ಲಕ್ಷ್ಮೇಶ್ವರ: ಮಹರ್ಷಿ ವಾಲ್ಮೀಕಿ ಒಬ್ಬ ಮಹಾನ್ ಕವಿ. ಅವರು ಸಂಸ್ಕೃತ ಭಾಷೆಯಲ್ಲಿ ರಾಮಾಯಣ ಮಹಾಕಾವ್ಯವನ್ನು ರಚಿಸಿದರು. ಇದರಲ್ಲಿ ಭಗವಾನ್ ರಾಮನ ಸಂಪೂರ್ಣ ಜೀವನಶೈಲಿಯನ್ನು ಇಡಿ ಜಗತ್ತಿಗೆ ತೋರಿಸಿಕೊಟ್ಟ ಮಹರ್ಷಿ ವಾಲ್ಮೀಕಿಯವರ ಜೀವನ ಸಮಾಜಕ್ಕೆ ಒಂದು ಪಾಠವಿದ್ದಂತೆ ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ತಾಲೂಕಾಡಳಿತ ಹಾಗೂ ವಾಲ್ಮೀಕಿ ಸಮಾಜದವರಿಂದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಪ್ರಪಂಚಕ್ಕೆ ರಾಮಾಯಣದಂತ ಮೇರುಕೃತಿ ನೀಡಿದ ಕೀರ್ತಿ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ. ೨೪ ಸಾವಿರಕ್ಕೂ ಹೆಚ್ಚು ಶ್ಲೋಕಗಳನ್ನು ವಾಲ್ಮೀಕಿಯವರು ರಚನೆ ಮಾಡಿ ರಾಮಾಯಣದಂತ ಶ್ರೇಷ್ಠ ದಾರ್ಶನಿಕ ಗ್ರಂಥ ರಚನೆ ಮಾಡಿದ್ದು ಇತಿಹಾಸ. ಮಹರ್ಷಿ ವಾಲ್ಮೀಕಿಯವರ ಆಚಾರ- ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ನ. ೩ರಂದು ವಾಲ್ಮೀಕಿ ಜಯಂತಿಯನ್ನು ಲಕ್ಷ್ಮೇಶ್ವರ ಪಟ್ಟಣದಲ್ಲಿ ಅದ್ಧೂರಿಯಾಗಿ ಸಮಾಜದ ವತಿಯಿಂದ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು.ಹಿರಿಯ ಮುಖಂಡ ಎನ್.ಎನ್. ನೆಗಳೂರ ಮಾತನಾಡಿ, ಜಗತ್ತಿಗೆ ರಾಮಾಯಣದಂಥ ಮಹಾನ್ ಕಾವ್ಯವನ್ನು ಕೊಡುಗೆ ನೀಡಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ. ಕಾಡಿನಲ್ಲಿ ಬೇಟೆಯಾಡುತ್ತಾ ಜೀವನ ಸಾಗಿಸುತ್ತಿರುವ ವೇಳೆ ಜ್ಞಾನೋದಯವಾಗಿ ಮಹರ್ಷಿ ವಾಲ್ಮೀಕಿ ಮನ ಪರಿವರ್ತನೆ ಹೊಂದಿದ್ದು ಜಗತ್ತಿಗೆ ತಿಳಿದ ವಿಷಯವಾಗಿದೆ. ಮಹಾನ್ ದಾರ್ಶನಿಕರ ವ್ಯಕ್ತಿತ್ವವನ್ನು ಒಂದೇ ಜಾತಿಗೆ ಸೀಮಿತಗೊಳಿಸುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.ತಹಸೀಲ್ದಾರ್ ಧನಂಜಯ ಎಂ., ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ನಾಗರಾಜ ಮಡಿವಾಳರ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮಣ್ಣ ಯಂಗಾಡಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಪಿಎಸ್‌ಐ ನಾಗರಾಜ ಗಡದ, ಮುಖಂಡರಾದ ನಿಂಗಪ್ಪ ಬನ್ನಿ, ಗಂಗಾಧರ ಮೆಣಸಿನಕಾಯಿ, ಅನಿಲ ಮುಳಗುಂದ, ಥಾವರೆಪ್ಪ ಲಮಾಣಿ, ರಾಜು ಓಲೇಕಾರ, ನಾಗರಾಜ ಹುಣಸಿಮರದ, ಬಿ.ಎಸ್. ಹಡಪದ, ಕೆ.ಓ. ಹೂಲಿಕಟ್ಟಿ, ಹನುಮಂತ ಜಾಲಿಮರದ, ದುಂಡೇಶ ಕೊಟಗಿ, ಸಿ.ಆರ್. ಕೆಂಚಕ್ಕನವರ, ಹನುಮಂತಪ್ಪ ನಂದೆಣ್ಣವರ, ಹೆಸ್ಕಾಂ ಎಇ ಆಂಜನೇಯಪ್ಪ, ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಂ.ಎಸ್. ಸಂಕನೂರ, ಮಾಂತೇಶ ತಳವಾರ, ಸಚಿನ್ ಮೇಲ್ಮುರಿ, ಬಿ.ಬಿ. ಬಳಿಗಾರ, ಕಲ್ಲಪ್ಪ ಗಂಗಣ್ಣವರ ಮುಂತಾದವರಿದ್ದರು. ಶಿಕ್ಷಕ ಈಶ್ವರ ಮೇಡ್ಲೇರಿ ನಿರೂಪಿಸಿದರು.