ಅನುಭವ ಮಂಟಪದಲ್ಲಿ ಐದು ದಿನ ಆಯೋಜನೆ । ಸಿದ್ದತೆ ಪರಿಶೀಲಿಸಿದ ಶಿವಬಸವಸ್ವಾಮೀಜಿ ಕನ್ನಡಪ್ರಭವಾರ್ತೆ ಚಿತ್ರದುರ್ಗ ಮಧ್ಯ ಕರ್ನಾಟಕದ ಜನಪ್ರಿಯ ದಸರಾವೆಂದೇ ಖ್ಯಾತಿ ಪಡೆದ ಚಿತ್ರದುರ್ಗ ಮುರುಘಾಮಠದ ಶರಣ ಸಂಸ್ಕೃತಿ ಉತ್ಸವ ಅ.21 ರಿಂದ 25 ವರೆಗೆ ನಡೆಯಲಿದ್ದು, ಉತ್ಸವ ಸಮಿತಿ ಗೌರವಾಧ್ಯಕ್ಷ ಅಥಣಿ ಗಚ್ಚಿನ ಮಠದ ಶಿವಬಸವ ಮಹಾಸ್ವಾಮಿಗಳು, ಎಸ್.ಜೆಎಂವಿದ್ಯಾಪೀಠದ ಕಾಯನಿರ್ವಾಣಾಧಿಕಾರಿ ಎಂ.ಭರತ್ ಕುಮಾರ್ ಶುಕ್ರವಾರ ಪೂರ್ವ ಸಿದ್ದತೆ ಪರಿಶೀಲಿಸಿದರು. ಇಂದು ಬೆಳಗ್ಗೆ 10ಕ್ಕೆ ಶ್ರೀಮಠದ ಅನುಭವ ಮಂಟಪ ಅವರಣದಲ್ಲಿ ಬಸವತತ್ವ ಧ್ವಜಾರೋಹಣ ನೆರವೇರಲಿದ್ದು, ಹುಣಸೇಮಠದ ಚನ್ನಬಸವ ಸ್ವಾಮೀಜಿ, ಶ್ರೀ ಗುರು ಬಸವೇಶ್ವರ ಸಂಸ್ಥಾನಮಠದ ಶಿವಾನಂದ ಶ್ರೀಗಳು ಸಮ್ಮುಖ ವಹಿಸುವರು. ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಧ್ವಜಾರೋಹಣ ನೆರವೇರಿಸಲಿದ್ದು, ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಆಗಮಿಸುವರು. ಬೆಳಗ್ಗೆ 11ಕ್ಕೆ ಕೃಷಿಮೇಳ, ಕೃಷಿ ಮತ್ತು ಕೈಗಾರಿಕೆ ವಸ್ತು ಪ್ರದರ್ಶನ ಏರ್ಪಡಿಸಿದ್ದು, ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಉಧ್ಘಾಟಿಸುವವರು. ಹೆಬ್ಬಾಳು ಶ್ರೀ ಮಹಾಂತ ರುದ್ರೇಶ್ವರಮಠದ ಮಹಾಂತ ರುದ್ರೇಶ್ವರ ಸ್ವಾಮಿಗಳು, ರಾವಂದೂರು ಶ್ರೀ ಮುರುಘಾ ಮಠದ ಮೋಕ್ಷಪತಿ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಟಿ.ರಘುಮೂರ್ತಿ, ಮಾಜಿ ಸಚಿವ ಎಚ್ ಆಂಜನೇಯ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ನಿರ್ದೇಶಕರಾದ ಡಾ.ವಿ.ಸದಾಶಿವ, ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ ಎಸ್ ಆಲೂರು, ಬೆಂಗಳೂರಿನ ಕೆಪಿಟಿಸಿಎಲ್ ನಿವೃತ್ತ ನಿರ್ದೇಶಕ ಕೆ.ವಿ.ಶಿವಕುಮಾರ್, ಬಿಜೆಪಿ ಯುವ ಮುಂಖಡ ಜಿ.ಎಸ್ ಅನಿತ್ ಕುಮಾರ್, ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಶ್ರೀ ಸಿದ್ದವೀರಪ್ಪ ಈಚಘಟ್ಟ, ರಾಜ್ಯ ರೈತ ಸಂಘ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕ್ರಪ್ಪ ಭಾಗವಹಿಸುವರು. ಅರ್.