ರಾಮ ಮಂದಿರ ಉದ್ಘಾಟನೆಯ ಆಹ್ವಾನದಲ್ಲಿ ರಾಜಕಾರಣ ಸಲ್ಲ: ಸಂಸದ ಪ್ರಜಲ್ಲ್‌ ರೇವಣ್ಣ ಆಕ್ರೋಶ

KannadaprabhaNewsNetwork |  
Published : Jan 12, 2024, 01:45 AM IST
ನಗರದಲ್ಲಿ ಮಾಧ್ಯಮದೊಂದಿಗೆ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿದರು, | Kannada Prabha

ಸಾರಾಂಶ

ರಾಮ ಮಂದಿರ ಎಂಬುದು ಭಾರತದ ಕೋಟ್ಯಂತರ ಮಂದಿಯ ಭಾವನಾತ್ಮಕ ಸಂಬಂಧ. ಅದರಲ್ಲಿ ರಾಜಕಾರಣ ಮಾಡುತ್ತೇನೆ ಎನ್ನುವುದು ಮೂರ್ಖತನವಾಗುತ್ತದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಗುರುವಾರ ಹಾಸನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಶ್ರೀರಾಮನ ಆಲಯ ಕೋಟ್ಯಂತರ ಭಾರತೀಯರ ಭಾವನಾತ್ಮಕ ಸಂಬಂಧಕನ್ನಡಪ್ರಭ ವಾರ್ತೆ ಹಾಸನ

ರಾಮ ಮಂದಿರ ಎಂಬುದು ಭಾರತದ ಕೋಟ್ಯಂತರ ಮಂದಿಯ ಭಾವನಾತ್ಮಕ ಸಂಬಂಧ. ಅದರಲ್ಲಿ ರಾಜಕಾರಣ ಮಾಡುತ್ತೇನೆ ಎನ್ನುವುದು ಮೂರ್ಖತನವಾಗುತ್ತದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ‘ರಾಮಮಂದಿರ ನಿರ್ಮಾಣವಾಗುತ್ತಿದೆ. ಪ್ರಧಾನ ಮಂತ್ರಿ ಆಹ್ವಾನ ಮಾಡಿದ್ದಾರೆ. ಖಂಡಿತವಾಗಿಯೂ ನಾನಂತೂ ಹೋಗುತ್ತೇನೆ. ಕಾಂಗ್ರೆಸ್ ನಿರ್ಣಯ ಅವರ ಪಕ್ಷಕ್ಕೆ ಬಿಟ್ಟದ್ದು. ಅವರ ನಿರ್ಣಯ ಯಾವ ರೀತಿ ಇಂಪ್ಯಾಕ್ಟ್ ಆಗುತ್ತದೆ ಅಂತ ೨೦೨೪ ರ ಚುನಾವಣೆಯಲ್ಲಿ ನೋಡಬೇಕು’ ಎಂದು ಹೇಳಿದರು.

ಮಂತ್ರಾಕ್ಷತೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರಶ್ನೆಗೆ ಉತ್ತರಿಸಿ, ‘ಅದು ಅವರವರ ಅನಿಸಿಕೆ. ರಾಮ ಮಂದಿರ ನಿರ್ಮಾಣಕ್ಕೆ ನಾನು ಸಹಕಾರ ಕೊಡ್ತೀನಿ ಅಂತ ಅವರೇ ಹೇಳಿದ್ದರು. ಕೇಂದ್ರದ ಕಾಂಗ್ರೆಸ್ ಬೇರೆ ರೀತಿ ಹೇಳುತ್ತಿದೆ, ರಾಜ್ಯ ಕಾಂಗ್ರೆಸ್ ಬೇರೆ ರೀತಿ ಹೇಳುತ್ತಿದೆ. ಎರಡು ತಪ್ಪು ಮಾಹಿತಿ ನೀಡುತ್ತಿವೆ’ಎಂದು ಬೇಸರ ವ್ಯಕ್ತಪಡಿಸಿದರು.

