ಕಟೀಲು ಕ್ಷೇತ್ರಕ್ಕೆ ಚಿತ್ರನಟಿ ರಕ್ಷಿತಾ ಭೇಟಿ

KannadaprabhaNewsNetwork |  
Published : Oct 21, 2023, 12:30 AM IST
೧೧೧ | Kannada Prabha

ಸಾರಾಂಶ

ಕಟೀಲು ದೇವಸ್ಥಾನಕ್ಕೆ ನಟಿ ರಕ್ಷಿತಾ ಪ್ರೇಮ್ಮ್‌ ಭೇಟಿ

ಮೂಲ್ಕಿ: ಶರನ್ನವರಾತ್ರಿಯ ಲಲಿತಾ ಪಂಚಮಿಯ ಶುಭದಿನದಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಚಿತ್ರ ನಟಿ ರಕ್ಷಿತಾ ಪ್ರೇಮ್ ಭೇಟಿ ನೀಡಿ ದುರ್ಗೆಗೆ ಸೀರೆ ಸಮರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಳದ ವತಿಯಿಂದ ರಕ್ಷಿತಾ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ರಕ್ಷಿತಾ, ಮುಂದಿನ ತಿಂಗಳು ಹೊಸ ಚಲನಚಿತ್ರ ಆರಂಭಿಸುವ ನಿರೀಕ್ಷೆಯಿದೆ. ಮುಂದಿನ ಮೇ ತಿಂಗಳಲ್ಲಿ ಚಲನಚಿತ್ರ ತೆರೆ ಕಾಣುವ ನೀರಿಕ್ಷೆ ಇದೆ ಎಂದರು. ಕಟೀಲು ಶ್ರೀದೇವಿ ಅನುಗ್ರಹವಿಲ್ಲದೆ ಯಾವುದೇ ಕಾರ್ಯಗಳು ಸಿದ್ಧಿಯಾಗುವುದಿಲ್ಲ ಎಂದು ಹೇಳಿದ ಅವರು, ಲಲಿತಾ ಪಂಚಮಿಯ ನವರಾತ್ರಿಯ ಈ ಶುಭದಿನದಂದು ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಅರ್ಚಕ ವೃಂದ, ಭಕ್ತಾದಿಗಳು ಉಪಸ್ಥಿತರಿದ್ದರು. ಈ ತಿಂಗಳಲ್ಲಿ ಎರಡನೇ ಬಾರಿ ನಟಿ ರಕ್ಷಿತಾ ಕಟೀಲು ದೇವಳಕ್ಕೆ ಭೇಟಿ ನೀಡಿದರು. ಚಿತ್ರ:20 ಕಟೀಲು ರಕ್ಷಿತಾ

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