ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಸಿಪಿಎಂ ನ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಲವಂತದ ಭೂಸ್ವಾಧೀನ ಕೈಬಿಡಬೇಕು. ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಭೂ ಸುಧಾರಣಾ ಕಾಯ್ದೆ, ಎಂಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಹಿಂಪಡೆಯಬೇಕು. ಬಗರ್ ಹುಕುಂ ಹಾಗೂ ಅರಣ್ಯ ಸಾಗುವಳಿ ಮಾಡುವವರಿಗೆ ಹಕ್ಕು ಪತ್ರಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ರೈತರ ಹಿತ ಕಡೆಗಣನೆ: ರಾಜ್ಯ ಸಮಿತಿ ಸದಸ್ಯ ಎಂ,ಪಿ, ಮುನಿವೆಂಕಟಪ್ಪ ಮಾತನಾಡಿ, ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷದಲ್ಲಿ ಸುಮಾರು 2500ಕ್ಕೂ ಹೆಚ್ಚು ರೈತರು ಕೃಷಿ ಬಿಕ್ಕಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ರಾಜ್ಯ ಸರ್ಕಾರಗಳು ಬಜೆಟ್ ಮಂಡನೆಯಲ್ಲಿ ಕೃಷಿ ಹಾಗೂ ರೈತರನ್ನು ಕಡೆಗಣಿಸಿ ಕಾರ್ಪೋರೇಟ್ ಕೃಷಿಗೆ ಒತ್ತು ಹಾಕುತ್ತಿರುವ ಹಿನ್ನೆಲೆಯಲ್ಲಿ ರೈತರು ಹಾಕಿರುವ ಬಂಡವಾಳ ವಾಪಸ್ಸಾಗದೆ ನಷ್ಟಕ್ಕೆ ಸಿಲುಕಿದ ಸ್ವಾಭಿಮಾನಿಗಳು ಪರ್ಯಾಯ ವಸ್ಥೆಗಳಿಲ್ಲದೆ ಆತ್ಮಹತ್ಯೆ ಗೆ ಶರಣಾಗುವಂತಾಗಿದೆ ಎಂದು ವಿಷಾದಿಸಿದರು.ಕೃಷ್ಣಾ ನೀರು ಪಡೆಯುವಲ್ಲಿ ವಿಫಲ:
ಕೃಷ್ಣನದಿ ನೀರು ಪಡೆಯುವಲ್ಲಿ ವಿಫಲವಾಗಿದೆ. ಅವೈಜ್ಞಾನಿಕ ಯೋಜನೆಗಳಿಗೆ ಸಾವಿರಾರು ಕೋಟಿ ದುರ್ಬಳಿಸಿಕೊಂಡಿದೆ. ಕೇಂದ್ರ ಸರ್ಕಾ ರವು ರಾಜ್ಯದ ಬಗ್ಗೆ ಮಲತಾಯಿಧೋರಣೆ ಹೊಂದಿದ್ದು ತಾರತಮ್ಯ ಮಾಡುತ್ತಿರುವುದು ಅನ್ಯಾಯದ ಪರಮಾವಧಿಯಾಗಿದೆ ಎಂದು ದೂರಿದರು. ಸುದ್ದಿಗೋಷ್ಟಿಯಲ್ಲಿ ರಾಜ್ಯ ಸಮಿತಿ ಸದಸ್ಯ ರಘುರಾ ಮರೆಡ್ಡಿ, ಜಿಲ್ಲಾ ಸಮಿತಿ ಸದಸ್ಯ ಬಿ,ಎನ್ ಮುನಿಕೃಷ್ಣಪ್ಪ ಮತ್ತಿತರರು ಇದ್ದರು.