ಕನ್ನಡಪ್ರಭ ವಾರ್ತೆ ಹಾರನಹಳ್ಳಿ
ನಂತರ ಭಕ್ತಾದಿಗಳಿಗೆ ಪೊಂಗಲ್, ಪಾನಕ, ಫಲಹಾರಗಳನ್ನು ಹಂಚಲಾಯಿತು. ಸಾವಿರಾರು ಮಂದಿ ರಥೋತ್ಸವದಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು. ಸೂರ್ಯಮಂಡಲೋತ್ಸವ, ಮೊಲಬೀಡುವ ಸೇವೆ ನಡೆಯಿತು.
ಗುತ್ತಿನಕೆರೆ ರಂಗನಾಥ ಸ್ವಾಮಿಯವರ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ರಾತ್ರಿ ಶ್ರೀ ಸ್ವಾಮಿಯವರ ತಿರುಕಲ್ಯಾಣೋತ್ಸವವು ಭಕ್ತಾದಿಗಳ ಸಮ್ಮುಖದಲ್ಲಿ ಸಡಗರ, ಸಂಭ್ರಮದ ನಡುವೆ ವಿಜೃಂಭಣೆಯಿಂದ ನಡೆಯಿತು. ಅರ್ಚಕರು ಮಹಾಸಂಕಲ್ಪ, ಮಂಗಳ ಅಷ್ಠಕ, ವೇದಮಂತ್ರ ಪಠಣ, ಪುರಾಣ ಶ್ಲೋಕ ಪಠಿಸುತಾ ಶ್ರೀವಾರಿಯವರಿಗೆ ಹಾರ ಹಾಕುವುದರ ಮೂಲಕ ಕಲ್ಯಾಣೋತ್ಸವಕ್ಕೆ ಚಾಲನೆ ನೀಡಲಾಯಿತು. ಕೆಂಗೇರಿ ರಾಮಾನುಜ ಮಠದ ವೇದಬ್ರಹ್ಮ ಶ್ರೀರಾಮಚಂದ್ರಮೂರ್ತಿ ಮಾತನಾಡಿ, ಭಕ್ತಿ, ಜ್ಞಾನದ ಧರ್ಮದ ನೆಲೆವೀಡು ಶ್ರೀ ರಂಗನಾಥಸ್ವಾಮಿ ಕ್ಷೇತ್ರ, ಶ್ರೀ ಸ್ವಾಮಿಯವರ ಆರಾಧನೆಯಿಂದ ಲೋಕಕಲ್ಯಾಣವಾಗಲಿ ಎಂದು ಕಲ್ಯಾಣೋತ್ಸವ ಆಚರಿಸಿಕೊಂಡು ಬರುತ್ತಿದ್ದೇವೆ. ಸರ್ವರಿಗೂ ಒಳಿತಾಗಲಿ ಎಂದರು.ಈ ಕಾರ್ಯಕ್ರಮದಲ್ಲಿ ದೇವಾಲಯದ ಅರ್ಚಕರು, ಗ್ರಾಮಸ್ಥರು ಭಾಗವಹಿಸಿದ್ದರು. ಶ್ರೀರಂಗನಾಥಸ್ವಾಮಿ ಉತ್ಸವ ಮೂರ್ತಿಯವರಿಗೆ ವಿಶೇಷ ಹೂವಿನ ತೋಮಾಲೆಗಳಿಂದ ಶೃಂಗರಿಸಲಾಗಿತ್ತು.