ಇಂದು ರಕ್ಷಾ ಬಂಧನ: ರಾಖಿ ಖರೀದಿ ಜೋರು

KannadaprabhaNewsNetwork |  
Published : Aug 19, 2024, 12:56 AM IST
ರಕ್ಷಾ ಬಂಧನ ಹಿನ್ನೆಲೆಯಲ್ಲಿ ಬೆಳಗಾವಿ ಮಾರುಕಟ್ಟೆಯಲ್ಲಿ ರಾಖಿ ಖರೀದಿ ಭರಾಟೆ ಜೋರಾಗಿತ್ತು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಇಂದು ರಕ್ಷಾ ಬಂಧನ. ಹಿಂದು ಸಂಪ್ರದಾಯದ ಪವಿತ್ರ ಆಚರಣೆ, ಅಣ್ಣ-ತಂಗಿಯರ ಬಾಂಧವ್ಯದ ಪ್ರತೀಕವಾದ ನೂಲ ಹುಣ್ಣಿಮೆ ರಕ್ಷಾ ಬಂಧನ ಹಿನ್ನೆಲೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಭಾನುವಾರ ಮಹಿಳೆಯರು ಮತ್ತು ಯುವತಿಯರಿಂದ ರಾಖಿ ಖರೀದಿ ಭರಾಟೆ ಜೋರಾಗಿತ್ತು. ಶಾಲಾ-ಕಾಲೇಜು ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು ಸಹೋದರರಿಗೆ ಕಟ್ಟಲು ನಾನಾ ಬಗೆಯ ರಾಖಿ ಖರೀದಿಸುವಲ್ಲಿ ಮಗ್ನರಾಗಿದ್ದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇಂದು ರಕ್ಷಾ ಬಂಧನ. ಹಿಂದು ಸಂಪ್ರದಾಯದ ಪವಿತ್ರ ಆಚರಣೆ, ಅಣ್ಣ-ತಂಗಿಯರ ಬಾಂಧವ್ಯದ ಪ್ರತೀಕವಾದ ನೂಲ ಹುಣ್ಣಿಮೆ ರಕ್ಷಾ ಬಂಧನ ಹಿನ್ನೆಲೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಭಾನುವಾರ ಮಹಿಳೆಯರು ಮತ್ತು ಯುವತಿಯರಿಂದ ರಾಖಿ ಖರೀದಿ ಭರಾಟೆ ಜೋರಾಗಿತ್ತು. ಶಾಲಾ-ಕಾಲೇಜು ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು ಸಹೋದರರಿಗೆ ಕಟ್ಟಲು ನಾನಾ ಬಗೆಯ ರಾಖಿ ಖರೀದಿಸುವಲ್ಲಿ ಮಗ್ನರಾಗಿದ್ದರು. ಅಕ್ಕ-ತಂಗಿಯರ ಒತ್ತಾಸೆಯಂತೆ ಹಲವು ಹುಡುಗರು ರಾಖಿ ಖರೀದಿಗೆ ಅವರೊಂದಿಗೆ ಸಾಥ್‌ ನೀಡುತ್ತಿದ್ದರು.

ನಗರದ ಗಣಪತಿ ಗಲ್ಲಿ, ಕಾಕತಿವೇಸ್‌, ಶನಿವಾರಕೂಟ, ರವಿವಾರ ಪೇಟೆ, ಮಾರುತಿ ಗಲ್ಲಿ, ಪಾಂಗೋಳ ಗಲ್ಲಿ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ರಾಖಿ ವ್ಯಾಪಾರ ಜೋರಿಗಿ ನಡೆಯುತ್ತಿತ್ತು. ಪ್ರಮುಖ ಸ್ಟೇಷನರಿ ಅಂಗಡಿ, ತಳ್ಳುಗಾಡಿಗಳು ಸೇರಿದಂತೆ ವಿವಿಧೆಡೆಗಳಲ್ಲಿ ವಿವಿಧ ಸಮೂನೆಯ ತಹರೇವಾರಿ ಕಲರ್‌ಪುಲ್‌ ರಾಖಿಗಳ ಮಾರಾಟ ಜೋರಾಗಿದ್ದು, ರಾಖಿ ಖರೀದಿಸಲು ಹೆಂಗಳೆಯರು ಮುಗಿ ಬಿದ್ದಿದ್ದರು.

