ಶೃಂಗೇರಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ : ಪದೇ ಪದೇ ಟ್ರಾಫಿಕ್ ಸಮಸ್ಯೆ

KannadaprabhaNewsNetwork |  
Published : Jun 29, 2026, 01:15 AM IST
ೇ್‌ | Kannada Prabha

ಸಾರಾಂಶ

ಶೃಂಗೇರಿ ಪಟ್ಟಣದಲ್ಲಿ ಮುಖ್ಯ ರಸ್ತೆ, ಗಾಂಧಿ ಮೈದಾನ, ಬೈಪಾಸ್ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕಳೆದ ಕೆಲ ದಿನಗಳಿಂದ ವಾಹನಗಳನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ನಿಲ್ಲಿಸುತ್ತಿರುವುದರಿಂದ ಮುಖ್ಯ ರಸ್ತೆಗಳಲ್ಲಿ ಪದೇ ಪದೇ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಇನ್ನುಳಿದ ಪ್ರಮುಖ ಸ್ಥಳಗಳಲ್ಲಿ ಸಚಾರಕ್ಕೆ ಅಡ್ಡಿಯಾಗುತ್ತಿದೆ.

- ಸಂಚಾರಕ್ಕೆ ಪರದಾಟ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಪಟ್ಟಣದಲ್ಲಿ ಮುಖ್ಯ ರಸ್ತೆ, ಗಾಂಧಿ ಮೈದಾನ, ಬೈಪಾಸ್ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕಳೆದ ಕೆಲ ದಿನಗಳಿಂದ ವಾಹನಗಳನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ನಿಲ್ಲಿಸುತ್ತಿರುವುದರಿಂದ ಮುಖ್ಯ ರಸ್ತೆಗಳಲ್ಲಿ ಪದೇ ಪದೇ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಇನ್ನುಳಿದ ಪ್ರಮುಖ ಸ್ಥಳಗಳಲ್ಲಿ ಸಚಾರಕ್ಕೆ ಅಡ್ಡಿಯಾಗುತ್ತಿದೆ.

ಶೃಂಗೇರಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪ್ರವಾಸಿ ತಾಣವೂ ಆಗಿದ್ದು ಪ್ರತಿದಿನ ಸಾವಿರಾರು ಪ್ರವಾಸಿಗರು ಶೃಂಗೇರಿಗೆ ಭೇಟಿ ನೀಡುತ್ತಾರೆ. ಶ್ರೀಮಠದ ಮುಂಭಾಗದಿಂದ ಭಾರತೀ ಬೀದಿ ರಸ್ತೆ, ಗಾಂಧಿ ಮೈದಾನ ಸಹಿತ ಪ್ರಮುಖ ಬೀದಿಗಳಲ್ಲಿ ಪ್ರವಾಸಿಗರು, ಪ್ರವಾಸಿ ವಾಹನಗಳು ತುಂಬಿರುತ್ತದೆ.

ವಾಹನ ನಿಲುಗಡೆ ಪ್ರದೇಶವಾದ ಗಾಂಧಿ ಮೈದಾನದಲ್ಲಿ ಈ ಹಿಂದೆ ಪಟ್ಟಣ ಪಂಚಾಯಿತಿಯಿಂದ ಖಾಸಗಿಯವರು ವಾಹನ ನಿಲುಗಡೆ ಟೆಂಡರ್ ಪಡೆದು ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ನಿರ್ವಹಿಸುತ್ತಿದ್ದರು. ಕಳೆದ ವರ್ಷ ಗಾಂಧಿ ಮೈದಾನ ಹೊಳೆ ಕರಾಬು ಪ್ರದೇಶ ಎಂಬ ಕಾರಣದಿಂದ ಪಟ್ಟಣ ಪಂಚಾಯಿತಿ ಹಿಡಿತದಿಂದ ಜಿಲ್ಲಾಡಳಿತದ ನಿಯಂತ್ರಣಕ್ಕೆ ಒಳಪಟ್ಟು, ವಾಹನ ಪಾರ್ಕಿಂಗ್ ಟೆಂಡರ್ ವ್ಯವಸ್ಥೆ ರದ್ದುಪಡಿಲಾದ ಪರಿಣಾಮ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಹೇಳುವವರು ಕೇಳುವವರು ಇಲ್ಲವಾಗಿ ಕಂಡಕಂಡಲ್ಲಿ ವಾಹನ ನಿಲ್ಲಿಸಲಾಗುತ್ತಿದೆ.

