ಜಿಲ್ಲಾದ್ಯಂತ ಶ್ರದ್ಧಾಭಕ್ತಿಯಿಂದ ರಂಜಾನ್‌ಹಬ್ಬ ಆಚರಣೆ

KannadaprabhaNewsNetwork |  
Published : Apr 01, 2025, 12:48 AM IST
ಪವಿತ್ರ ರಂಜಾನ್ ಹಬ್ಬ ಅಂಗವಾಗಿ ನಗರದ ಕೆಂಪನಹಳ್ಳಿಯಲ್ಲಿರುವ ಈದ್ಗಾ ಮೈದಾನದಲ್ಲಿ ಸೋಮವಾರ ಮುಸಲ್ಮಾನ್ ಸಮುದಾಯದವರು ಬಹಳ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು | Kannada Prabha

ಸಾರಾಂಶ

ಚಿಕ್ಕಮಗಳೂರು, ಪವಿತ್ರ ರಂಜಾನ್ ಹಬ್ಬವನ್ನು ಜಿಲ್ಲಾದ್ಯಂತ ಮುಸಲ್ಮಾನ್ ಸಮುದಾಯದವರು ಬಹಳ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪವಿತ್ರ ರಂಜಾನ್ ಹಬ್ಬವನ್ನು ಜಿಲ್ಲಾದ್ಯಂತ ಮುಸಲ್ಮಾನ್ ಸಮುದಾಯದವರು ಬಹಳ ಶ್ರದ್ಧಾಭಕ್ತಿಯಿಂದ ಆಚರಿಸಿದರು.ಹಬ್ಬದ ಹಿನ್ನೆಲೆಯಲ್ಲಿ ನಗರದ ಕೆಂಪನಹಳ್ಳಿಯಲ್ಲಿ ಸೋಮವಾರ ಈದ್ಗಾ ಮೈದಾನಕ್ಕೆ ಹೊಸ ಉಡುಗೆ ತೊಡುಗೆಗಳನ್ನು ಧರಿಸಿ ತಂಡೋಪ ತಂಡವಾಗಿ ಆಗಮಿಸಿದ ಮುಸ್ಲಿಂ ಸಮುದಾಯದವರು ಅಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಪ್ರಾರ್ಥನೆ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಶಾಸಕ ಎಚ್.ಡಿ.ತಮ್ಮಯ್ಯ ಪ್ರಾರ್ಥನಾ ಸ್ಥಳಕ್ಕೆ ಭೇಟಿ ನೀಡಿ ಮುಸ್ಲಿಂ ಸಮುದಾಯದವರಿಗೆ ರಂಜಾನ್ ಶುಭಾಶಯ ಕೋರಿದರು. ಈ ವೇಳೆ ಮಾತನಾಡಿ, ೬ನೇ ಶತಮಾನದಲ್ಲಿ ಜನಿಸಿದ ಪ್ರವಾದಿ ಪೈಗಂಬರರು ಇಸ್ಲಾಂ ಧರ್ಮದ ಗುರುಗಳಾಗಿ ಬಡವರ ಪರ ಕಾಳಜಿ ಹೊಂದಿ ಅವರ ಪರದನಿ ಎತ್ತಿದ್ದಾರೆ. ಮೆಕ್ಕಾದಿಂದ ಮದೀನಕ್ಕೆ ಹೋಗುವ ಮಧ್ಯೆ ಅವರು ಅನೇಕ ತೊಂದರೆಗಳನ್ನು ಅನುಭವಿಸುತ್ತಾರೆ. ಬಡ ಕುಟುಂಬದಲ್ಲಿ ಜನಿಸಿದ ಪೈಗಂಬರರು ದೊಡ್ಡ ಕುಟುಂಬದಲ್ಲಿ ಬೆಳೆದವರು. ಮೆಕ್ಕಾದಿಂದ ಮದೀನಕ್ಕೆ ಹೋಗುವಾಗ ಪೈಗಂಬರರು ತುಂಬಾ ಕಷ್ಟ ಅನುಭವಿಸುತ್ತಾರೆ. ಅವರಿಗೆ ಗೌರವದ ಸಲ್ಲಿಸುವ ಸಲುವಾಗಿ ಸಮುದಾಯದ ಜನ ಒಂದು ತಿಂಗಳು ಉಪವಾಸ ಅಚರಿಸುತ್ತಾರೆ ಎಂದರು.6ನೇ ಶತಮಾನದಲ್ಲಿ ಜನಿಸಿದ ಮಹಮದ್ ಪೈಗಂಬರರು ಮತ್ತು ೧೨ನೇ ಶತಮಾನದಲ್ಲಿ ಜನಿಸಿದ ಬಸವಣ್ಣ ಅವರಿಬ್ಬರ ದ್ಯೇಯ ಒಂದೇ ಆಗಿದೆ. ಇಬ್ಬರೂ ಮಹಾ ಪುರುಷರು ಕೂಡ ಬಡವರ ಮತ್ತು ಶೋಷಿತರ ಪರವಾದ ಕಾಳಜಿ ಉಳ್ಳವ ರಾಗಿದ್ದಾರೆ. ಅವರ ಮಾರ್ಗದರ್ಶನದಂತೆಯೇ ರಂಜಾನ್ ದಿನ ಉಳ್ಳವರು ಬಡವರಿಗೆ ಏನಾದರೂ ದಾನ ನೀಡುವ ಪರಂಪರೆ ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹ್ಮದ್, ಸಮುದಾಯದ ಜನರಿಗೆ ಶುಭಾಶಯ ಕೋರಿ ದೇವರು ಎಲ್ಲರಿಗೂ ಒಳಿತು ಮಾಡಲಿ ಎಂದು ಹಾರೈಸಿದರು.ನಗರದ ಜಾಮೀಯಾ ಮಸೀದಿ ಸೇರಿದಂತೆ ನಗರದ ಎಲ್ಲ ಮಸೀದಿಗಳ ಧರ್ಮಗುರುಗಳು ಈದ್ಗಾ ಮೈದಾನದಲ್ಲಿ ಮುಂಚೂಣಿ ಸ್ಥಾನದಲ್ಲಿ ಕುಳಿತು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಕ್ಫ್ ಮಸೂದೆ ತಿದ್ದುಪಡಿಯನ್ನು ಹಿಂದೆ ಪಡೆಯುವಂತೆ ಆಗ್ರಹಿಸಿ, ಪ್ರಾರ್ಥನೆಗೆ ಆಗಮಿಸಿದ್ದ ಎಲ್ಲಾ ಮುಸಲ್ಮಾನ ಬಾಂಧವರು ತಮ್ಮ ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿರೋಧ ವ್ಯಕ್ತಪಡಿಸಿದರು.

- ಬಾಕ್ಸ್-

ಕಡೂರು: ಸೋಮವಾರ ರಂಜಾನ್ ಹಬ್ಬದ ಪ್ರಯುಕ್ತ ಕಡೂರಿನ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ನಡೆಸಿದರು. ಪಟ್ಟಣದ ಹಜರತ್ ಜರೀನಾಬಿ ದರ್ಗಾ ಅಧ್ಯಕ್ಷ ನವಾಜ್ ಖಾನ್ ಮತ್ತು ಲಬಾಬಿನ್ ಮಸೀದಿಯ ಧರ್ಮಗುರು ಜನಾಬ್ ಮುಫ್ತಿ ಎಂ ತಬಾರಕ್ ರಂಜಾನ್ ಶುಭಾಷಯ ಕೋರಿದರು.ಮೌಲಾನಾ ಉಸ್ಮಾನ್ ಸಾಬ್ ಅವರು ರಂಜಾನ್ ಪ್ರಾರ್ಥನೆ ಕುರಿತು ಮಾತನಾಡಿದರು.ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