)
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಂಗಳವಾರ ರಾಜೀವ್ ಗೌಡ ಪರ ರೆಗ್ಯೂಲರ್, ಮಧ್ಯಂತರ ಜಾಮೀನಿನ ಎರಡು ಜಾಮೀನು ಅರ್ಜಿಗಳನ್ನು ವಕೀಲ ವಿವೇಕ್ ಸುಬ್ಬಾರೆಡ್ಡಿ ಸಲ್ಲಿಸಿದ್ದರು. ನಿನ್ನೆ ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ರೆಗ್ಯೂಲರ್ ಜಾಮೀನು ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಗಿತ್ತು.
ಇಂದು ಆರೋಪಿ ರಾಜೀವ್ ಗೌಡ ಅನುಪಸ್ಥಿತಿಯಲ್ಲಿ ನ್ಯಾಯಾಧೀಶರು ವಿಚಾರಣೆ ಆರಂಭಿಸಿದಾಗ ಆರೋಪಿ ಪರ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ವಾದ ಮಂಡಿಸಿ, ಆರೋಪಿ ಈಗಾಗಲೇ ಕ್ಷಮೆ ಕೂಡ ಕೇಳಿದ್ದಾರೆ. ಘಟನೆ ಆಗಿರೋದು ಜ. 12ಕ್ಕೆ, ಆದರೆ ದೂರು ದಾಖಲಾಗಿರೋದು ಜ. 14ಕ್ಕೆ. ಈ ಎರಡು ದಿನದಲ್ಲಿ ದೂರುದಾರೆ ಅಮೃತಾ ಗೌಡ ಹಾಗೂ ಆರೋಪಿ ರಾಜೀವ್ ಗೌಡರ ನಡುವೆ ಸಂಧಾನ ಕೂಡ ನಡೆದಿದೆ. ಆದರೂ ದೂರುದಾರರು ಉದ್ದೇಶ ಪೂರ್ವಕವಾಗಿ ದೂರು ನೀಡಿದ್ದಾರೆ. ಇಲ್ಲಿ ರಾಜಕೀಯ ಶಕ್ತಿಗಳ ಕೈವಾಡ ಕೂಡ ಇದೆ. ರಾಜಕೀಯ ಒತ್ತಡದಿಂದ ತಡವಾಗಿ ದೂರು ನೀಡಿದ್ದಾರೆ.ಅಂದರೆ ಇವರ ಉದ್ದೇಶವೇ ನನ್ನ ಕಕ್ಷೀದಾರ ರಾಜೀವ್ ಗೌಡರನ್ನು ಜೈಲಿಗೆ ಹಾಕಬೇಕು. ಅವರನ್ನು ರಾಜಕೀಯವಾಗಿ ಮುಗಿಸ ಬೇಕು ಅಂತ. ಹೀಗಾಗಿಯೇ ಬಿಎನ್ಎಸ್ 132 ಸ್ಸೆಕ್ಷನ್ ಸೇರಿದ್ದಾರೆ. ಬಿಎನ್ಎಸ್ 132ನೇ ಸ್ಸೆಕ್ಷನ್ ನಲ್ಲಿ ಆರೋಪಿ ಮುಖಾಮುಖಿಯಾಗಿ ಬೆದರಿಕೆ ಹಾಕಿರಬೇಕು ಅಥವಾ ವಿಡಿಯೋ ಕಾಲ್ ಮುಖಾಂತರ ಬೆದರಿಸಿರಬೇಕು. ಇದ್ಯಾವ ಘಟನೆಯೂ ನಡೆದಿಲ್ಲ. ಉಳಿದ ಎಲ್ಲಾ ಸ್ಸೆಕ್ಷನ್‌ಗಳು ಜಾಮೀನು ನೀಡುವಂತಹವೇ ಆಗಿವೆ ಹೀಗಾಗಿ ರೆಗ್ಯೂಲರ್ ಜಾಮೀನು ಕೊಡಿ. ಯಾವುದೇ ಕಂಡೀಷನ್ ಹಾಕಿದರೂ ಸರಿ. ಅದಕ್ಕೆ ಸಿದ್ದರಾಗಿದ್ದಾರೆ. ನನ್ನ ಕಕ್ಷಿದಾರರು ಸಮಾಜ ಸೇವೆ ಮಾಡಿ ಕೊಂಡು ರಾಜಕೀಯದಲ್ಲಿದ್ದಾರೆ. ದಯವಿಟ್ಟು ಅವರ ಸಾರ್ವಜನಿಕ ಜೀವನ, ಸಾಮಾಜಿಕ ಸ್ಥಿತಿ, ಇದೆಲ್ಲ ನೋಡಿ ಜಾಮೀನು ಕೊಡಿ ಎಂದು ಮನವಿ ಮಾಡಿದರು.
ಸಹಾಯಕ ಸರ್ಕಾರಿ ಅಭಿಯೋಜಕ ಮಹಮ್ಮದ್ ಖಾಜಾ ಅವರು ಇದಕ್ಕೆಲ್ಲಾ ವಿರೋಧಿಸಿ, ಆರೋಪಿಯ ಮೊಬೈಲ್ ಇನ್ನೂ ಸೀಜ್ ಆಗಿಲ್ಲ. 12 ದಿನಗಳಿಂದ ಸಾಕಷ್ಟು ಕಡೆಗಳಲ್ಲಿ ತಲೆಮರೆಸಿಕೊಂಡಿದ್ದಾರೆ. ರಾಜೀವ್ ಗೌಡ ಹೋಗಿರುವ ಎಲ್ಲಾ ಕಡೆ ಹೋಗಿ ಮಹಜರು ಮಾಡಬೇಕಿದೆ. ಆರೋಪಿ ವಿರುದ್ದ ಬಿಎನ್ಎಸ್ 132 ಸ್ಸೆಕ್ಷನ್ ಹಾಕಲಾಗಿದೆ ಅಂತ ಇದರಲ್ಲಿ ಮಾಹಿತಿ ಇದೆ. ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರನ್ನು ಅಷ್ಟು ಕೆಟ್ಟದಾಗಿ ಇವರು ಮಾತನಾಡಿದ್ದಾರೆ. ಇದನ್ನು ಎಲ್ಲರ ಮುಂದೆ ಹೇಳಲು ಆಗಲ್ಲ ನೀವೆ ನೋಡಿ ಎಂದು ದಾಖಲೆಯನ್ನು ಜಡ್ಜ್ ಗೆ ನೀಡಿ, ಆರೋಪಿ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಸಾಕ್ಷ್ಯ ನಾಶಪಡಿಸೊ ಸಂಭವ ವಿರುವುದರಿಂದ ಜಾಮೀನು ನೀಡ ಬಾರದೆಂದು ಮನವಿ ಮಾಡುವ ಮೂಲಕ ಆರೋಪಿ ರಾಜೀವ್ ಗೌಡನನ್ನು ಪೊಲೀಸ್ ಕಸ್ಟಡಿಗೆ ನೀಡ ಬೇಕು ಎಂದು ಮನವಿ ಸಲ್ಲಿಸಿದರು .ವಾದ ವಿವಾದ ಆಲಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಮಹಮದ್ ರೋಷನ್ ಶಾ ಅವರು ಜಾಮೀನು ನಿರಾಕರಿಸಿದ್ದು, 2 ದಿನ ಪೋಲಿಸ್ ಕಷ್ಟಡಿಗೆ ನೀಡಿ, ಜನವರಿ 30 ಕ್ಕೆ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಿದರು.