ ೩೩ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ ಮಾತನಾಡಿ, ದಿವಂಗತ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಗರೀಬಿ ಹಠಾವೋ ಮೂಲಕ ದೇಶದ ಬಡ ಜನರ ಆಶಾಕಿರಣವಾಗಿ ಹೊರಹೊಮ್ಮಿದರು. ಅದೇ ರೀತಿ ದಿವಂಗತ ರಾಜೀವ್‌ ಗಾಂಧಿಯೂ ಸಹ ನೂತನ ತಂತ್ರಜ್ಞಾನವನ್ನು ಜಾರಿಗೆ ತರುವ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ರೂವಾರಿಯಾದರು. ಕಾಂಗ್ರೆಸ್ ಪಕ್ಷದ ಎಲ್ಲಾ ಅಗ್ರಗಣ್ಯ ನಾಯಕರು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ನಾವೆಲ್ಲರೂ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಡೆಯೋಣವೆಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಅನ್ವರ್‌ ಮಾಸ್ಟರ್, ಬಡಗಿಪಾಪಣ್ಣ, ನೇತಾಜಿ ಪ್ರಸನ್ನ, ನಗರಂಗೆರೆ ರಮೇಶ್, ಬಷೀರ್, ನಟರಾಜು, ವೀರಭದ್ರಿ, ಯೋಗೇಶ್ ಮುಂತಾದವರು ಉಪಸ್ಥಿತರಿದ್ದರು.

Share this article