ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡ ಭಾಷೆ ಮಾತನಾಡುವ ಪ್ರದೇಶಗಳಾದ ಮುಂಬೈ, ಮದ್ರಾಸ್, ಹೈದರಾಬಾದ್ ಮತ್ತು ಮೈಸೂರು ಸಂಸ್ಥಾನಗಳಲ್ಲಿ ಹರಡಿಕೊಂಡಿದ್ದ ನಾಡನ್ನು ಒಂದುಗೂಡಿಸಲು ಅಲೂರು ವೆಂಕಟರಾಯರು. ಕೆಂಗಲ್ ಹನುಮಂತಯ್ಯ, ಎಸ್.ನಿಜಲಿಂಗಪ್ಪ ಹಾಗೂ ಸಾವಿರಾರು ಕನ್ನಡಾಭಿಮಾನಿಗಳು ‘ಒಂದು ನಾಡು, ಒಂದು ಭಾಷೆ, ಒಂದು ಕರ್ನಾಟಕ’ ಎಂಬ ಘೋಷಣೆಯನ್ನು ಮೊಳಗಿಸಿ ಏಕೀಕರಣದ ಫಲವಾಗಿ ರಾಜ್ಯ ಉದಯಿಸಿತು. ಇದರ ಫಲವಾಗಿ ಇಂದು ನಾವು 70ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ ಎಂದು ಹೇಳಿದರು.ರಾಜ್ಯಕ್ಕೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಂಪರೆ ಇದ್ದು 1200 ವರ್ಷಗಳಷ್ಟು ಪ್ರಾಚೀನ ಇತಿಹಾಸ ಹೊಂದಿದೆ. ಪಂಪ, ರನ್ನ, ಜನ್ನರಿಂದ ಹಿಡಿದು ಕುವೆಂಪು, ಬೇಂದ್ರೆ, ಗೋವಿಂದ ಪೈ, ಟಿ.ಪಿ.ಕೈಲಾಸಂ, ಕಾರಂತರಿಂದ ಚಂದ್ರಶೇಖರ ಕಂಬಾರ್ ತನಕ. ಬಸವಣ್ಣನ ಅನುಭವ ಮಂಟಪದಿಂದ ಹಿಡಿದು, ಕುವೆಂಪುವಿನ ವಿಶ್ವಮಾನವತೆಯ ಸಂದೇಶದವರೆಗೆ ನಮ್ಮ ನಾಡಿಗೆ ಹೆಮ್ಮೆ ತಂದಿವೆ. ಸಂಗೀತದ ನಾಡು ಕೂಡ ಹೌದು. ತ್ಯಾಗರಾಜ, ಪುರಂದರ ದಾಸ, ಕನಕದಾಸರಿಂದ ಪ್ರಾರಂಭವಾದ ಸಂಪ್ರದಾಯದಿಂದ ಇಂದಿನ ಶಾಸ್ತ್ರೀಯ ಮತ್ತು ಜನಪದ ಸಂಗೀತದವರೆಗೆ ಎಲ್ಲೆಡೆ ಕನ್ನಡದ ಶಬ್ದ, ತಾಳ ಮತ್ತು ಭಾವ ಹರಿದಾಡುತ್ತಿದೆ ಎಂದರು.
ಕರ್ನಾಟಕ ಅಭಿವೃದ್ಧಿಯ ಮಾರ್ಗದಲ್ಲಿ ಮುಂದಡಿಯಿಟ್ಟಿದೆ. ಆದರೆ ಇನ್ನೂ ಅಭಿವೃದ್ಧಿ ಆಗಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣ, ಆರೋಗ್ಯ, ಕೃಷಿ, ಕುಡಿಯುವ ನೀರು, ಯುವಕರಿಗೆ ಉದ್ಯೋಗ ದೊರೆಯುವಂತಾಗಬೇಕು. ದಾವಣಗೆರೆ ನಗರಕ್ಕೆ ವಿವಿಧ ಐಟಿ, ಬಿಟಿ ಕಂಪನಿಗಳನ್ನು ಆಹ್ವಾನಿಸಲಾಗಿದೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡುವ ಪ್ರಯತ್ನ ಭರರದಿಂದ ಸಾಗಿದ್ದು, ಮುಂದಿನ ದಿನಗಳಲ್ಲಿ ಸಾಕಾರಗೊಳ್ಳುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.