ನಾಡ ಪಿಸ್ತೂಲ್‌ ಮಾರಾಟ ಜಾಲ; ಆರೋಪಿ ಸೆರೆ

KannadaprabhaNewsNetwork |  
Published : Oct 04, 2026, 01:45 AM IST
ಚಿತ್ರ 3ಬಿಡಿಆರ್3ಬೀದರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಆರೋಪಿಗಳಿಂದ ವಶಪಡಿಸಿಕೊಂಡಿದ್ದ ನಾಡ ಪಿಸ್ತೋಲ್‌ ಪ್ರದರ್ಶಿಸುಸುತ್ತಿರುವುದು. | Kannada Prabha

ಸಾರಾಂಶ

ಕಳೆದ ಜುಲೈ ತಿಂಗಳಿನಲ್ಲಿ ಬೀದರ್‌ನಲ್ಲಿ ನಾಡ ಪಿಸ್ತೂಲ್‌ ಮಾರಾಟ ಜಾಲ ಪತ್ತೆಯಾದ ಘಟನೆಯ ಪ್ರಮುಖ ಆರೋಪಿಯನ್ನು ಪೊಲೀಸರು ಹೈದ್ರಾಬಾದ್‌ನಲ್ಲಿ ಬಂಧಿಸಿ ಅವನ ವಶದಿಂದ 5 ನಾಡ ಪಿಸ್ತೂಲ್‌. 12 ಜೀವಂತ ಮದ್ದುಗುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಲ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್‌