ಎ.ದಯಾನಂದಮೂರ್ತಿ ಹಾಗೂ ಕೆ.ಎಂ.ವಿಜಯ ಇವರನ್ನು ಸನ್ಮಾನಿಸಲಾಗುವುದು. ಸಾಂಸ್ಕೃತಿಕ ಸಂಭ್ರಮದಲ್ಲಿ ಕವಡೊಳ್ಳಿ ಶ್ರೀ ಸಿದ್ದಾರೂಢ ಹೂಗಾರ ತಂಡದವರಿಂದ ಮಲ್ಲಕಂಬ ಪ್ರದರ್ಶನ, ಚಿತ್ರದುರ್ಗದ ನಾಟ್ಯ ರಂಜಿನಿ ನೃತ್ಯ ಕಲಾಕೇಂದ್ರ, ರಂಗಭಂಢಾರ ಕಲಾ ಸಂಘ ಇವರುಗಳಿಂದ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಸಂಜೆ 6.30ಕ್ಕೆ ಬಸವತತ್ವ ಸಮಾವೇಶದಲ್ಲಿ ಇಳಕಲ್ ಶ್ರೀ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಮಹಾಸ್ವಾಮಿಗಳು, ತಿಪಟೂರು ಶ್ರೀ ಷಡಕ್ಷರಿ ಮಠದ ರುದ್ರಮುನಿ ಸ್ವಾಮಿಗಳು, ಭೋವಿ ಗುರುಪೀಠದ ಶ್ರೀ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಸಮ್ಮುಖ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಅರಣ್ಯ ಮತ್ತು ಪರಿಸರ ಸಚಿವ ಈಶ್ವರಖಂಡ್ರೆ, ಶಾಸಕರಾದ ಕೆ.ಸಿ.ವೀರೆಂದ್ರ ಪಪ್ಪಿ, ಬಿ.ಜಿ.ಗೋವಿಂದಪ್ಪ, ಎನ್ ವೈ ಗೋಪಾಲಕೃಷ, ಮಾಜಿ ಸಂಸದ ಶ್ರೀ ಬಿ.ಎನ್ ಚಂದ್ರಪ್ಪ, ಮಾಜಿ ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿ, ಎಚ್.ಎಸ್ ಶಿವಶಂಕರ್ ಹಾಗೂ ಕಲಾವಿದರಾದ ದೊಡ್ಡಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿವರು. ವೈದ್ಯರಾದ ಬೆಳಗಾವಿ ಡಾ.ಅವಿನಾಶ್ ಕವಿ ವಿಷಯಾವಲೋಕನ ಮಾಡಲಿದ್ದು, ಶರಣ ಸಂದೇಶ ಪತ್ರಿಕೆ ಸಂಪಾದಕ ಸುಮಂಗಲ ಅಂಗಡಿ, ಬಸವಭಾರತ ಪತ್ರಿಕೆ ಸಂಪಾದಕ ಶಿವರುದ್ರಪ್ಪ ಇವರನ್ನು ಸನ್ಮಾನಿಸಲಾಗುವುದು. ಬಾಗಲಕೋಟೆ ಬಸವಕೇಂದ್ರದ ಶ್ರೀ ಅಶೋಕ ಬರಗುಂಡಿ, ಬೆಂಗಳೂರು ಬಸವಕೇಂದ್ರದ ಡಿ.ಟಿ.ಅರುಣ್ ಕುಮಾರ್, ಬೀದರ್ ಬಸವಕೇಂದ್ರದ ಸುರೇಶ ಚನಶೆಟ್ಟಿ, ಧಾರವಾಡ ಬಸವಕೇಂದ್ರದ ಈಶ್ವರ ಸಾಣಿಕೊಪ್ಪ, ಸಿದ್ದರಾಮಣ್ಣ ನಡಕಟ್ಟಿ, ಸಿಂಧಗಿ ಬಸವಕೇಂದ್ರದ ಶ್ರೀ ನಾನಾಗೌಡ ಪಾಟೀಲ, ಸಿಂಧನೂರು ಬಸವಕೇಂದ್ರದ ವೀರಭದ್ರಪ್ಪ ಕುರಕುಂದಿ, ಜಮಖಂಡಿ ಬಸವಕೇಂದ್ರದ ರವಿ ಎಡೆಹಳ್ಳಿ, ದಾವಣಗೆರೆ ಬಸವಕೇಂದ್ರದ ಎಂ.ಜಯಕುಮಾರ್ ಇವರುಗಳು ಉಪಸ್ಥಿತರಿರುವರು.