ಪ್ರಸಕ್ತ ವರ್ಷವೂ ಮಾರುಕಟ್ಟೆಗೆ ನಾನಾ ಬಗೆಯ ರಾಖಿಗಳು ಲಗ್ಗೆ ಇಡುತ್ತವೆ. ಸ್ಟೋನ್‌, ಶ್ರೀರಕ್ಷಾ, ಶುಭ, ಕ್ರೇಜಿ, ತಾರಾ ಹಾಗೂ ಡೈಮಂಡ್‌ ಹೆಸರಿನ ರಾಖಿಗಳು ಎಲ್ಲರನ್ನು ಆಕರ್ಷಿಸುತ್ತಿವೆ. ತಲಾ ರಾಖಿಯೊಂದಕ್ಕೆ ಕನಿಷ್ಠ ₹ 5 ರಿಂದ ಗರಿಷ್ಠ ₹ 500 ಗಳವರೆಗೆ ಮಾರುಕಟ್ಟೆಯಲ್ಲಿ ದರ ಕಂಡುಬರುತ್ತಿದೆ.

ಸಾಂಪ್ರದಾಯಿಕ ಶೈಲಿಯ ರೇಷ್ಮೆ ರಾಖಿಗೆ ಬೇಡಿಕೆ ಹೆಚ್ಚಿದ್ದು, ಸಹಜವಾಗಿಯೇ ಅವುಗಳ ಬೆಲೆಯೂ ದುಬಾರಿಯಾಗಿದೆ. ಸ್ಪಂಜ್‌, ವಿವಿಧ ಬಗೆಯ ದಾರ, ರುದ್ರಾಕ್ಷಿ, ಮಣಿ, ಹರಳು ಪೋಣಿಸಿರುವ ರಾಖಿಗಳು ಹೆಚ್ಚಾಗಿ ಕಾಣುತ್ತಿವೆ. ಮಕ್ಕಳಿಗೆ ಇಷ್ಟವಾಗುವ ನಕ್ಷತ್ರಾಕಾರಾದ ರಾಖಿ ಹೆಚ್ಚಾಗಿ ಮಾರಾಟವಾಗುತ್ತಿದೆ.

ಸಿಹಿ, ಉಡುಗೊರೆ ಖರೀದಿ: ಸಹೋದರರ ಸಮೃದ್ಧಿ, ಸ್ವರಕ್ಷಣೆ ಕೋರಿ ರಾಖಿ ಕಟ್ಟುವ ಹೆಣ್ಣುಮಕ್ಕಳಿಗೆ ಅಣ್ಣ-ತಮ್ಮಂದಿರು ಉಡುಗೊರೆ ನೀಡುವುದು ಸಂಪ್ರದಾಯ. ರಾಖಿ ಕಟ್ಟುವ ವೇಳೆ ಪೂಜೆ ಸಲ್ಲಿಸಿ, ಸಿಹಿ ನೀಡುವುದು ಪದ್ಧತಿಯ ಒಂದು ಭಾಗ. ಹೀಗಾಗಿ ರಕ್ಷಾ ಬಂಧನ ಹಬ್ಬದ ಹಿನ್ನೆಲೆ ರಾಖಿಯೊಂದಿಗೆ ಸಿಹಿ, ವಿವಿಧ ಉಡುಗೊರೆಗಳ ಖರೀದಿ ಭರಾಟೆಯೂ ಜೋರಾಗಿತ್ತು.

ಕೆಲವರು ಬೇಕರಿಗಳಲ್ಲಿ ಪೇಡೆ, ಲಡ್ಡು, ಜಾಮೂನು, ಜಿಲೇಬಿ ಖರೀದಿಯಲ್ಲಿ ಮುಳುಗಿದ್ದರು. ಇನ್ನೂ ಕೆಲವರು ಮನೆಯಲ್ಲೇ ಅಗತ್ಯ ಸಿಹಿ ತಯಾರಿಸಲು ಸಿದ್ಧತೆ ನಡೆಸಿದ್ದರು. ಸಹೋದರಿಯರಿಗೆ ನೀಡಲು ಯುವಕರು, ಹಿರಿಯರು ಹೊಸ ಬಟ್ಟೆ, ಚಿನ್ನಾಭರಣ, ಮೊಬೈಲ್‌ನಂಥ ಉಡುಗೊರೆ ಖರೀದಿಸುತ್ತಿದ್ದದ್ದು ಕಂಡುಬಂದಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಇನ್ಮುಂದೆ ‘ಸಮಗ್ರ ಪ್ರಗತಿ ಪತ್ರ’
ಇಂದಿನಿಂದ ಮೇ 13ರವರೆಗೆ ದ್ವಿತೀಯ ಪಿಯು ಪರೀಕ್ಷೆ -2