ಪ್ರವಾಸಿ ತಾಣವಾದ ವಿಜಯ ವಿಠಲ ದೇವಸ್ಥಾನ ಕಲಾ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು
ಹೊಸಪೇಟೆ: ವಿಶ್ವ ಪರಂಪರೆ ಹಂಪಿಯ ವಿಜಯ ವಿಠಲ ದೇವಸ್ಥಾನಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಬ್ಯಾಟರಿ ಚಾಲಿತ ವಾಹನಗಳಿಗೆ ವಿಶೇಷ ಚೇತನಸ್ನೇಹಿಯಾಗಿಸಲು ಬ್ಯಾಟರಿ ಚಾಲಿತ ವಾಹನಗಳಿಗೆ ಹಿಂಭಾಗದಲ್ಲಿ ಹೆಚ್ಚುವರಿಯಾಗಿ ರ‍್ಯಾಂಪ್ ಅಳವಡಿಸಲಾಗಿದೆ. ವಿಶೇಷಚೇತನರು ತಮ್ಮ ವೀಲ್ ಚೇರ್ ಗಳನ್ನು ಬಳಸಿ ಬ್ಯಾಟರಿ ಚಾಲಿತ ವಾಹನದಲ್ಲಿ ಕೂಡಲು ಅನುಕೂಲವಾಗಲಿದೆ. ಆ ಮೂಲಕ ಪ್ರವಾಸಿ ತಾಣವಾದ ವಿಜಯ ವಿಠಲ ದೇವಸ್ಥಾನ ಕಲಾ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು ಎಂದು ಜಿಪಂ ಸಿಇಒ ನೋಂಗ್ಜಾಯ್ ಮೊಹ್ಮದ್ ಅಲಿ ಅಕ್ರಂ ಷಾ ತಿಳಿಸಿದರು.
ಹಂಪಿಯಲ್ಲಿ ವಿಶೇಷಚೇತನರಿಗೆ ಆಗುತ್ತಿರುವ ಸಮಸ್ಯೆಗಳನ್ನು ಗಮನಿಸಿ, ತಾಪಂ ಇಒಗೆ 2018-2019ನೇ ಆದಿಭಾರ ಶುಲ್ಕ ಯೋಜನೆಯ ಉಳಿಕೆ ಅನುದಾನದಲ್ಲಿ ರ‍್ಯಾಂಪ್ ಅಳವಡಿಸಲು ನಿರ್ದೇಶನ ನೀಡಲಾಗಿತ್ತು. ಅದರಂತೆ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ 20 ವಾಹನಗಳ ಪೈಕಿ 6 ಬ್ಯಾಟರಿಚಾಲಿತ ವಾಹನಗಳಿಗೆ ಅಳವಡಿಸಲಾಗಿದ್ದು, ವಿಶೇಷಚೇತನರಿಗೆ ತುಂಬಾ ಉಪಯುಕ್ತವಾಗಲಿದೆ ಎಂದರು.
ಹಂಪಿಯಲ್ಲಿ ಸಂಚರಿಸುವ ಬ್ಯಾಟರಿ ಚಾಲಿತ ವಾಹನಗಳಿಗೆ ವಿಶೇಷ ಚೇತನ ಸ್ನೇಹಿಯಾಗಿಸಲು ಬ್ಯಾಟರಿ ಚಾಲಿತ ವಾಹನಗಳಿಗೆ ಹಿಂಭಾಗದಲ್ಲಿ ಹೆಚ್ಚುವರಿಯಾಗಿ ರ‍್ಯಾಂಪ್ ಅಳವಡಿಸಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.