ಬಾಗಿವಾಳು ಗ್ರಾಮದಲ್ಲಿ ಸೌಹಾರ್ದತೆಯಿಂದ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಜತೆಗೂಡಿ ಯುಗಾದಿ ಹಬ್ಬದ ದಿನವಾದ ಗುರುವಾರ ಸಂಭ್ರಮದಿಂದ ಆಚರಿಸುವ ರಾಮೇಶ್ವರಸ್ವಾಮಿ ಕರಗ ಮಹೋತ್ಸವ ಅಥವಾ ಬಿಂದಿಗೆ ಜಾತ್ರೆ ವೈಭವದಿಂದ ನಡೆಯಿತು. ಹರಕೆ ಹೊತ್ತ ಭಕ್ತರು ಕರಗದ ಹರಿವಾಣಕ್ಕೆ ನಾಣ್ಯಗಳನ್ನು ತುಂಬಿ ಪ್ರಾರ್ಥಿಸಿಕೊಳ್ಳುವ ಸಂಪ್ರದಾಯವನ್ನು ಭಕ್ತರು, ಶ್ರದ್ಧಾಭಕ್ತಿಯಿಂದ ಪಾಲಿಸುವ ಮೂಲಕ ಭಕ್ತಿ ಸಮರ್ಪಿಸಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ತಾಲೂಕಿನ ಬಾಗಿವಾಳು ಗ್ರಾಮದಲ್ಲಿ ಸೌಹಾರ್ದತೆಯಿಂದ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಜತೆಗೂಡಿ ಯುಗಾದಿ ಹಬ್ಬದ ದಿನವಾದ ಗುರುವಾರ ಸಂಭ್ರಮದಿಂದ ಆಚರಿಸುವ ರಾಮೇಶ್ವರಸ್ವಾಮಿ ಕರಗ ಮಹೋತ್ಸವ ಅಥವಾ ಬಿಂದಿಗೆ ಜಾತ್ರೆ ವೈಭವದಿಂದ ನಡೆಯಿತು. ಯುಗಾದಿ ಹಬ್ಬದ ದಿನವಾದ ಗುರುವಾರ ಮುಂಜಾನೆ ಬ್ರಾಹ್ಮೀ ಮಹೂರ್ತದಲ್ಲಿ ಬಾಗಿವಾಳು ಗ್ರಾಮದ ಶ್ರೀರಾಮೇಶ್ವರ ದೇವಾಲಯ ಹಾಗೂ ಹೇಮಾವತಿ ನದಿ ತೀರದಲ್ಲಿ ಪೂಜೆ ಸಲ್ಲಿಸಿ ಬಿಂದಿಗೆ(ಕರಗ) ಹೊತ್ತು ಕೊಂಡು ಬಾಗಿವಾಳು ದೇವಾಲಯಗಳಿಗೆ ಪ್ರದಕ್ಷಿಣೆ ಹಾಕಿ ಗ್ರಾಮದಲ್ಲಿ ಬಸವರಾಜು ಅವರು ಬಿಂದಿಗೆ ನೃತ್ಯ ಪ್ರದರ್ಶಿಸಿದರು. ವೀರಶೈವ ಲಿಂಗಾಯಿತ ಜನಾಂಗದ ಜಂಗಮ ಪಂಗಡಕ್ಕೆ ಸೇರಿದ ಬಸವರಾಜು ಅವರು ಪೂರ್ವಿಕರು ಆಚರಿಸಿಕೊಂಡ ಬಂದಂತಹ ಪದ್ದತಿಯಂತೆ ಶಿವರಾತ್ರಿ ಹಬ್ಬದ ದಿನದಿಂದ ಆಚರಣೆ ಕೈಗೊಂಡು ಕಳೆದ ಐದು ದಿನಗಳಿಂದ ಉಪವಾಸ ಆಚರಣೆಯೊಂದಿಗೆ ಕಟ್ಟುನಿಟ್ಟಿನ ವ್ರತಾಚರಣೆ ಪೂರೈಸಿದರು ಹಾಗೂ ಜಿಂದಿಗೆ(ಕರಗ) ಮಹೋತ್ಸವವನ್ನು ನಡೆಸಿಕೊಟ್ಟರು. ಹರಕೆ ಹೊತ್ತ ಭಕ್ತರು ಕರಗದ ಹರಿವಾಣಕ್ಕೆ ನಾಣ್ಯಗಳನ್ನು ತುಂಬಿ ಪ್ರಾರ್ಥಿಸಿಕೊಳ್ಳುವ ಸಂಪ್ರದಾಯವನ್ನು ಭಕ್ತರು, ಶ್ರದ್ಧಾಭಕ್ತಿಯಿಂದ ಪಾಲಿಸುವ ಮೂಲಕ ಭಕ್ತಿ ಸಮರ್ಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.