ಕನ್ನಡಪ್ರಭ ವಾರ್ತೆ ಹಾಸನ
ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲೂಕು ಘಟಕ ನಗರದ ಉಡುಪಿ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ೧೯೩೩ ಜುಲೈ ೧ರಂದು ಹಾಸನದ ಎಚ್. ಎಸ್. ಭೀಮಯ್ಯ ಹಾಗೂ ಎಚ್.ಎನ್. ಪುಟ್ಟಮ್ಮ ದಂಪತಿ ಪುತ್ರರಾಗಿ ಜನಿಸಿದ ರಮೇಶ್ ಅವರನ್ನು ತಂದೆ ಮೂಲ ರಂಗಭೂಮಿ ಕಲಾವಿದರಾದ್ದರಿಂದ ಸಹಜವಾಗಿ ಇವರಿಗೂ ರಂಗಕಲೆಯಲ್ಲಿ ಆಸಕ್ತಿ ಉಂಟಾಯಿತು. ಇವರು ಪ್ರೌಢಶಾಲಾ ಹಂತದಲ್ಲಿದ್ದಾಗ ಭಾರತದ ಅತ್ಯಂತ ಗಾಂಧಿ ನೇತೃತ್ವದಲ್ಲಿ ಸ್ವಾತಂತ್ರ‍್ಯ ಚಳವಳಿ ತೀವ್ರ ಕಾವ್ಯ ಪಡೆದಿತ್ತು. ಅದೇ ಸಮಯಕ್ಕೆ ಮೈಸೂರು ಚಲೋಜಾವ್ ಚಳವಳಿ ಪ್ರಾರಂಭವಾಗಿತ್ತು. ಚಿಕ್ಕವಯಸ್ಸಿನಲ್ಲಿ ದೇಶ ಅಭಿಮಾನ ಅಪಾರವಾಗಿ ಹೊಂದಿದ್ದ ರಮೇಶ ಅವರು ಸ್ವಾತಂತ್ರ್ಯ ಚಳವಳಿಯಲ್ಲಿಯೂ ಧುಮಿಕಿ ಏಳು ದಿನಗಳ ಕಾಲ ಜೈಲುವಾಸ ಅನುಭವಿಸಿದರು. ಆಲೂರು, ಸಕಲೇಶಪುರದಲ್ಲಿ ದೈಹಿಕ ಶಿಕ್ಷಕರಾಗಿದ್ದ ಸಂದರ್ಭದಲ್ಲಿಯೇ ಹವ್ಯಾಸ ತಂಡವೊಂದನ್ನು ಕಟ್ಟಿ ‘ಉಂಡಾಡಿ ಗುಂಡ’ ದಲ್ಲಿನ ‘ಗುಂಡನ’ ಪಾತ್ರ, ‘ದೇವದಾಸಿ’ ನಾಟಕದಲ್ಲಿನ ನಾಜೂಕಯ್ಯನ ಪಾತ್ರದಲ್ಲಿ ಖ್ಯಾತಿಗಳಿಸಿದರು. ಹಾಸನದ ಜಾತ್ರೆಗೆ ನಾಟಕ ಮಂಡಳಿಗಳೊಂದಿಗೆ ಬರುತ್ತಿದ್ದ ಡಾ. ರಾಜಕುಮಾರ್, ನರಸಿಂಹರಾಜು, ಬಾಲಕೃಷ್ಣರವರೊಂದಿಗೆ ಓಡಾಡಿದ ಕ್ಷಣಗಳನ್ನು, ಹಾಗೆಯೇ ಎಚ್ಚಮ್ಮನಾಯಕದಲ್ಲಿನ ಶಾಸ್ತ್ರಿ ಪಾತ್ರ ನೀಡಿ ಸ್ವತಃ ಡಾ. ರಾಜಕುಮಾರವರೇ ಇವರಿಗೆ ಮೇಕಪ್ ಮಾಡಿದ್ದರು. ನಟನೆಯ ಜೊತೆಗೆ ನಾಟಕ ರಚನೆಯನ್ನು ಮಾಡಿದ ರಮೇಶರವರು ಬಾಡ್ಗೆ ಮನೆ ಚಿರೋಟಿ ದೆವ್ವ, ಅಭಿನಯದ ಅಧ್ವಾನ, ಕಲಾತಪಸ್ವಿ, ವರಶಾಪ, ಮಹಾಪರಿವರ್ತನೆ ನಾಟಕಗಳನ್ನು ರಚಿಸಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಹಾಸನ ಜಿಲ್ಲಾ ಮಾಜಿ ಗೌರವಾಧ್ಯಕ್ಷರಾದ ರವಿ ನಾಕಲಗೂಡು ಮಾತನಾಡಿ ಹಿಂದಿನಿಂದಲೂ ಇವರನ್ನೂ ಸಾಹಿತ್ಯ ಆವೃತ್ತಗೊಂಡಿತ್ತು. ಹೀಗೆ ಮಾತನಾಡುತ್ತಾ ಅವರನ್ನು ಸಾಹಿತ್ಯ ಕ್ಷೇತ್ರದತ್ತ ಎಳೆದೆ ಕುವೆಂಪು, ತ.ರಾಸು, ಡಿ.ವಿ.ಜಿ, ರಾಜರತ್ನಂ, ಗೊರೂರು, ಎಸ್.