ಕಳೆದ ಜುಲೈ ತಿಂಗಳಿನಲ್ಲಿ ಬೀದರ್‌ನಲ್ಲಿ ನಾಡ ಪಿಸ್ತೂಲ್‌ ಮಾರಾಟ ಜಾಲ ಪತ್ತೆಯಾದ ಘಟನೆಯ ಪ್ರಮುಖ ಆರೋಪಿಯನ್ನು ಪೊಲೀಸರು ಹೈದ್ರಾಬಾದ್‌ನಲ್ಲಿ ಬಂಧಿಸಿ ಅವನ ವಶದಿಂದ 5 ನಾಡ ಪಿಸ್ತೂಲ್‌. 12 ಜೀವಂತ ಮದ್ದುಗುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಲ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ತಿಳಿಸಿದ್ದಾರೆ.ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಬೀದರ್‌ ಸಬ್‌ ಅರ್ಬನ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದರಲ್ಲಿ ಆಗಲೇ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿತ್ತು. ಸದರಿ ಪ್ರಕರಣದಲ್ಲಿ ತಲೆ ಮರೆಯಿಸಿಕೊಂಡಿದ್ದ ಉಳಿದ ಇಬ್ಬರು ಆರೋಪಿತರ ಪತ್ತೆ ಕುರಿತು ಎಸ್ಪಿ ಹಾಗೂ ಎಎಸ್ಪಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎನ್‌ಡಿ ಸನಧಿ ನೇತೃತ್ವದಲ್ಲಿ ಹುಮನಾಬಾದ್‌ ಸಿಪಿಐ ಸಂತೋಷ ಎಲ್‌. ತಟ್ಟೆಪಳ್ಳಿ ಹಾಗೂ ಸಿಬ್ಬಂದಿಗಳಾದ ಎಂಡಿ ಆರೀಫ, ಪ್ರಶಾಂತ, ನಾಗೇಶ, ಗಂಗಾಧರ, ಸೂರ್ಯಕಾಂತ, ಅನೀಲ, ಹಣಮಂತ, ಮಂಜುನಾಥ, ರಮೇಶ, ಗುರುನಾಥ, ಶೇಖಮೊಹಿದ್ದೀನ್‌, ರಾಜಕುಮಾರ ದಾನಾ, ರಮೇಶ, ಉಮೇಶ, ರಾಜಕುಮಾರ ಅವರನ್ನೊಳಗೊಂದ ತಂಡವು ಪ್ರಕರಣದಲ್ಲಿನ ಪ್ರಮುಖ ಆರೋಪಿ ಬಲಬೀರಸಿಂಗ್‌ @ ಶೇರಾ ಜಾಧವ ನಾಂದೇಡ ಮೂಲದವನಾಗಿದ್ದು ಇತನಿಗೆ ಹೈದ್ರಾಬಾದನಲ್ಲಿ ದಸ್ತಗಿರಿ ಮಾಡಿ ಆರೋಪಿಯಿಂದ 3 ಪಿಸ್ತೊಲ್‌ ಹಾಗೂ 4 ಜೀವಂತ ಮದ್ದುಗುಂಡುಗಳನ್ನು ಜಪ್ತಿ ಮಾಡಿ ವಿಚಾರಣೆ ಮಾಡಿದಾಗ ಪ್ರಕರಣದಲ್ಲಿ ಭಾಗಿಯಾಗಿದ್ದ ಆನಂದಕುಮಾರ ಜಹೀರಾಬಾದ, ಈಶ್ವರ ಯರನಳ್ಳಿ, ಹಾಗೂ ಅಶ್ವಿನ ಜನವಾಡ ಅವರ ಬಗ್ಗೆ ಮಾಹಿತಿ ನೀಡಿದ ಮೇರೆಗೆ ಸದರಿ 3 ಜನ ಆರೋಪಿತರನ್ನು ದಸ್ತಗಿರಿ ಮಾಡಿ ಆನಂದಕುಮಾರ ಇತನ ವಶದಿಂದ 01 ಪಿಸ್ತೊಲ್, 04 ಜೀವಂತ ಮದ್ದುಗುಂಡು ಹಾಗೂ ಈಶ್ವರ ಮತ್ತು ಅಶ್ವಿನ ಅವರ ವಶದಿಂದ ಒಂದು ಪಿಸ್ತೊಲ್ ಹಾಗೂ 04 ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.ಹೀಗೆ ಒಟ್ಟು 4 ಲಕ್ಷ ರು. ಮೌಲ್ಯದ 5 ಪಿಸ್ತೂಲ್‌ 12 ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಂಡು 4 ಜನ ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸ ಲಾಗಿದೆ ಎಂದು ತಿಳಿಸಿದರು. ಈ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ಕುರಿತು ಪ್ರಮುಖ ಆರೋಪಿ ಬಲಬೀರಸಿಂಗ್‌ @ ಶೇರಾ ಜಾಧವ ಇತನಿಗೆ ನ್ಯಾಯಾಲಯದಿಂದ ಪೊಲೀಸ್‌ ಕಸ್ಟಡಿಗೆ ತೆಗೆದುಕೊಂಡಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಆರೋಪಿತರು ಹಾಗೂ ಮುದ್ದೆ ಮಾಲಿನ ಪತ್ತೆ ಕುರಿತು ವಿಚಾರಣೆ/ತನಿಖೆ ಮುಂದುವರೆದಿದೆ ಎಂದರು.ಪ್ರಮುಖ ಆರೋಪಿ ಬಲಬೀರಸಿಂಗ್‌ @ ಶೇರಾ ಜಾಧವ ಇತನ ವಿರುದ್ದ ಮಹಾರಾಷ್ಟ್ರ ರಾಜ್ಯದ ವಿವಿಧ 5 ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅವರಿಂದ ಕಣ್ತಪ್ಪಿಸಿ ತೆಲಂಗಾಣಕ್ಕೆ ಹೋಗಿದ್ದಾನೆ ಎಂದು ಎಸ್ಪಿ ಪ್ರದೀಪ ಗುಂಟಿ ತಿಳಿಸಿದರು.ಈ ಸಂದರ್ಭದಲ್ಲಿ ಡಿವೈಎಸ್ಪಿ ಎನ್‌ಡಿ ಸನಧಿ, ಹುಮನಾಬಾದ್‌ ಸಿಪಿಐ ಸಂತೋಷ್‌ ಎಲ್‌. ತಟ್ಟೆಪಳ್ಳಿ ಇದ್ದರು.

---

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಸರ್ಕಾರ ಎಕರೆಗೆ ₹25000 ಪರಿಹಾರ ನೀಡಲಿ
ಯುವ ಸಮೂಹಕ್ಕೆ ಉತ್ತಮ ಸಂದೇಶಗಳು ಅಗತ್ಯ