ಧನುರ್ಮಾಸದ ಐದನೇ ದಿನವಾದ ಶನಿವಾರ ಅಡಿಗೆ ಮನೆ ಬಳಿಗೆ ದೇವಿಯರ ಉತ್ಸವ ನೆರವೇರಿಸಿ ಕ್ಷೀರಾನ್ನನಿವೇದನ ಮಾಡಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ಮೇಲುಕೋಟೆ:
ಚೆಲುವನಾರಾಯಣಸ್ವಾಮಿಯವರ ದೇವಾಲಯದಲ್ಲಿ ಶನಿವಾರ ರಾತ್ರಿ ಶ್ರೀದೇವಿ ಭೂದೇವಿಯರಿಗೆ ನೂರ್ ತಡಾ ಉತ್ಸವ ವೈಭವದಿಂದ ನೆರವೇರಿತು.ಧನುರ್ಮಾಸದ ಐದನೇ ದಿನವಾದ ಶನಿವಾರ ಅಡಿಗೆ ಮನೆ ಬಳಿಗೆ ದೇವಿಯರ ಉತ್ಸವ ನೆರವೇರಿಸಿ ಕ್ಷೀರಾನ್ನನಿವೇದನ ಮಾಡಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ದೇವಿಯರಿಗೆ ಒಳಪ್ರಾಕಾರದಲ್ಲಿ ವೈಭವದಿಂದ ಉತ್ಸವ ನೆರವೇರಿಸಲಾಯಿತು.
ಧನುರ್ಮಾಸದ ಪ್ರಯುಕ್ತ ಚೆಲುವನಾರಾಯಣಸ್ವಾಮಿಗೆ ವಿಶೇಷಪುಷ್ಪಗಳಿಂದ ಅಲಂಕಾರ ನೆರವೇರಿಸಲಾಗಿತ್ತು. ಶನಿವಾರ ಮತ್ತು ಭಾನುವಾರ ಮೇಲುಕೋಟೆಗೆ ಭಕ್ತಸಾಗರವೇ ಹರಿದು ಬಂದಿತ್ತು. ದೇವಾಲಯಗಳ ಮುಂದೆ ಸರತಿಸಾಲಿನಲ್ಲಿ ನಿಂತು ಭಕ್ತರು ಚೆಲುವನಾರಾಯಣನ ದರ್ಶನ ಪಡೆದರುಪಾರ್ಕಿಂಗ್ ಅವ್ಯವಸ್ಥೆ:
ಶನಿವಾರ ಭಾನುವಾರ ಮತ್ತು ರಜಾದಿನಗಳಲ್ಲಿ ಭಕ್ತರವಾಹನಗಳು ಚೆಲುವನಾರಾಯಣಸ್ವಾಮಿ ದೇವಾಲಯದ ಬಳಿಗೆ ಬರುವ ಕಾರಣ ವಾಹನದಟ್ಟಣೆ ಉಂಟಾಗಿ ಭಕ್ತರು ಪರಸ್ಪರ ಜಗಳವಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಶನಿವಾರ ಭಾನುವಾರವೂ ಇಂತದೇ ದೃಶ್ಯಗಳು ಕಂಡುಬಂದವು.ಇನ್ನು ಉತ್ಸವಗಳು ಇದ್ದಾಗಲಂತೂ ಭಕ್ತರು ಉತ್ಸವ ಬೀದಿಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಪಾರ್ಕಿಂಗ್ ಮಾಡುವ ಕಾರಣ ಚೆಲುವನಾರಾಯಣನ ಉತ್ಸವ ನಡೆಸುವುದೇ ಕಷ್ಠಕರವಾಗಿದೆ. ಈಗಲಾದರೂ ಮೇಲುಕೋಟೆ ಪೊಲೀಸರು ಗ್ರಾಪಂ ಕ್ರಮವಹಿಸಿ ಶನಿವಾರ ಭಾನುವಾರ ರಜಾದಿನಗಳಂದು ಪ್ರಾಥಮಿಕ ಆರೋಗ್ಯಕೇಂದ್ರ ಮುಂಭಾಗದ ಮೈದಾನದಲ್ಲೇ ಭಕ್ತರವಾಹನಗಳಿಗೆ ಪಾರ್ಕಿಂಗ್ ಕಲ್ಪಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.