ಕಪ್ಪು ಪಟ್ಟಿ ಧರಿಸಿ ಹಳೆ ಈದ್ಗಾದಲ್ಲಿ ರಂಜಾನ್ ಪ್ರಾರ್ಥನೆ

KannadaprabhaNewsNetwork | Published : Apr 1, 2025 12:48 AM

ಸಾರಾಂಶ

ರಂಜಾನ್ ಹಬ್ಬದ ಅಂಗವಾಗಿ ಮುಸಲ್ಮಾನ ಬಾಂಧವರು ವಕ್ಫ್‌ ಕಾಯ್ದೆ ತಿದ್ದುಪಡಿ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರು ಭೇಟಿ ನೀಡಿ ವಕ್ಫ್ ಕಾಯಿದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುವ ಮೂಲಕ ಮುಸಲ್ಮಾನರ ಹೋರಾಟಕ್ಕೆ ಸಾಥ್ ನೀಡಿದರು. ನಾವು ಹಾಸನ ಜಿಲ್ಲೆಯಿಂದ ನಾವು ಮುಸಲ್ಮಾನ ಬಾಂಧವರ ಜೊತೆ ಸೌಹಾರ್ದಯುತವಾಗಿ ನಡೆದುಕೊಂಡಿದ್ದು, ನಮ್ಮ ತಂದೆ ಎಚ್.ಎಸ್. ಪ್ರಕಾಶ್ ಅವರು ಕೂಡ ಇದೆ ಭಾಗದಲ್ಲಿ ನಗರಸಭೆ ಸದಸ್ಯರಾಗಿ ಸಹೋದರರ ರೀತಿ ಬಂದಿದ್ದೇವೆ. ಈಗಲೂ ಕೂಡ ಕೂಡ ಜೊತೆಯಲ್ಲಿ ಇರುವುದಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಪ್ರತಿ ವರ್ಷದಂತೆ ಈ ವರ್ಷವು ಕೂಡ ನಗರದ ಹೊಸಲೈನ್ ರಸ್ತೆ ಬಳಿ ಇರುವ ಹಳೆ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಸೋಮವಾರ ಮುಸಲ್ಮಾನ ಬಾಂಧವರು ವಕ್ಫ್‌ ಕಾಯ್ದೆ ತಿದ್ದುಪಡಿ ವಿರೋಧಿಸಿ ಕಪ್ಪು ಪಟ್ಟಿ ಧರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರು ಭೇಟಿ ನೀಡಿ ವಕ್ಫ್ ಕಾಯಿದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುವ ಮೂಲಕ ಮುಸಲ್ಮಾನರ ಹೋರಾಟಕ್ಕೆ ಸಾಥ್ ನೀಡಿದರು.

ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಈ ವರ್ಷ ಯುಗಾದಿ ಮತ್ತು ರಂಜಾನ್ ಒಟ್ಟಿಗೆ ಹಬ್ಬ ಬಂದಿರುವುದರಿಂದ ಸೌಹಾರ್ದಯುತವಾಗಿ ಎಲ್ಲರೂ ಒಟ್ಟಿಗೆ ಆಚರಿಸುತ್ತಿದ್ದೇವೆ. ಹಿಂದಿನಿಂದಲೂ ಕೂಡ ನಾವುಗಳು ಶುಭ ಹಾರೈಸುತ್ತಿದ್ದು, ಹಿಂದೆ ನಮ್ಮ ತಂದೆ ಶಾಸಕರಾಗಿದ್ದಾಗ ಪ್ರತಿ ವರ್ಷ ಇಲ್ಲಿಗೆ ಬಂದು ಶುಭ ಹಾರೈಸುತ್ತಿದ್ದರು. ಈಗ ನಾನು ಶಾಸಕನಾಗಿ ನಿಮ್ಮ ಬಳಿಗೆ ಶುಭಾಶಯ ಹೇಳಲು ಬಂದಿದ್ದೇನೆ ಎಂದರು. ಕೇಂದ್ರ ಸರಕಾರವು ವಕ್ಫ್‌ ಕಾಯಿದೆಗೆ ತಿದ್ದುಪಡಿ ತಂದಿದೆ. ನಾವು ಕೂಡ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತೇನೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡರು ಕೂಡ ಈ ಬಗ್ಗೆ ಗಮನ ಸೆಳೆಯಲು ಸಂಬಂಧಪಟ್ಟ ಕೇಂದ್ರ ಸಚಿವರ ಜೊತೆ ಮಾತುಕತೆ ಮಾಡಿ ಕಾಯಿದೆಯನ್ನು ವಾಪಸ್ ತೆಗೆದುಕೊಳ್ಳಲು ಹೋರಾಟ ಮಾಡುವುದಾಗಿ ಹೇಳಿದ್ದಾರೆ. ನಾವು ಹಾಸನ ಜಿಲ್ಲೆಯಿಂದ ನಾವು ಮುಸಲ್ಮಾನ ಬಾಂಧವರ ಜೊತೆ ಸೌಹಾರ್ದಯುತವಾಗಿ ನಡೆದುಕೊಂಡಿದ್ದು, ನಮ್ಮ ತಂದೆ ಎಚ್.ಎಸ್. ಪ್ರಕಾಶ್ ಅವರು ಕೂಡ ಇದೆ ಭಾಗದಲ್ಲಿ ನಗರಸಭೆ ಸದಸ್ಯರಾಗಿ ಸಹೋದರರ ರೀತಿ ಬಂದಿದ್ದೇವೆ. ಈಗಲೂ ಕೂಡ ಕೂಡ ಜೊತೆಯಲ್ಲಿ ಇರುವುದಾಗಿ ಹೇಳಿದರು.

