ಕನ್ನಡಪ್ರಭ ವಾರ್ತೆ ಚವಡಾಪುರ
ಬಿಜೆಪಿ ಯುವ ಮುಖಂಡ ರಿತೇಶ ಗುತ್ತೇದಾರ ಅವರು ಅಫಜಲ್ಪುರ ತಾಲೂಕಿನ ಭೈರಾಮಡಗಿ ಗ್ರಾಮದಲ್ಲಿ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮದ ವೇಳೆ ಮುಸಲ್ಮಾನ ಬಾಂಧವರ ಬಡಾವಣೆಯಲ್ಲಿ ಮಂತ್ರಾಕ್ಷತೆ ವಿತರಣೆ ವೇಳೆ ಮುಸಲ್ಮಾನ ಬಾಂಧವರು ಸಂತಸದಿಂದ ಮಂತ್ರಾಕ್ಷತೆ ಸ್ವಿಕರಿಸಿ ರಾಮ ಮಂದಿರ ಲೋಕಾರ್ಪಣೆಯ ದಿನವನ್ನು ಸಂಭ್ರಮಿಸುತ್ತೇವೆಂದು ತಿಳಿಸಿದ ಘಟನೆ ನಡೆಯಿತು.
ಯುವ ಮುಖಂಡ ರಿತೇಶ ಗುತ್ತೇದಾರ ಮಾತನಾಡಿ ರಾಮ ಕೇವಲ ಹಿಂದುಗಳ ಸ್ವತ್ತಲ್ಲ, ಸಮಸ್ತ ಭಾರತೀಯರ ಸ್ವತ್ತು. ಎಲ್ಲರೂ ರಾಮನನ್ನು ಎದೆಯಲ್ಲಿಟ್ಟು ಮೆರೆಸುವ ದಿನ ಬಂದಿವೆ. ಹೀಗಾಗಿ ಜ.22ರಂದು ಎಲ್ಲರೂ ಸೇರಿ ಸಂಭ್ರಮಿಸೋಣ ಎಂದರು.ಈ ಸಂದರ್ಭದಲ್ಲಿ ವಿಜಯಕುಮಾರ ಗುತ್ತೇದಾರ,ದಸ್ತಯ್ಯ ಗುತ್ತೇದಾರ, ದತ್ತು ಪಾಟೀಲ, ರವಿ ತೆಗ್ಗೆಳ್ಳಿ, ಚಾಂದ ಪಟೇಲ ಸೇರಿದಂತೆ ಗ್ರಾಮಸ್ಥರು ಇದ್ದರು.