ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಯಲ್ಲಿ ಮುಸ್ಲಿಂ ಬಾಂಧವರು ಸಂಭ್ರಮದಲ್ಲಿ ರಂಜಾನ್ ಆಚರಿಸಿದರು. ಶಾಂತಿ, ಸಹಬಾಳ್ವೆ, ದಾನ-ಧರ್ಮದ ಪ್ರತೀಕವಾದ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂಂಭ್ರಮದಿದಂ ಆಚರಿಸಿದರು. ನಗರ ಹಾಗೂ ಜಿಲ್ಲೆಯಲ್ಲಿ ರಂಜಾನ್ ಹಬ್ಬದ ಸಡಗರ ಕಳೆಗಟ್ಟಿತ್ತು.ಈದ್ಗಾ ಮೈದಾನಗಳಲ್ಲಿ ಪ್ರಾರ್ಥನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ ನೋಟಗಳು ಕಂಡವು. ನಗರದ ಈದ್ಗಾ ಮೈದಾನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದ ಮುಸ್ಲಿಂ ಸಮಾಜದವರು, ಅರಿಗೆ ರಾಜಕಾರಣಿಗಳು ಸಾಥ್ ನೀಡಿದ್ದು ಕಂಡು ಬಂತು.
ಪ್ರಾರ್ಥಣೆ ಬಳಿಕ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ನಾಯಕರುಗಳು, ಈ ಸಂದರ್ಭದಲ್ಲಿ ಮುಸ್ಲೀಂ ಧರ್ಮಗುರುಗಳು ಮುಖಂಡರು ಗಣ್ಯರು ಪಾಲ್ಗೊಂಡಿದ್ದರು. ಉತ್ತಮ ಮಳೆ ಬೆಳೆಯಾಗಲೆಂದು ಪ್ರಾರ್ಥನೆ ಸಲ್ಲಿಸಲಾಯ್ತೆಂದು ಮುಸಲ್ಮಾನ್ ಬಾಂಧವರು ಹೇಳಿದ್ದಾರೆ.ರಂಗ್ ರಸ್ತೆಯಲ್ಲಿರುವ ಈದ್ಗಾದಲ್ಲಿಯೂ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿಯೂ ಮುಸಲ್ಮಾನ್ ಬಾಂಧವರು ಹೆಚ್ಚಿಗೆ ಪಾಲ್ಗೊಂಡದ್ದರು.
ಸೇಡಂನಲ್ಲಿ ಸಂಭ್ರಮ: ಸೇಡಂ ಪಟ್ಟಣದಲ್ಲಿಂದು ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ರಂಜಾನ್ ಹಬ್ಬದ ಪ್ರಯುಕ್ತವಾಗಿ ಪ್ರಾರ್ಥನೆ ಸಲ್ಲಿಸುತ್ತಿರುವ ಸ್ಥಳಕ್ಕೆ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ಭಾಗಿಯಾಗಿ ಒಬ್ಬರಿಗೊಬ್ಬರು ಆತ್ಮೀಯತೆಯಿಂದ ಅಪ್ಪಿಕೊಂಡು ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಶುಭ ಕೋರಿದರು. ಈ ವೇಳೆಯಲ್ಲಿ ಖ್ಯಾತ ಯುವ ಉದ್ಯಮಿ, ಸಮಾಜ ಸೇವಕ ಅಬ್ದುಲ್ ಹಫೀಸ್ ಆರ್ ರಂಜೋಳ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಾಗೇಶ್ವರರಾವ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣ ರೆಡ್ಡಿ ಪಾಟೀಲ್, ಮಾಜಿ ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಬ್ಲಾಕ್ ಕಾಂಗ್ರೆಸ್ ಯುವ ಅಧ್ಯಕ್ಷ ಭೀಮಾಶಂಕರ ಕೋಳ್ಳಿ, ಅನೇಕ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆ: ಶಾಂತಿ, ಸಹಬಾಳ್ವೆ, ದಾನ-ಧರ್ಮದ ಪ್ರತೀಕವಾದ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಚಿತ್ತಾಪುರ ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ ಆಚರಿಸಿದರು.
ಒಂದು ತಿಂಗಳ ಉಪವಾಸದ ಬಳಿಕ ಪಟ್ಟಣದ ಬಾಹರಪೇಟನ್ ಈದ್ಗಾ ಮೈದಾನ, ಚಿತ್ತವಲ್ಲಿ ಈದ್ಗಾ ಮೈದಾನ ಸೇರಿದಂತೆ ವಿವಿಧೆಡೆ ಗುರುವಾರ ಬೆಳಗ್ಗೆ 8.30ರಿಂದ 10.30ರವರೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆಯಲ್ಲಿ ಸಮಾಜದ ಹಿರಿಯರು ವಿವಿಧ ಸಂಘ-ಸಂಘಟನೆಗಳ ಅಧ್ಯಕ್ಷರು ವಿವಿಧ ಪಕ್ಷದ ಮುಖಂಡರು ಯುವಕರು ಮತ್ತು ಮಕ್ಕಳು ಸೇರಿದಂತೆ ಸಾವಿರಾರು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.ಮಳಖೇಡದಲ್ಲಿ ಸಾಮೂಹಿಕ ಪ್ರಾರ್ಥನೆ: ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಅಂಗವಾಗಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಆತ್ಮೀಯತೆಯಿಂದ ತಬ್ಬಿಕೊಂಡು ಶುಭ ಕೋರಿದರು. ಈ ವೇಳೆಯಲ್ಲಿ ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡರಾದ ಜಮೀಯತ್ ಎ ಅಹ್ಲ್ ಹದೀಸ್,ಅಬ್ದುಲ್ ನಬಿ ಸಾಬ್, ಅಬ್ದುಲ್ ಜಬ್ಬಾರ್ ಸಾಬ್, ಹಾಫಿಜ್ ಸಿರಾಜ್ ಮದ್ನಿ, ಫಯಾಜ್ ಅಹ್ಮದ್,ಅನ್ಸರ್ ಸಾಬ್,ಶಕೀಲ್ ಪೇಶೆಂಮಾಮ್ ಉಮರ್,ರಹೇಮನ್ ಗುಲಜರ್, ಬಶೀರ್ ಶೋಯೆಬ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.