ಕುದೂರು: ಗ್ರಾಮದ ಡಾ.ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಭೈರವನದುರ್ಗದ ತುತ್ತ ತುದಿಯ ಮೇಲೆ 70 ಅಡಿ ಅಗಲದ ಕನ್ನಡ ಬಾವುಟವನ್ನು ಹಾರಿಸಿ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಯುವ ಮುಖಂಡ ಜಗದೀಶ್ ಮಾತನಾಡಿ, ಕೆಂಪೇಗೌಡರ ಆಳ್ವಿಕೆ ಮಾಡಿದ ಕೋಟೆಗಳಲ್ಲಿ ಕುದೂರು ಭೈರವನಗರ್ದುವೂ ಒಂದು. ಈ ದುರ್ಗವನ್ನು ಸಂರಕ್ಷಿಸುವ ಕೆಲಸವಾಗಬೇಕಾಗಿದೆ. ಡಾ.ರಾಜ್‌ಕುಮಾರ್ ಮತ್ತು ಪುನೀತ್‌ರಾಜ್‌ಕುಮಾರ್ ಸಂಘದ ಯುವಕರುಗಳು ಇಲ್ಲಿ ಬಾವುಟವನ್ನು ಹಾರಿಸಿ ಕನ್ನಡ ನಾಡಿನ ನೆಲ ಜಲ ನುಡಿ ಸಂರಕ್ಷಿಸುವ ಕೆಲಸವನ್ನು ಅಳಿಲು ಸೇವೆಯಂತೆ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದು ಹೇಳಿದರು.1ಕೆಆರ್ ಎಂಎನ್ 4.ಜೆಪಿಜಿ
ಕುದೂರು ಗ್ರಾಮದ ಭೈರವನದುರ್ಗದ ತುತ್ತತುದಿಯ ಮೇಲೆ ಡಾ.ರಾಜ್‌ಕುಮಾರ್ ಮತ್ತು ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ 70 ಅಡಿ ಉದ್ದದ ಕನ್ನಡ ಬಾವುಟವನ್ನು ಹಾರಿಸಿ 70 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.