ದುಷ್ಟರ ಮೇಲಿನ ವಿಜಯವೇ ರಾಮ ನವಮಿ

KannadaprabhaNewsNetwork |  
Published : Apr 18, 2024, 02:16 AM IST
ಶ್ರೀ ರಾಮ ನವಮಿ ಉತ್ಸವ ಸಮಿತಿಯಿಂದ ರಾಮ ನವಮಿ ಆಚರಣೆ | Kannada Prabha

ಸಾರಾಂಶ

ನಗರದಲ್ಲಿ ಶ್ರೀರಾಮ ನವಮಿ ಉತ್ಸವ ಸಮಿತಿ ವತಿಯಿಂದ ಬೆಳಿಗ್ಗೆ ಹೋಮ ಹವನ ಪೂಜಾ ಕಾರ್ಯಕ್ರಮಗಳೊಂದಿಗೆ ಸರಳವಾಗಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದಲ್ಲಿ ಶ್ರೀರಾಮ ನವಮಿ ಉತ್ಸವ ಸಮಿತಿ ವತಿಯಿಂದ ಬೆಳಿಗ್ಗೆ ಹೋಮ ಹವನ ಪೂಜಾ ಕಾರ್ಯಕ್ರಮಗಳೊಂದಿಗೆ ಸರಳವಾಗಿ ಆಚರಿಸಲಾಯಿತು.

ಉತ್ಸವ ಸಮಿತಿ ಅಧ್ಯಕ್ಷ ಉಮೇಶ ವಂದಾಲ ಮಾತಾನಾಡಿ, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ವರ್ಷ ಕೇವಲ ಬ್ರಾಹ್ಮಣ ಮಹಿಳಾ ಮಂಡಳಿ ವತಿಯಿಂದ ಕೋಲಾಟ ಆರತಿ, ಮಹಾಪೂಜೆ, ರಾಮಜಪದೊಂದಿಗೆ ರಾಮ ನವಮಿ ಆಚರಿಸಲಾಯಿತು. ರಾಮ ನವಮಿ ಉತ್ಸವದ ಮಹತ್ವವೂ ದುಷ್ಟರ ಮೇಲೆ ಒಳ್ಳೆಯತನದ ವಿಜಯ. ಅಧರ್ಮವನ್ನು ಸೋಲಿಸಿ ಧರ್ಮದ ಸ್ಥಾಪನೆಯನ್ನು ಮಾಡಿದ ಕಾರ್ಯವನ್ನು ಸೂಚಿಸುತ್ತದೆ. ಶ್ರೀರಾಮನನ್ನು ಸೂರ್ಯದೇವನ ಪೂರ್ವಜನೆಂದೂ ಜನ ನಂಬುತ್ತಾರೆ. ರಾಮ ನವಮಿಯು ಸದಾಚಾರದ ಶಾಶ್ವತ ತತ್ವಗಳ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಭಗವಾನ್ ರಾಮನ ಜೀವನವು ಕರ್ತವ್ಯ, ಗೌರವ ಮತ್ತು ತ್ಯಾಗದ ಆದರ್ಶಗಳನ್ನು ನಮಗೆ ಕಲಿಸುತ್ತದೆ. ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ಸದಾಚಾರದ ಜೀವನವನ್ನು ನಡೆಸಲು ಭಕ್ತರನ್ನು ಪ್ರೇರೇಪಿಸುತ್ತದೆ ಎಂದು ತಿಳಿಸಿದರು.

ರಾಮ ನವಮಿ ಉತ್ಸವ ಸಮಿತಿಯ ಅಧ್ಯಕ್ಷ ಉಮೇಶ ವಂದಾಲ, ಶಿವಾನಂದ ಭುಯ್ಯಾರ, ಶರಣು ಸಬರದ, ಮಹೇಶ ಜಾಧವ, ಶ್ರೀಶೈಲ ಹಿರೇಮಠ, ಸಚಿನ ಸವನಳ್ಳಿ, ಸಂತೋಷ ವೆಂಕಪ್ಪಗೋಳ, ಅಪ್ಪು ಪೆಡ್ಡಿ, ಸತೀಶ ಗಾಯಕವಾಡ, ನಾರಾಯಣಸಿಂಗ ಹಜೇರಿ, ಅಮಿತ ಅವಜಿ, ಆನಂದ ಬಂಡಿ, ಗಿರಿಜಾ ಬರಡೋಲಮಠ, ಜೋತಿ ಹಿರೇಮಠ, ಜಯಶ್ರೀ ಕನ್ನೂರ, ಭಾರತಿ ಭುಯ್ಯಾರ, ದೀಪಾ ಭಿಸೆ, ಆನಂದ ರೂಗಿ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