ನವಲಗುಂದ: ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಈದ್ ಉಲ್ ಫಿತರ್ ರಂಜಾನ್ ಹಬ್ಬವನ್ನು ಸಡಗರದ ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ ಪಾಲ್ಗೊಂಡು ಶುಭಾಶಯ ಕೋರಿದರು.
ಧರ್ಮಗುರುಗಳಾದ ಸೈಯ್ಯದ ಅಮಾನುಲ್ಲಾ ಖಾಜಿ, ಸೈಯ್ಯದ ಅಬ್ದುಲಅಜೀಜ್ ಖಾಜಿ, ಕೆಪಿಸಿಸಿ ಸದಸ್ಯ ವಿನೋದ ಅಸೂಟಿ, ಮುಸ್ಲಿಂ ಸೈಪುದ್ದೀನ್ ಅವರಾದಿ, ಉಸ್ಮಾನ ಬಬರ್ಚಿ, ಬಾಬಾಜಾನ ಮುಲ್ಲಾ, ಮೋದಿನಸಾಬ್ ಶಿರೂರು, ಅಬ್ಬಾಸಲಿ ದೇವರಿಡು, ರಿಯಾಜ್ ಪೀರಜಾದೆ, ಮೌಲಾಸಾಬ ವೈದ್ಯ, ಸಿರಾಜಅಹಮ್ಮದ್ ಧಾರವಾಡ, ದಾವಲಸಾಬ್ ಮಸೂತಿ, ಕಾಶೀಮಸಾಬ ಅಲ್ಲಿಬಾಯಿ, ಬಾಬಾಜಾನ್ ಮುಲ್ಲಾ ಪಾಲ್ಗೊಂಡಿದ್ದರು.ರಂಜಾನ್ ಪ್ರಯುಕ್ತ ಮಸೀದಿಗಳು, ದರ್ಗಾಗಳನ್ನು ವಿದ್ಯುತ್ ದೀಪಾಲಂಕಾರದಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು.
ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು, ದೇಶ, ರಾಜ್ಯಕ್ಕೆ ಒಳ್ಳೆಯದನ್ನಾಗಲಿ. ರೈತರಿಗೆ ಉತ್ತಮ ಮಳೆಯಾಗಿ ಬೆಳೆ ಬರಲಿ ಎಂದು ಪ್ರಾರ್ಥಿಸಿದರು. ಈ ವೇಳೆ ಅಂಜುಮನ್ ಇಸ್ಲಾಂ ಅಧ್ಯಕ್ಷ ಖಯುಂ ನಾಲಬಂದ, ಮುಖಂಡರಾದ ರಾಯಸಾಬ್ ಕಳ್ಳಿಮನಿ, ಬಾಬಾಜಾನ್ ಮಿಶ್ರಿಕೋಟಿ, ಹಜರತಲಿ ಕರ್ಜಗಿ, ಸಲಿಂ ಕಡ್ಲೆ, ಎ.ಟಿ. ಹುಬ್ಬಳ್ಳಿ ಸಲೀಂ ಕ್ಯಾಲಕುಂಡ, ಇಬ್ರಾಹಿಂ ಆಸಂನವರ ಇದ್ದರು.
ಸ್ಥಳೀಯ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್ ತಮಟಗಾರ, ಉಪಾಧ್ಯಕ್ಷ ಬಶೀರಅಹ್ಮದ ಜಹಾಗೀರದಾರ, ಕಾರ್ಯದರ್ಶಿ ಎಸ್.ಎಸ್. ಸರಗೀರೊ, ಖಜಾಂಚಿ ಮಹಮ್ಮದರಫೀಕ ಶಿರಹಟ್ಟಿ, ಖೈರುದ್ದೀನ್ ಶೇಖ್, ರಿಯಾಜ್ ನನ್ನೆಸಾಬನವರ, ಯಾಸೀನ್ ಹಾವೇರಿಪೇಟ್, ಇಕ್ಬಾಲ್ ತಮಟಗಾರ, ಮೆಹಬೂಬ ಪಠಾಣ, ನಿಜಾಮ ರಾಹಿ, ಇರ್ಫಾನ್ ತಾಡಪತ್ರಿ, ಸಾದಿಕ್, ಅಬ್ದುಲಗನಿ ಗೋಲಂದಾಜ ಮುಂತಾದ ಗಣ್ಯರು, ಅನೇಕ ಹಿರಿಯರು, ಮಕ್ಕಳು ಸೇರಿದಂತೆ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಆನಂತರ ಮುಸ್ಲಿಮರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.