ವಳಚ್ಚಿಲ್‌ ಎಕ್ಸ್‌ಪರ್ಟ್‌ನಲ್ಲಿ ರಾಜ್ಯೋತ್ಸವ

KannadaprabhaNewsNetwork |  
Published : Nov 03, 2026, 03:00 AM IST
ವಳಚ್ಚಿಲ್‌ ಎಕ್ಸ್‌ಪರ್ಟ್‌ ಪಿಯು ಕಾಲೇಜಿನಲ್ಲಿ ರಾಜ್ಯೋತ್ಸವ ಆಚರಣೆ  | Kannada Prabha

ಸಾರಾಂಶ

ಕನ್ನಡ ನಾಡು ನುಡಿ ಸಂಸ್ಕೃತಿ ಶ್ರೀಮಂತವಾದುದು. ಸಾಹಿತ್ಯ, ಶಿಲ್ಪಕಲೆ , ಶಿಕ್ಷಣ, ವೈದ್ಯಕೀಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯ ತನ್ನದೇ ಕೊಡುಗೆ ನೀಡಿದೆ ಎಂದು ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಉಡುಪ ಎಚ್. ಸಿ. ಹೇಳಿದರು.ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಮಂಗಳೂರು ; ಕನ್ನಡ ನಾಡು ನುಡಿ ಸಂಸ್ಕೃತಿ ಶ್ರೀಮಂತವಾದುದು. ಸಾಹಿತ್ಯ, ಶಿಲ್ಪಕಲೆ , ಶಿಕ್ಷಣ, ವೈದ್ಯಕೀಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯ ತನ್ನದೇ ಕೊಡುಗೆ ನೀಡಿದೆ ಎಂದು ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಉಡುಪ ಎಚ್. ಸಿ. ಹೇಳಿದರು.ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕರ್ನಾಟಕ ಶಿಲ್ಪಕಲೆಯಲ್ಲಿ ಅನನ್ಯತೆಯನ್ನು ಹೊಂದಿದೆ. ಬೇಲೂರು, ಹಳೇಬೀಡು, ಐಹೊಳೆ, ಹಂಪಿ ಇವು ನಮ್ಮ ಹೆಮ್ಮೆ. ಕನ್ನಡ ನಮ್ಮ ಜೇವನದ ಉಸಿರಾಗಬೇಕು ಎಂದವರು ಹೇಳಿದರು.ವಿದ್ಯಾರ್ಥಿಗಳು ಕನ್ನಡವನ್ನು ಉಳಿಸಿ ಬೆಳೆಸಬೇಕು. ವಿಜ್ಞಾನ ಕಲಿತು ವೈದ್ಯರಾಗಬೇಕಾದವರಿಗೆ ಕರ್ನಾಟಕದಲ್ಲಿ ಕನ್ನಡ ತಿಳಿದಿರುವುದು ಮುಖ್ಯ. ರೋಗಿಯ ಜೊತೆಗೆ ಮಾತೃಭಾಷೆಯಲ್ಲಿ ವ್ಯವಹರಿಸುವ ಮೂಲಕ ರೋಗಿಗಳ ಸಮಸ್ಯೆಗಳನ್ನು ಮನದಟ್ಟು ಮಾಡಿಕೊಳ್ಳಬಹುದು ಎಂದು ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕ ರಕ್ಷಿತ್ ಕೆ. ಹೇಳಿದರು.

ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು..

ಉಪಪ್ರಾಂಶುಪಾಲೆ(ಆಡಳಿತ) ಧೃತಿ ವಿ.ಹೆಗ್ಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜಕಿ ನಿಖಿತಾ ಅಮೀನ್, ವಸತಿ ನಿಲಯದ ಮುಖ್ಯ ಮಾರ್ಗದರ್ಶಕಿ ಅನಿತಾ ಪಿ.ಶೆಟ್ಟಿ, ಕಾರ್ಯಕ್ರಮ ನಿರ್ದೇಶಕ ಡಾ.ಶ್ರೀಕೃಷ್ಣ ಭಟ್ , ಕನ್ನಡ ವಿಭಾಗದ ಮುಖ್ಯಸ್ಥೆ ವಿಪುಲ ಬಿ. ಶೆಟ್ಟಿ, ಕನ್ನಡ ವಿಭಾಗದ ಉಪನ್ಯಾಸಕ ಸುರೇಶ್ ಎಡನಾಡು, ವಿದ್ಯಾಶಾರದಾ ಜಿ.ಕೆ, ಸರಸ್ವತಿ ಬಿ.ಎನ್. ಇದ್ದರು. ಅಮೋಘ್ ಬಸವರಾಜ್ ತಾಳಿಕೋಟೆ ಸ್ವಾಗತಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್‌ ಕೇಸಲ್ಲಿ ಸರ್ಕಾರ ಉಳಿಸಿಕೊಳ್ಳಲು ತರಾತುರಿಯಲ್ಲಿ ಸಿದ್ದುಗೆ ಕ್ಲೀನ್‌ ಚಿಟ್‌: ಎಚ್ಡಿಕೆ
ಮಿಸ್ಟರ್‌ ಪ್ರಿಯಾಂಕ್‌, ನಿಮ್ಮ ಬಳಿ ಟ್ರೈಲರ್‌ ಇದ್ರೆ ನಮ್ಮಲ್ಲಿ ಬಳಿ ಪೂರಾ ಪಿಚ್ಚರ್‌ ಹೈ: ಎಚ್ಡಿಕೆ