ಗಾಂಧಿ ಮೈದಾನ, ಭಾರತೀ ಬೀದಿ ಕೆವಿಆರ್ ರಸ್ತೆ ಪ್ಯಾರಲಾಲ್ ಬೈಪಾಸ್ ರಸ್ತೆಯುದ್ದಕ್ಕೂ 2 ಕಡೆಗಳಲ್ಲಿ ಪ್ರವಾಸಿ ವಾಹನ ಗಳು ಎಗ್ಗಿಲ್ಲದೇ ನಿಲ್ಲುತ್ತಿದೆ. ಪಟ್ಟಣದ ಬಸ್ ನಿಲ್ದಾಣ ಮುಂಭಾಗದಿಂದ ಹರಿಹರ ಬೀದಿ ಭಾರತೀ ಬೀದಿ ಸಂತೇ ಮಾರು ಕಟ್ಟೆವರೆಗೂ ರಸ್ತೆಯ ಬದಿಗಳಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಬೆಳಿಗ್ಗೆಯಿಂದ ರಾತ್ರಿವರೆಗೂ ಪದೇ ಪದೇ ಗಂಟೆಗಟ್ಟಲೆ ಟ್ರಾಫಿಕ್ ಸಮಸ್ಯೆ ಎದುರಾಗಿ ಸಂಚಾರಕ್ಕೆ ಹರಸಾಹಸ ಪಡಬೇಕಿದೆ.

ಸಂಬಂಧ ಪಟ್ಟ ಇಲಾಖೆ, ಅಧಿಕಾರಿಗಳು ಮೌನ ವಹಿಸಿರುವುದು ಅಚ್ಚರಿ ಮೂಡಿಸುತ್ತಿದೆ. ಭಾರತೀ ಬೀದಿ ಪಟ್ಟಣದ ಮುಖ್ಯ ರಸ್ತೆಯಾಗಿರುವುದರಿಂದ ಪ್ರವಾಸಿ ವಾಹನಗಳು ಹಗಲು ರಾತ್ರಿ ಪಾರ್ಕಿಂಗ್ ಮಾಡುತ್ತಿದ್ದು ಇದೇ ಮಾರ್ಗದಲ್ಲಿ ವಿವಿಧೆಡೆಗೆ ಹೋಗುವ ಬಸ್ ಸಂಚಾರಕ್ಕೆ ಅಡ್ಡಿಯಾಗಿ ಪ್ರಯಾಣಿಕರಿಗೂ ಕಿರಿ ಕಿರಿಯಾಗುತ್ತಿದೆ. ಪಪಂ, ಜಿಲ್ಲಾಡಳಿತ,ಪೋಲೀಸ್ ಇಲಾಖೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕಿದ್ದರೂ ಯಾವುದೇ ಕ್ರಮ ವಹಿಸುತ್ತಿಲ್ಲ.-- ಕೋಟ್‌--.

ಶೃಂಗೇರಿ ಪ್ರಮುಖ ಧಾರ್ಮಿಕ ಕ್ಷೇತ್ರ. ಪ್ರತಿದಿನ ಸಾವಿರಾರು ಪ್ರವಾಸಿಗರು, ವಾಹನಗಳು ಬರುತ್ತಿರುವುದರಿಂದ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಅಗತ್ಯವಿದೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ, ಅಧಿಕಾರಿಗಳು ಮುಖ್ಯರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುತ್ತಿರುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

---ರಾಜೇಶ್ ಮೇಘಳಬೈಲು, ಸ್ಥಳೀಯ

-- ಕೋಟ್‌--

ಪಟ್ಟಣದ ಭಾರತೀ ಬೀದಿಯಲ್ಲಿ ಪದೇ ಪದೇ ಟ್ರಾಫಿಕ್ ಸಮಸ್ಯೆಯಿಂದ ಜನರಿಗೆ ತೊಂದರೆಯಾಗುತ್ತಿದೆ. ಗಂಟೆಗಟ್ಟಲೇ ಕೆಲವೊಮ್ಮೆ ರಸ್ತೆ ಮೇಲೆ ನಿಲ್ಲಬೇಕಿದೆ. ಸಂಬಂಧಪಟ್ಟವರು ಕೂಡಲೇ ಈ ಸಮಸ್ಯೆ ಗಂಭೀರವಾಗಿ ಪರಿಗಣಿಸಬೇಕು.

- ಕೃಷ್ಣ ಸಾಲ್ಮರ ,,ಸ್ಥಳೀಯ

28 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದ ಗಾಂಧಿ ಮೈದಾನ,ಭಾರತೀ ಬೀದಿ ಕೆವಿಆರ್ ವೃತ್ತ ಸಂಪರ್ಕ ಕಲ್ಪಿಸುವ ಪ್ಯಾರಲಾಲ್ ಬೈಪಾ ರಸ್ತೆ ಸಮೀಪ ಅಡ್ಡಾದಿಡ್ಡಿಯಾಗಿ ಪ್ರವಾಸಿ ವಾಹನಗಳು ನಿಂತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ಹಿತಕ್ಕಾಗಿ ಬಿಡದಿ ಟೌನ್‌ಶಿಪ್ ಯೋಜನೆ ಕೈ ಬಿಡಿ
ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಿ