ಸ್ವಾತಂತ್ರ್ಯ ಹೋರಾಟಗಾರ ಪುಟ್ಟಸ್ವಾಮಿಗೌಡರಿಗೆ ರಾಜ್ಯೋತ್ಸವ ಪ್ರಶಸ್ತಿ

KannadaprabhaNewsNetwork | Updated : Nov 01 2023, 01:02 AM IST

ಸಾರಾಂಶ

ಕನಕಪುರ: ರಾಜ್ಯ ಸರ್ಕಾರ ಕೊಡ ಮಾಡುವ ಕನ್ನಡ ರಾಜ್ಯೋತ್ಸವ ಪುರಸ್ಕಾರಕ್ಕೆ ಸ್ವಾತಂತ್ರ್ಯ ಹೋರಾಟಗಾರ ಪುಟ್ಟಸ್ವಾಮಿಗೌಡ ಭಾಜನರಾಗಿದ್ದಾರೆ. 85 ವರ್ಷ ವಯಸ್ಸಿನ ಪುಟ್ಟಸ್ವಾಮಿಗೌಡರು ಮೂಲತಃ ದೊಡ್ಡ ಆಲಹಳ್ಳಿ ಗ್ರಾಮದವರು. ತಂದೆ ಪಟೇಲ್‌ ದೇವೇಗೌಡರು ಕೃಷಿಕರಾಗಿದ್ದರು.
ಕನಕಪುರ: ರಾಜ್ಯ ಸರ್ಕಾರ ಕೊಡ ಮಾಡುವ ಕನ್ನಡ ರಾಜ್ಯೋತ್ಸವ ಪುರಸ್ಕಾರಕ್ಕೆ ಸ್ವಾತಂತ್ರ್ಯ ಹೋರಾಟಗಾರ ಪುಟ್ಟಸ್ವಾಮಿಗೌಡ ಭಾಜನರಾಗಿದ್ದಾರೆ. 85 ವರ್ಷ ವಯಸ್ಸಿನ ಪುಟ್ಟಸ್ವಾಮಿಗೌಡರು ಮೂಲತಃ ದೊಡ್ಡ ಆಲಹಳ್ಳಿ ಗ್ರಾಮದವರು. ತಂದೆ ಪಟೇಲ್‌ ದೇವೇಗೌಡರು ಕೃಷಿಕರಾಗಿದ್ದರು. ಬಾಲ್ಯದಿಂದಲೇ ದೇಶಭಕ್ತಿ ಹಾಗೂ ಸ್ವಾತಂತ್ರ್ಯ ಹೋರಾಟ ಗಾರರ ಮನೋಭಾವನೆಯನ್ನು ಬೆಳೆಸಿಕೊಂಡ ಪುಟ್ಟಸ್ವಾಮಿಗೌಡರು ಕರ್ಮಯೋಗಿ ಪೂಜ್ಯ ಎಸ್ .ಕರಿಯಪ್ಪನವರ ವಿದ್ಯಾಸಂಸ್ಥೆ ಯಲ್ಲಿ ಕಾಲೇಜು ಶಿಕ್ಷಣ ಮುಗಿಸಿದರು. ಅಂದಿನ ದಿನ ಗಳಲ್ಲೇ ಹಲವು ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗಿಯಾಗುವ ಮೂಲಕ ತಮ್ಮ ದೇಶ ಪ್ರೇಮವನ್ನು ಮೆರೆದಿದ್ದರು. ಕಾಲೇಜು ದಿನಗಳ ನಂತರ ಪೂಜ್ಯ ಶ್ರೀ ಎಸ್ ಕರಿಯಪ್ಪನವರ ಆದರ್ಶ, ತತ್ವಗಳನ್ನು ಅಳವಡಿಸಿಕೊಂಡು ಅವರ ಕಟ್ಟಾ ಅನುಯಾಯಿಯಾಗಿ ತಾಲೂಕಿನಲ್ಲಿ ನಡೆದಂತಹ ಹೋರಾಟಗಳಲ್ಲಿ ಭಾಗಿಯಾಗುವುದರ ಜೊತೆಗೆ ದೆಹಲಿಯಲ್ಲಿ ನಡೆದಂತ ಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿದ್ದರು. ನಂತರದ ದಿನಗಳಲ್ಲಿ ತಮ್ಮ ಸ್ವಗ್ರಾಮದಲ್ಲಿ ಕೃಷಿಕ ವೃತ್ತಿ ಯನ್ನು ನಿರ್ವಹಿಸಿಕೊಂಡು ಬರುತ್ತಿರುವ ಇವರ ಹೋರಾಟ ಹಾಗೂ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದೆ. ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರ, ತಹಸೀಲ್ದಾರ್ ಸ್ಮಿತಾ ರಾಮು ಸೇರಿದಂತೆ ಹಿರಿಯ ಅಧಿಕಾರಿಗಳು ಪುಟ್ಟಸ್ವಾಮಿ ಗೌಡರವರ ಮನೆಗೆ ಭೇಟಿ ನೀಡಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. 31ಕೆಆರ್ ಎಂಎನ್‌ 13.ಜೆಪಿಜಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಪುಟ್ಟಸ್ವಾಮಿಗೌಡ.

Share this article