ರಾಮನಾಥಪುರದಲ್ಲಿ ಬಸ್ ಡಿಪೋ ಕೂಡ ಇದ್ದು ನಿತ್ಯವೂ 250ಕ್ಕೂ ಹೆಚ್ಚು ಸಾರಿಗೆ ಬಸ್‌ಗಳು ಬಂದುಹೋಗುತ್ತವೆ. ಬಸ್‌ಗಳ ಸಂಖ್ಯೆಗೆ ಅನುಗುಣವಾಗಿ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಏಕ ಕಾಲದಲ್ಲಿ 5ರಿಂದ 7 ಬಸ್‌ಗಳು ನಿಲುಗಡೆ ಮಾಡಬಹುದಾಗಿದೆ. ಹಾಸನ, ಮೈಸೂರು, ಪಿರಿಯಾಪಟ್ಟಣ, ಸಾಲಿಗ್ರಾಮ, ಬೆಂಗಳೂರು, ಮಡಿಕೇರಿ, ಸೋಮವಾರಪೇಟೆ, ಹುಣಸೂರು ಸೇರಿದಂತೆ ಇತರೆ ಪಟ್ಟಣಗಳು, ಗ್ರಾಮಗಳಿಗೆ ಬಸ್ ಸಂಚರಿಸುತ್ತಿವೆ. ಬಸ್ ನಿಲ್ದಾಣದಿಂದ 300 ಮೀಟರ್ ಅಂತರದಲ್ಲಿ ಬಸ್ ಘಟಕ ಇದೆ. ಜಾಗದ ಕೊರತೆಯಿಂದ ಇರುವ ಜಾಗವನ್ನು ಅಭಿವೃದ್ಧಿಗೊಳಿಸಲಾಗಿದ್ದರೂ ಕೂಡ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ, ರಕ್ಷಣಾ ವ್ಯವಸ್ಥೆ, ಸೂಕ್ತ ಚರಂಡಿ ವ್ಯವಸ್ಥೆ ಇರುವುದಿಲ್ಲ.
ಕನ್ನಡಪ್ರಭ ವಾರ್ತೆ ರಾಮನಾಥಪುರ
ಇಲ್ಲಿಯ ಪಟ್ಟಣದಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣ ನಿರ್ಮಾಣಗೊಂಡಿದ್ದರೂ ಅಗತ್ಯ ಮೂಲಸೌಕರ್ಯಗಳಿಂದ ವಂಚಿತಗೊಂಡಿವೆ.
ರಾಮನಾಥಪುರದಲ್ಲಿ ಬಸ್ ಡಿಪೋ ಕೂಡ ಇದ್ದು ನಿತ್ಯವೂ 250ಕ್ಕೂ ಹೆಚ್ಚು ಸಾರಿಗೆ ಬಸ್‌ಗಳು ಬಂದುಹೋಗುತ್ತವೆ. ಬಸ್‌ಗಳ ಸಂಖ್ಯೆಗೆ ಅನುಗುಣವಾಗಿ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಏಕ ಕಾಲದಲ್ಲಿ 5ರಿಂದ 7 ಬಸ್‌ಗಳು ನಿಲುಗಡೆ ಮಾಡಬಹುದಾಗಿದೆ. ಹಾಸನ, ಮೈಸೂರು, ಪಿರಿಯಾಪಟ್ಟಣ, ಸಾಲಿಗ್ರಾಮ, ಬೆಂಗಳೂರು, ಮಡಿಕೇರಿ, ಸೋಮವಾರಪೇಟೆ, ಹುಣಸೂರು ಸೇರಿದಂತೆ ಇತರೆ ಪಟ್ಟಣಗಳು, ಗ್ರಾಮಗಳಿಗೆ ಬಸ್ ಸಂಚರಿಸುತ್ತಿವೆ. ಬಸ್ ನಿಲ್ದಾಣದಿಂದ 300 ಮೀಟರ್ ಅಂತರದಲ್ಲಿ ಬಸ್ ಘಟಕ ಇದೆ. ಜಾಗದ ಕೊರತೆಯಿಂದ ಇರುವ ಜಾಗವನ್ನು ಅಭಿವೃದ್ಧಿಗೊಳಿಸಲಾಗಿದ್ದರೂ ಕೂಡ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ, ರಕ್ಷಣಾ ವ್ಯವಸ್ಥೆ, ಸೂಕ್ತ ಚರಂಡಿ ವ್ಯವಸ್ಥೆ ಇರುವುದಿಲ್ಲ.
ಹೋಬಳಿ ಕೇಂದ್ರವಾದರೂ ಸೌಲಭ್ಯಗಳಿಲ್ಲ:
ಬಸ್ ನಿಲ್ದಾಣದಿಂದ 100 ಮೀಟರ್ ಅಂತರದಲ್ಲಿ ಗ್ರಾಪಂ ಕಚೇರಿ, ನಾಡ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಬಾಲಕಿಯರ ಪದವಿಪೂರ್ವ ಕಾಲೇಜು, ಇತರೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಬಸ್‌ಗಳು ಕೂಡ ರಾಮನಾಥಪುರಕ್ಕೆ ಬಂದೇ ಹೋಗಬೇಕಿರುವ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ಅಧಿಕ, ಆದರೂ ಕೂಡ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ.
