ಕನ್ನಡಪ್ರಭ ವಾರ್ತೆ ರಾಮನಾಥಪುರಪುರಾಣ ಪ್ರಸಿದ್ಧ ದೇವಾಲಯಗಳ ಬೀಡು ಎನಿಸಿರುವ "ದಕ್ಷಿಣ ಕಾಶಿ " ಎಂದೇ ಪ್ರಖ್ಯಾತಿ ಹೊಂದಿರುವ ರಾಮನಾಥಪುರದ ಪ್ರಸನ್ನ ಶ್ರೀ ಸುಬ್ರಮಣ್ಯಸ್ವಾಮಿ ಷಷ್ಠಿ ಮಹಾರಥೋತ್ಸವ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಅದ್ಧೂರಿಯಾಗಿ ನೆರವೇರಿತು.ರಥೋತ್ಸವದ ಅಂಗವಾಗಿ ದೇಗುಲವು ವಿವಿಧ ರೀತಿಯ ಹೂಗಳಿಂದ ಅಲಂಕೃತಗೊಂಡಿತ್ತು. ಹಗಲು 12 ಗಂಟೆಗೆ ಸರಿಯಾಗಿ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇಗುಲದ ಮುಂಭಾಗದಲ್ಲಿ ನಿಲ್ಲಿಸಿ ವಿವಿಧ ಪುಷ್ಪಗಳಿಂದ ಹಾಗೂ ಬಗ್ಗೆ ಬಗೆಯ ವರ್ಣದ ಬಟ್ಟೆಗಳಿಂದ ಅಲಂಕರಿಸಿದ 40 ಅಡಿ ಎತ್ತರದ ರಥದಲ್ಲಿ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ, ಪೂಜಾ ಕೈಂಕರ್ಯ ನೆರವೇರಿಸಿದರು. ಛತ್ರಿಚಾಮರ, ಚಂಡೆವಾದ್ಯ ಇನ್ನಿತರ ಜನಪದ ಕಲಾತಂಡಗಳೊಂದಿಗೆ ಸುತ್ತಮುತ್ತಲಿನ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರ ಸಮಯದಲ್ಲಿ ಹರ್ಷೋದ್ಗಾರದೊಂದಿಗೆ ಸಾಮೂಹಿಕವಾಗಿ ರಥವನ್ನು ಎಳೆಯುತ್ತಾ ದೇವಸ್ಥಾನದ ಮುಂಭಾಗದಿಂದ ರಥದ ಬೀದಿಯಲ್ಲಿ ತೆರಳಿ ಕಾವೇರಿ ನದಿ ಸೇತುವೆಯವರೆವಿಗೂ ಹಾಗೂ ಅಲ್ಲಿಂದ ಮತ್ತೆ ಸ್ವಸ್ಥಾನಕ್ಕೆ ರಥವನ್ನು ಎಳೆದು ತಂದು ನಿಲ್ಲಿಸಿದರು.ನೂತನ ವಧುವರರಿಂದ ದರ್ಶನ:
-----
* ಬಾಕ್ಸ್:::::::: ಪ್ರತೀತಿಯಂತೆ ಗರುಡ ಪ್ರದಕ್ಷಣೆರಾಮನಾಥಪುರದಲ್ಲಿ ಪ್ರತಿವರ್ಷವೂ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ, ರಥ ಎಳೆಯುವ ವೇಳೆಗೆ ಹಾಜರಾಗುವ ನಾಲ್ಕಾರು ಗರುಡ ಪಕ್ಷಿಗಳು ರಥದ ಮೇಲೆ ಆಗಸದಲ್ಲಿ ಹಾಗೂ ದೇವಾಲಯದ ಮೇಲೆ ಪ್ರದಕ್ಷಣೆ ಹಾಕುವುದು ಪ್ರತಿವರ್ಷದ ಪ್ರತೀತಿಯಾಗಿದ್ದು, ಈ ವರ್ಷವೂ ಸಹ ಗರುಡಗಳ ಆಗಮನವಾಗಿದ್ದು ಭಕ್ತರು ಕಣ್ಣಾರೆ ನೋಡಿ ಧನ್ಯರಾದರು. ನಂತರ ಮಹಾ ರಥಕ್ಕೆ ಪೂಜೆ ಸಲ್ಲಿಸಿ, ಭಕ್ತರು ರಥವನ್ನು ಎಳೆದರು.