‘ಐಎನ್‌ಡಿಐಎ ಒಕ್ಕೂಟದಲ್ಲಿ ಒಗ್ಗಟ್ಟಿಲ್ಲ ಎಂಬುದು ಅನೇಕ ವಿಷಯಗಳಲ್ಲಿ ಎದ್ದು ಕಾಣುತ್ತಿದೆ. ನಿತಿಶ್‌ಕುಮಾರ್ ಸಭೆಯಿಂದ ಹೊರಗೆ ಹೋಗ್ತಾರೆ. ಖರ್ಗೆ ಅವರನ್ನು ಪಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡ್ತೀವಿ ಅಂದಾಗ ಸ್ವಪಕ್ಷದಲ್ಲೇ ಆ ಜನಾಂಗಕ್ಕೆ ಬೆಂಬಲ ಕೊಡುತ್ತಿಲ್ಲ. ಇವೆಲ್ಲ ಗಮನಿಸಿದರೆ ಒಕ್ಕೂಟದಲ್ಲಿ ಹೊಂದಾಣಿಕೆ ಇಲ್ಲಾ ಎಂಬುದು ಎದ್ದು ಕಾಣುತ್ತಿದೆ’ ಎಂದು ವ್ಯಂಗ್ಯವಾಡಿದರು.

ಎನ್ಡಿಎ ಅಲಯನ್ಸ್ ಪಾರ್ಟಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬುದು ಎದ್ದು ಕಾಣುತ್ತಿದೆ ಎಂದು ಭವಿಷ್ಯ ನುಡಿದರು.

ಮಾಜಿ ಚಾಲಕ ಕಾರ್ತಿಕ್ ಆರೋಪ ಹಾಗೂ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ನಾನು ಅದಕ್ಕೆ ಪ್ರತಿಕ್ರಿಯೆ ಕೊಡಲು ಹೋಗಲ್ಲ. ಕೋರ್ಟ್‌ಗೆ ಕೇಸ್ ಹಾಕಿಕೊಂಡಿದ್ದೀನಿ ಅಂತ ಅವರೇ ಹೇಳಿದ್ದಾರೆ. ಕೋರ್ಟ್‌ಗೆ ಹಾಕಿಕೊಂಡ ಮೇಲೆ ಮಾಧ್ಯಮದ ಮುಂದೆ ಬರುವುದು ಏನಿದೆ, ಎಲೆಕ್ಷನ್ ಹತ್ತಿರ ಬರುತ್ತಿದೆ ಮಾತನಾಡುತ್ತಿದ್ದಾರೆ. ಎಂಟು, ಒಂಬತ್ತು ತಿಂಗಳ ಹಿಂದೆ ಆಗಿರೋದು ಅಂತ ಅವರೇ ಹೇಳಿದ್ದಾರೆ. ಆಗ ನಡೆದಿದ್ದನ್ನು ಈಗ ಏಕೆ ಮಾತನಾಡುತ್ತಿದ್ದಾರೆ? ಈ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ಮಾಧ್ಯಮದ ಮುಂದೆ ಕುಳಿತುಕೊಂಡು ಒಬ್ಬರ ತೇಜೋವಧೆ ಮಾಡಬಾರದು. ಇವರಿಗೆ ಕೋರ್ಟ್ ಮೇಲೆ ನಂಬಿಕೆ ಇಲ್ಲ ಅಂತ ಕಾಣುತ್ತೆ. ಅವರ ಅಜೆಂಡಾ ಎಂಪಿ ಎಲೆಕ್ಷನ್. ಕಾಂಗ್ರೆಸ್‌ನವರ ಕುಮ್ಮಕ್ಕಿನಿಂದ ಏನೇನ್ ಮಾಡಬೇಕು ಮಾಡುತ್ತಾರೆ. ರಾಜಕೀಯ ಅಂದ ಮೇಲೆ ಇವೆಲ್ಲಾ ಇರ್ತಾವೆ. ಇನ್ನು ಏನೇನ್ ಮಾಡ್ತಾರೋ ಯಾರಿಗೆ ಗೊತ್ತು? ಎ.ಟಿ. ರಾಮಸ್ವಾಮಿ ಅವರು ದೊಡ್ಡವರಿದ್ದಾರೆ, ಅವರು ಹಿರಿಯ ರಾಜಕಾರಣಿ. ಇಂತಹ ಹೋರಾಟಕ್ಕೆ ಬರ್ತಾರೆ ಅಂದರೆ ನಾನು ಏನು ಹೇಳಬೇಕು. ನಾನು ಅವರ ಬಗ್ಗೆ ಏನು ಚರ್ಚೆ ಮಾಡಲ್ಲ. ಅವರಿಗೆ ಮಾಹಿತಿ ಸರಿಯಾಗಿದ್ದರೆ ಹೋರಾಟ ಮಾಡಲಿ’ ಎಂದು ಖಾರವಾಗಿ ನುಡಿದರು. ನಗರದಲ್ಲಿ ಮಾಧ್ಯಮದೊಂದಿಗೆ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿದರು,

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