ಈದ್ಗಾ ಕಮಿಟಿ ಅಧ್ಯಕ್ಷ ಸಮೀರ್ ಖಾನ್ ಮಾತನಾಡಿ, ೩೦ ದಿನಗಳ ಕಾಲ ಉಪವಾಸವನ್ನು ಮಾಡಿ ಕೊನೆಯ ದಿವಸ ಸಾಮೂಹಿಕ ಪ್ರಾರ್ಥನೆಯೊಂದಿಗೆ ರಂಜಾನ್ ಉಪವಾಸ ಮುಕ್ತಾಯಗೊಳ್ಳಲಿದೆ. ಈದಿನ ವಿಶೇಷ ಪ್ರಾರ್ಥನೆಯೊಂದಿಗೆ ಈ ಜಗತ್ತಿನ ಎಲ್ಲಾ ಕೆಡುಕುಗಳಿಗೆ ಅಂತ್ಯವಾಗಲು ಬೇಡಿಕೊಳ್ಳುತ್ತೇವೆ ಎಂದರು. ಥಾಯ್‌ಲ್ಯಾಂಡ್‌, ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಅನಾಹುತಗಳು ತಪ್ಪಲಿ ಎಂದು ಈ ವೇಳೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ. ದ್ವೇಷ, ಅಸೂಯೆಯನ್ನು ದೂರವಿಟ್ಟು ನಾವು ಸಹೋದರರು ನಾವೆಲ್ಲಾ ಒಂದೆ ದೇಶ ಪ್ರೇಮ ಭಾವನೆಯೊಂದಿಗೆ ಉಪವಾಸ ಆಚರಣೆ ಮಾಡಲಾಗುತ್ತದೆ. ಮುಂದಿನ ೧೧ ತಿಂಗಳು ಶಾಂತಿಗಾಗಿ ಸಹೋದರತ್ವದಿಂದ ಭ್ರಾತೃತ್ವದಿಂದ ಬದುಕಬೇಕು ಎಂಬುದು ರಂಜಾನ್ ಹಬ್ಬದ ಪ್ರಾಮುಖ್ಯತೆಯಾಗಿದೆ. ಕಡು ಬಡವರ ಸೇವೆ ಮಾಡುವುದು, ಇದ್ದವರು ಇಲ್ಲದವರಿಗೆ ಕೊಡುವುದು ರಂಜಾನ್ ಹಬ್ಬದ ವಿಶೇಷತೆ ಎಂದು ಹೇಳಿದರು. ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ಮಸೂದೆ ವಿರೋಧಿಸಿ ನಾವುಗಳು ಕಪ್ಪು ಪಟ್ಟಿ ಧರಿಸಿ ಶಾಂತಿಯುತವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದೇವೆ ಎಂದು ಕಾಯಿದೆ ಕುರಿತು ಇದೇ ವೇಳೆ ವಿರೋಧ ವ್ಯಕ್ತಪಡಿಸಿದರು.

Share this article