ಹೊಸದುರ್ಗದಲ್ಲಿ ಶ್ರದ್ಧಾಭಕ್ತಿಯಿಂದ ರಂಜಾನ್‌ ಆಚರಣೆ

KannadaprabhaNewsNetwork |  
Published : Mar 22, 2026, 01:15 AM IST
ಪೋಟೋ, 21ಹೆಚ್‌ ಎಸ್‌ಡಿ 1:  ಹೊಸದುರ್ಗದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ರಂಜಾನ್‌ ಹಬ್ಬದ ಹಿನ್ನಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. | Kannada Prabha

ಸಾರಾಂಶ

ಹೊಸದುರ್ಗದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ರಂಜಾನ್‌ ಹಬ್ಬದ ಹಿನ್ನಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಹೊಸದುರ್ಗ: ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ಶನಿವಾರ ಶ್ರದ್ಧಾಭಕ್ತಿಯಿಂದ ರಂಜಾನ್‌ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.

ನಗರದ ಜಾಮೀಯಾ ಮಸೀದಿಯಿಂದ ಮೆರವಣಿಗೆಯ ಮೂಲಕ ಹೊರಟು ಟಿಬಿ ವೃತ್ತದ ಬಳಿಯಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮೆರವಣಿಗೆ ವೇಳೆ ಶಾಸಕ ಬಿ.ಜಿ.ಗೋವಿಂದಪ್ಪ ಸೇರಿದಂತೆ ಇತರರು ಬೇಟಿ ನೀಡಿ ಮುಸ್ಲಿಂ ಸಮಾಜದ ಬಾಂಧವರಿಗೆ ಶುಭಾಶಯ ಕೋರಿದರು. ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದ ಗುರುಗಳು ಹಾಗೂ ಮುಖಂಡರು ಹಾಜರಿದ್ದರು.

ತಾಲೂಕಿನ ಶ್ರೀರಾಂಪುರ, ಜಾನಕಲ್‌, ಗರಗ, ಸಯ್ಯದ್‌ಸಾಬ್‌ ಪಾಳ್ಯ, ಹೈದರ್‌ಸಾಬ್‌ ಪಾಳ್ಯ, ಬೆಲಗೂರು, ಮತ್ತೋಡು ಸೇರಿದಂತೆ ವಿವಿದೆಡೆಗಳಲ್ಲಿಯೂ ಮುಸ್ಲಿಂ ಸಮಾಜ ಬಾಂದವರು ಸಂಭ್ರಮದಿಂದ ರಂಜಾನ್‌ ಹಬ್ಬ ವನ್ನು ಆಚರಿಸಿದರು. ಆಯಾ ಗ್ರಾಮಗಳಲ್ಲಿರುವ ಈದ್ಗಾ ಮೈದಾನ ಗಳಿಗೆ ಮರವಣಿಗೆ ಮೂಲಕ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವಕುಲದ ಒಳಿತಿಗೆ ಪ್ರಾರ್ಥಿಸುವುದು ಅವಶ್ಯ: ಶಾಸಕ ಪ್ರದೀಪ್ ಈಶ್ವರ್
ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡುವೆ