ಕರ್ನಾಟಕ ಏಕೀಕರಣ ಸುವರ್ಣ ಸಂಭ್ರಮ ಹಿನ್ನೆಲೆ 10 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

KannadaprabhaNewsNetwork | Published : Nov 18, 2023 1:00 AM

ಸಾರಾಂಶ

ಹಿರಿಯ ಸಮಾಜ ಸೇವಕ ಅನ್ವರ್‌ ಸಾಬ್ ಖಾದ್ರಿ, ಸಾಹಿತಿ, ಕವಿ, ಸಂಘಟಕ ಶಿ.ಜು.ಪಾಶ, ಕೊಡಗಿನ ಲೋಕೇಶ್ ಸಾಗರ್, ವೈದ್ಯಕೀಯ ಕ್ಷೇತ್ರದ ಸಾಧಕಿ ಡಾ. ಟಿ.ನೇತ್ರಾವತಿ, ಧಾರವಾಡದ ಎ.ಎ. ದರ್ಗಾ, ದಕ್ಷಣ ಕನ್ನಡದ ಡಾ.ಸುರೇಶ್ ನೆಗಳಗುಳಿ, ದಾಂಡೇಲಿಯ ದೀಪಾಲಿ ದೀಪಕ್ ಸಾಮಂತ, ಹೊಸನಗರದ ಡಾ. ಜಿ.ಎನ್. ಶ್ವೇತಾ, ಖಾಕಿ ಕವಿ ಮಂಜುನಾಥ್, ಸಾಮಾಜಿಕ ಕಾರ್ಯಕರ್ತ ಎಸ್.ಕೆ.ರಾಘವೇಂದ್ರ ಪ್ರಶಸ್ತಿಗೆ ಭಾಜನ

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಗೂ ಜಿಲ್ಲಾ ಘಟಕ ಶಿವಮೊಗ್ಗದ ವತಿಯಿಂದ ಕರ್ನಾಟಕ ಏಕೀಕರಣ ಸುವರ್ಣ ಸಂಭ್ರಮದ ನಿಮಿತ್ತ 2023ನೇ ಸಾಲಿನ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಶಿವಮೊಗ್ಗದ ಕವಿ ಶಿ.ಜು. ಪಾಶ ಸೇರಿದಂತೆ ಹತ್ತು ಜನರನ್ನು ಆಯ್ಕೆ ಮಾಡಲಾಗಿದ್ದು, ನ.19ರಂದು ಶಿವಮೊಗ್ಗದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವೇದಿಕೆ ರಾಜ್ಯಾಧ್ಯಕ್ಷ ಕೊಟ್ರೇಶ್ ಎನ್. ಉಪ್ಪಾರ್ ತಿಳಿಸಿದ್ದಾರೆ.

ಪ್ರಶಸ್ತಿಗೆ ಭಾಜನರಾದವರೆಂದರೆ ಹಿರಿಯ ಸಮಾಜ ಸೇವಕ ಅನ್ವರ್‌ ಸಾಬ್ ಖಾದ್ರಿ, ಸಾಹಿತಿ, ಕವಿ, ಸಂಘಟಕ ಶಿ.ಜು.ಪಾಶ, ಕೊಡಗಿನ ಲೋಕೇಶ್ ಸಾಗರ್, ವೈದ್ಯಕೀಯ ಕ್ಷೇತ್ರದ ಸಾಧಕಿ ಡಾ. ಟಿ.ನೇತ್ರಾವತಿ, ಧಾರವಾಡದ ಎ.ಎ. ದರ್ಗಾ, ದಕ್ಷಣ ಕನ್ನಡದ ಡಾ.ಸುರೇಶ್ ನೆಗಳಗುಳಿ, ದಾಂಡೇಲಿಯ ದೀಪಾಲಿ ದೀಪಕ್ ಸಾಮಂತ, ಹೊಸನಗರದ ಡಾ. ಜಿ.ಎನ್. ಶ್ವೇತಾ, ಖಾಕಿ ಕವಿ ಮಂಜುನಾಥ್, ಸಾಮಾಜಿಕ ಕಾರ್ಯಕರ್ತ ಎಸ್.ಕೆ.ರಾಘವೇಂದ್ರ.

ನ.19ರ ಬೆಳಗ್ಗೆ 10 ಗಂಟೆಯಿಂದ ಕರ್ನಾಟಕ ಸಂಘದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಇದರ ಜೊತೆಗೆ ಐದು ಭಾಷೆಗಳ ಕರುನಾಡ ಸಾಮರಸ್ಯ ಕಾವ್ಯ ಸಮ್ಮಿಲನ ಕೂಡ ನಡೆಯಲಿದೆ. ಪಂಚಭಾಷಾ ಕವಿಗೋಷ್ಟಿಯಲ್ಲಿ ಕನ್ನಡ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಖ್ಯಾತ ಗಝಲ್ ಕವಿ ಡಾ. ಸಿದ್ದರಾಮ ಹೊನ್ಕಲ್, ಕೊಡವ ಕವಿಗೋಷ್ಟಿ ಅಧ್ಯಕ್ಷತೆಯನ್ನು ಬಹುಭಾಷಾ ಸಾಹಿತಿ ಕೊಡಗಿನ ಡಾ. ಉಳುವಂಗಡ ಕಾವೇರಿ ಉದಯ,ಬ್ಯಾರಿ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಮೂಲದ ಖ್ಯಾತ ಸಾಹಿತಿ ಬಿ.ಎಂ. ಬಶೀರ್, ತುಳುಕವಿ ಗೋಷ್ಟಿ ಅಧ್ಯಕ್ಷತೆಯನ್ನು ಮಂಗಳೂರಿನ ಕವಯತ್ರಿ ಪರಿಮಳ ಮಹೇಶ್ ರಾವ್ (ಜೀವಪರಿ) ಹಾಗೂ ಕೊಂಕಣಿ ಕವಿ ಗೋಷ್ಟಿಯ ಅಧ್ಯಕ್ಷತೆಯನ್ನು ಕಾರವಾರದ ಕೊಂಕಣಿ ಸಾಹಿತಿ ನಾಗೇಶ ಮ.ಅಣ್ವೇಕರ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ನ.19ರ ಬೆಳಗ್ಗೆ 10 ಗಂಟೆಗೆ ಸಾಹಿತಿ ಧಾರವಾಡದ ರಂಜಾನ್ ದರ್ಗಾ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ವೇದಿಕೆ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ವಹಿಸಲಿದ್ದಾರೆ. ಪ್ರಶಸ್ತಿಗಳನ್ನು ಹಿರಿಯ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಪ್ರದಾನ ಮಾಡಲಿದ್ದಾರೆ.

- - -

Share this article