ಚಾಮುಂಡೇಶ್ವರಿ ನಗರ ಮಂಡಲದಿಂದ ಯೋಗ ದಿನಾಚರಣೆ

KannadaprabhaNewsNetwork |  
Published : Jun 22, 2025, 11:48 PM IST
31 | Kannada Prabha

ಸಾರಾಂಶ

ಯೋಗ ಎಂಬುದು ಕೇವಲ ವ್ಯಾಯಾಮವಲ್ಲ. ಇದು ದೇಹ, ಮನಸ್ಸು ಮತ್ತು ಆತ್ಮದ ಏಕತೆಯನ್ನು ಸಾಧಿಸುವ ಪವಿತ್ರ ಶಿಸ್ತಿನ ರೂಪ

ಕನ್ನಡಪ್ರಭ ವಾರ್ತೆ ಮೈಸೂರು

ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದ ವತಿಯಿಂದ ರಾಮಕೃಷ್ಣ ಪರಮಹಂಸ ವೃತ್ತದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿವಿಧ ಆಸನಗಳು ಹಾಗೂ ಪ್ರಾಣಾಯಾಮವನ್ನು ಯೋಗ ಗುರು ಪುರುಷೋತ್ತಮ್ ಅಗ್ನಿ ಪ್ರದರ್ಶಿಸಿದರು.

ನಗರ ಮಂಡಲದ ಅಧ್ಯಕ್ಷ ರಾಕೇಶ್ ಭಟ್ ಮಾತನಾಡಿ, ಯೋಗ ಮತ್ತು ಪ್ರಾಣಾಯಾಮ ಜಗತ್ತಿಗೆ ಭಾರತದ ಕೊಡುಗೆ, ಅಂತರಾಷ್ಟ್ರೀಯ ಯೋಗ ದಿನಾಚರಣೆ ಅದರ ಪಾರಂಪರಿಕ ಜ್ಞಾನ ಹಾಗೂ ಆರೋಗ್ಯದತ್ತ ಜಾಗೃತಿ ಮೂಡಿಸುವ ಒಂದು ಪ್ರಯತ್ನವಾಗಿದೆ. ಯೋಗ ಎಂಬುದು ಕೇವಲ ವ್ಯಾಯಾಮವಲ್ಲ. ಇದು ದೇಹ, ಮನಸ್ಸು ಮತ್ತು ಆತ್ಮದ ಏಕತೆಯನ್ನು ಸಾಧಿಸುವ ಪವಿತ್ರ ಶಿಸ್ತಿನ ರೂಪವಾಗಿದೆ ಎಂದರು.

ಯೋಗದ ಮೂಲಕ ನಾವು ನಮ್ಮ ದೈನಂದಿನ ಒತ್ತಡ ನಿಭಾಯಿಸಬಹುದು. ಮನಸ್ಸು ಶಾಂತವಾಗಿರುತ್ತದೆ ಮತ್ತು ದೇಹ ಆರೋಗ್ಯವಾಗಿರುತ್ತದೆ. ಪ್ರತಿದಿನವೂ ಕನಿಷ್ಠ 20 ನಿಮಿಷ ಯೋಗ ಅಭ್ಯಾಸ ಮಾಡುವುದು ನಮ್ಮ ಆರೋಗ್ಯಕ್ಕೂ ಮತ್ತು ಜೀವನ ಶೈಲಿಗೂ ತುಂಬಾ ಸಹಕಾರಿ. ರಾಮಕೃಷ್ಣ ಪರಮಹಂಸರ ಪ್ರತಿಮೆ ಇರುವ ಪ್ರೇರಣಾ ಶಕ್ತಿ ಹೊಂದಿರುವ ಸುಂದರ ವೃತ್ತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಹಮ್ ಫಿಟ್ ಹೈ ತೋ ಇಂಡಿಯಾ ಫಿಟ್ ಹೈ, ಅಂದರೆ ನಾವು ಸದೃಢವಾಗಿದ್ದರೆ ದೇಶವು ಸದೃಢ ಎಂಬ ಭಾವನೆಯಲ್ಲಿ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಸ್ವಸ್ಥ ಭಾರತ ನಿರ್ಮಿಸಲು ಸಂಕಲ್ಪ ಮಾಡಬೇಕು ಎಂದು ಅವರು ನುಡಿದರು.

ಚಾಮುಂಡೇಶ್ವರಿ ನಗರ ಮಂಡಲದ ಬಿಜೆಪಿ ಅಧ್ಯಕ್ಷ ರಾಕೇಶ್ ಭಟ್, ನಗರ ಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮಿ ಕಿರಣ್, ಮಂಡಲದ ಪ್ರಧಾನ ಕಾರ್ಯದರ್ಶಿ ಆರ್. ಸೋಮಶೇಖರ್, ಈರೇಗೌಡ, ಉಪಾಧ್ಯಕ್ಷ ಎಚ್.ಜಿ. ರಾಜಮಣಿ, ಶಿವು ಪಟೇಲ್, ಬಿ.ಸಿ. ಶಶಿಕಾಂತ್, ಎಚ್.ಎಸ್. ಹಿರಿಯಣ್ಣ, ಎಸ್ಟಿ ಮೋರ್ಚಾ ನಗರ ಉಪಾಧ್ಯಕ್ಷ ಎಸ್. ತ್ಯಾಗರಾಜ್ ನಾಯಕ್, ಮಹಿಳಾ ಮೋರ್ಚಾ ನಗರ ಕಾರ್ಯದರ್ಶಿ ವಿಜಯ ಮಂಜುನಾಥ್, ಮಂಡಲದ ಕಾರ್ಯದರ್ಶಿ ಶ್ರೀನಿವಾಸ ಪ್ರಸಾದ್, ಸೋಮಣ್ಣ, ರಾಮಕೃಷ್ಣ ಕ್ರೀಡಾ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಸವಲಿಂಗಪ್ಪ, ಮುಖಂಡರಾದ ರಂಗೇಶ್, ಮಧು ಸೋಮಶೇಖರ್, ಚಂದ್ರಶೇಖರ ಸ್ವಾಮಿ, ರಾಘವೇಂದ್ರ, ಬಸವಣ್ಣ, ಪುಟ್ಟಮ್ಮಣ್ಣಿ, ಮಂಜುಳಾ, ರಮಾಭಾಯಿ, ಗೀತಾ ಮಹೇಶ್, ಹೇಮಲತಾ, ಸುಮಿತ್ರಾ, ರೇವಣ್ಣಸಿದ್ದಪ್ಪ, ಭೈರೇಗೌಡ, ಮಹೇಶ್, ತಿಮ್ಮೇಗೌಡ, ನಿಶಾಂತ್ ಪಟೇಲ್, ಪದ್ಮ ಸೇರಿದಂತೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಭಾಗವಹಿದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