ಕೆ. ಕರೀಂಖಾನ್, ಜ್ವಾಲನಯ್ಯ, ಅನಕೃ ಮುಂತಾದವರ ಮಾರ್ಗದರ್ಶನ ಅವರಿಗಿತ್ತು. ಇವರ ಸಾಮಾಜಿಕ ಹಾಗೂ ಸಾಹಿತ್ಯಿಕ ತುಡಿತ ಯೋಗ ಶಾಲೆಯಿಂದ ಭುವನೇಶ್ವರಿ ಗೂಡಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಕರೆತಂದಿತು. ಕ್ರಿಯಾಶೀಲರಾದ ರಮೇಶ್ರವರಿಗೆ ಯೋಗ ಶಿಕ್ಷಕರಾಗಿ ಸಿಕ್ಕಾ ಜನ ಪ್ರಿಯತೆ ಇಲ್ಲಿಯೂ ಮುಂದುವರೆಯಿತು. ಇವರ ಅವಧಿಯಲ್ಲಿ ಹೆಸರಾಂತ ಸಾಹಿತಿಗಳಾದ ಕಿ.ರಂ. ನಾಗರಾಜ, ಬಾನುಮುಷ್ತಾಕ್, ಪ್ರತಿಭಾನ್ವಿತ ವಾಗ್ಮಿಗಳಾದ ಎ.ಎಸ್. ಕಾಳೇಗೌಡ ಮುಂತಾದ ಮಹನೀಯರನ್ನು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರನ್ನಾಗಿ ಮಾಡಿ ಕನ್ನಡ ತಾಯಿಯ ರಥವನ್ನು ಎಳೆದರು. ಅತ್ಯುತ್ತಮ ಸಂಘಟನಾ ಚಾತುರ್ಯ ಹೊಂದಿದ ರಮೇಶ್ ಈಗಿರುವ ಹೊಯ್ಸಳ ಹೆಬ್ಬಾಗಿಲು, ಹೊಯ್ಸಳ ಲಾಂಛನ, ಬಯಲು ರಂಗಮಂದಿರ, ಧ್ವನಿವರ್ಧಕ ವ್ಯವಸ್ಥೆ ಮುಂತಾದ ಮೂಲ ಸೌಕರ್ಯಗಳನ್ನು ಆರು ಲಕ್ಷಕ್ಕೂ ಅಧಿಕ ಮೌಲ್ಯವುಳ್ಳ ಆಸ್ತಿ ಮಾಡಿ ಪರಿಷತ್ತನ್ನು ಸಿರಿವಂತಗೊಳಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮಾಜಿ ಗೌರವಾಧ್ಯಕ್ಷರಾದ ರವಿ ನಾಕಲಗೂಡು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಲೂರು ತಾಲ್ಲೂಕಿನ ಅಧ್ಯಕ್ಷ ಡಿ. ಎಂ. ವರದರಾಜು, ಪತ್ರಕರ್ತ ರಘುನಂದನ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ಜಿಲ್ಲೆಯ ಉಪಾಧ್ಯಕ್ಷೆ ಎಚ್. ಎಸ್. ಭಾನುಮತಿ, ತಾಲೂಕು ಅಧ್ಯಕ್ಷೆ ಕೆ.ಸಿ.ಗೀತಾ, ತಾಲ್ಲೂಕು ಕಾರ್ಯದರ್ಶಿ ಸಿ.ಎನ್. ನೀಲಾವತಿ, ಆಲೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಆರ್. ಶ್ರೀನಿವಾಸ್, ಉಪಾಧ್ಯಕ್ಷ ಎಂ. ಆರ್. ವೇಣುಗೋಪಾಲ್, ದೈಹಿಕ ಶಿಕ್ಷಣ ಶಿಕ್ಷಕಿ ಗಿರಿಜಾ ನಿರ್ವಾಣಿ, ಭಾರತ ಸೇವಾದಳ ವಲಯ ಸಂಘಟಕಿ ರಾಣಿ ವಿ.ಎಸ್, ಎಲ್. ಐ. ಸಿ. ಪ್ರಕಾಶ್, ಹಾಸನ ಜಿಲ್ಲೆಯ ಕೇಂದ್ರ ಸಹಕಾರ ಬ್ಯಾಂಕ್ ವಲಯ ವ್ಯವಸ್ಥಾಪಕ ರವಿ ಕುಮಾರ್, ಶಿಕ್ಷಕರ ಸಂಘದ ಮುಖಂಡ ಉದಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.