ಕೊಣನೂರು ನಿಲ್ದಾಣ ಸಮಸ್ಯೆಗಳ ಆಗರ:
ಮತ್ತೊಂದು ಪಟ್ಟಣ ಕೊಣನೂರು. ಇಲ್ಲಿನ ಸಮೀಪದಲ್ಲಿಯೇ ಕಾವೇರಿ ನದಿ ಹರಿಯುತ್ತಿದೆ. ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಇದು ಬಸ್ ನಿಲ್ದಾಣದಿಂದ ಅತೀ ಸಮೀಪದಲ್ಲಿ ಇದೆ. ಇಲ್ಲಿನ ನಿಲ್ದಾಣದ ನೆಲ ಹಾಸಿಗೆಗೆ ಸಂಪೂರ್ಣವಾಗಿ ಕಾಂಕ್ರೀಟ್ ಹಾಕಲಾಗಿದೆ. ಮಡಿಕೇರಿ, ಮಲ್ಲಿಪಟ್ಟಣ, ಕೊಡ್ಲಿಪೇಟೆ ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ, ಬಸ್‌ಗಳು ಸಂಚರಿಸುತ್ತಿವೆ. ಏಕ ಹಾಗೂ ಇತರೆ ಗ್ರಾಮಗಳಿಗೆ ನಿತ್ಯವೂ 200ಕ್ಕೂ ಹೆಚ್ಚು ಕಾಲದಲ್ಲಿ 15 ಕ್ಕೂ ಅಧಿಕ ಬಸ್‌ಗಳು ನಿಲ್ದಾಣದಲ್ಲಿ ನಿಲ್ಲಬಹುದಾಗಿದೆ. ನಿಲ್ದಾಣ ಸುತ್ತಾ ಕಾಂಪೌಂಡ್ ನಿರ್ಮಿಸಿಲ್ಲ. ಇಲ್ಲಿಯೂ ಕೂಡ ಸೆಕ್ಯೂರಿಟಿ ಇಲ್ಲ.
ಕೊಣನೂರು ಬಸ್ ನಿಲ್ದಾಣ ಮುಂಭಾಗದಲ್ಲಿ ವಿಶಾಲವಾದ ಜಾಗವಿದ್ದು, ಫರ್ ಇಂಟರ್‌ಲಾಕ್ ಅಳವಡಿಸಲಾಗಿದೆ. ಕಾಂಪೌಂಡ್ ವ್ಯವಸ್ಥೆ ಇಲ್ಲದ ಪರಿಣಾಮ ನೇರವಾಗಿ ಖಾಸಗಿ ವಾಹನಗಳು ನಿಲ್ದಾಣ ಪ್ರವೇಶಿಸಿ ಮಾಡಿಕೊಳ್ಳುತ್ತಿರು ವುದು ಕಂಡುಬಂದಿದೆ. ಇದನ್ನು ಸಂಚಾರ ನಿಯಂತ್ರಕರು ಪ್ರಶ್ನಿಸಿದರೆ ವಾಹನ ಸವಾರರು ಉಡಾಫೆಯಿಂದ ನಡೆದುಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ.
ಕೊಣನೂರಿನಲ್ಲಿ ಮೊದಲ ಬಾರಿಗೆ ಬಸ್ ನಿಲ್ದಾಣ ನಿರ್ಮಿಸಿದ ಸಂದರ್ಭದಲ್ಲಿ ನಿರ್ಮಿಸಿರುವ ಹಳೆಯ ಶೌಚಾಲಯ ಕಟ್ಟಡವಿದೆ. ಇದು ಅವಸಾನದ ಅಂಚಿನಲ್ಲಿದೆ. ಹಳೆಯ ನಿಲ್ದಾಣವನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದ ವೇಳೆ ನೂತನವಾಗಿ ಶೌಚಾಲಯ ಕಟ್ಟಡ ನಿರ್ಮಿಸಿಲ್ಲ. ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಪ್ರಯ ತಾಣಿಕರು ದುರ್ನಾತ ಬೀರುತ್ತಿದ್ದರೂ ಕೂಡ ಸಂಕಷ್ಟದಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ನೂತನವಾಗಿ ಬಸ್ ನಿಲ್ದಾಣದ ಕಾಮಗಾರಿ ಅಭಿವೃದ್ಧಿಗೊಂಡ ಸಂದರ್ಭದಲ್ಲಿ ವಾಟರ್‌ಲೈಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ನೀರಿನ ಶುದ್ದೀಕರಣ ಘಟವನ್ನು ನಿರ್ಮಿಸಿ ಚಾಲನೆ ನೀಡಲಾಗಿತ್ತು. ಆದರೆ ಹಲವು ವರ್ಷದಿಂದ ಈ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ಸೌಲಭ್ಯವಿಲ್ಲ. ಇದರಿಂದ ಖಾಸಗಿ ಅಂಗಡಿಗಳಿಗೆ ತೆರಳಿ ಹಣತೆತ್ತು ಬಾಟಲ್ ನೀರನ್ನು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.