ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಬಹುವರ್ಷಗಳಿಂದ ಕಳೆಗುಂದಿದ್ದ ಹೋಳಿ ಹಬ್ಬದ ರಂಗಪಂಚಮಿ ಆಚರಣೆಗೆ ಈ ಬಾರಿ ಬಸವೇಶ್ವರ ಸೇವಾ ಸಮಿತಿ ಕಳೆ ತಂದಿದೆ. ಹೋಳಿ ಹಬ್ಬದಂಗವಾಗಿ ಬಸವೇಶ್ವರ ಸೇವಾ ಸಮಿತಿ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯುವ ರಂಗಪಂಚಮಿ ಆಚರಣೆ ಮೂಲಕ ಬಣ್ಣದಾಟಕ್ಕೆ ತೆರೆ ಬಿದ್ದಿತ್ತು. ರಂಗಪಂಚಮಿಯಲ್ಲಿ ಮಕ್ಕಳು, ಯುವಕರು, ಹಿರಿಯರು ಪಾಲ್ಗೊಳ್ಳುವ ಮೂಲಕ ರಂಗಪಂಚಮಿಯ ಬಣ್ಣದಾಟದ ಸಂಭ್ರಮ ಹೆಚ್ಚಿಸಿದರು. ರಂಗಪಂಚಮಿ ಶಾಂತಿಯುತವಾಗಿ ನಡೆಸಲಾಯಿತು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಂಗಪಂಚಮಿ ಆಚರಣೆಯಂಗವಾಗಿ ಹತ್ತು ಗಂಟೆಗೆ ಸಿದ್ದಲಿಂಗ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯ ಸಾನಿಧ್ಯದಲ್ಲಿ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವರಾಜ ಹಾರಿವಾಳ ಸೇರಿದಂತೆ ಅನೇಕ ಮುಖಂಡರು ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಣ್ಣವನ್ನು ಎರಚುವ ಮೂಲಕ ಅದ್ದೂರಿ ರಂಗಪಂಚಮಿಗೆ ಚಾಲನೆ ನೀಡಿದರು. ಬಣ್ಣದೋಕುಳಿಯ ಮೆರವಣಿಗೆಯಲ್ಲಿ ಟ್ರ್ಯಾಕ್ಟರ್‌ದಲ್ಲಿಟ್ಟಿದ್ದ ಬ್ಯಾರಲ್‌ಗಳಲ್ಲಿದ್ದ ಬಣ್ಣವನ್ನು ಮೆರವಣಿಗೆಯುದ್ದಕ್ಕೂ ನೆರೆದ ಜನರ ಮೇಲೆ ಎರಚುವ ಮೂಲಕ ರಂಗಿನಾಟ ಆಡಿದರು.
ರಂಗಪಂಚಮಿಯ ಬಣ್ಣದಾಟದಲ್ಲಿ ಪಟ್ಟಣದ ಬಹುತೇಕ ಹಿರಿಯರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಎಲ್ಲರೂ ಪರಸ್ಪರ ಬಣ್ಣ ಹಚ್ಚಿ ಸಂಭ್ರಮ ಪಟ್ಟರು. ಹಲಗೆ ನಾದಕ್ಕೆ, ಡಿಜೆ ಸೌಂಡಿಗೆ ಮೆರವಣಿಗೆಯುದ್ದಕ್ಕೂ ಯುವಕರು ಕುಣಿದು ಕುಪ್ಪಳಿಸಿದರು. ಮೆರವಣಿಗೆ ವೇಳೆ ಹೋಳಿ ಹಾಡುಗಳು ಜೋರಾಗಿದ್ದವು. ಬಸವೇಶ್ವರ ವೃತ್ತದಿಂದ ಆರಂಭವಾದ ಮೆರವಣಿಗೆಯು ಅಗಸಿ, ಮಹಾರಾಜರ ಮಠ, ಬಸವಜನ್ಮ ಸ್ಮಾರಕ ರಸ್ತೆ, ಪತ್ತಾರ ಗಲ್ಲಿ, ಹಾರಿವಾಳ ಗಲ್ಲಿ ಸುತ್ತಿ ಮೆರವಣಿಗೆ ಪುನಃ ಅಗಸಿಗೆ ಆಗಮಿಸಿತು.ಮೆರವಣಿಗೆಯುದ್ದಕ್ಕೂ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ. ಶಿವಪ್ರಕಾಶ ಶಿವಾಚಾರ್ಯರು ಜನರೊಂದಿಗೆ ಹೆಜ್ಜೆ ಹಾಕಿ ರಂಗಪಂಚಮಿಗೆ ಮೆರಗು ತಂದಿದ್ದು ವಿಶೇಷ. ಪಟ್ಟಣದ ಬಸವ ಜನ್ಮ ಸ್ಮಾರಕದ ಮುಂಭಾಗ ರಾಷ್ಟ್ರೀಯ ಬಸವಸೈನ್ಯದಿಂದ ರೇನ್ ಡ್ಯಾನ್ಸ್ ವ್ಯವಸ್ಥೆ ಮಾಡಲಾಗಿತ್ತು. ಡಿಜೆ ಹಾಡುಗಳಿಗೆ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮ ಪಟ್ಟರು. ಮಧ್ಯಾಹ್ನ 3 ಗಂಟೆವರೆಗೂ ರೇನ್ ಡ್ಯಾನ್ಸ್ ನಡೆಯಿತು.
ರಂಗಪಂಚಮಿ ಆಚರಣೆಯಲ್ಲಿ ಎಸ್.ಎಸ್.ಝಳಕಿ, ಎಚ್.ಎಸ್.ಬಿರಾದಾರ, ಲೋಕನಾಥ ಅಗರವಾಲ, ಬಸವರಾಜ ಗೊಳಸಂಗಿ, ಸಂಗನಗೌಡ ಚಿಕ್ಕೊಂಡ, ಅನಿಲ ಅಗರವಾಲ, ಎಂ.ಜಿ.ಆದಿಗೊಂಡ, ಬಿ.ಕೆ.ಕಲ್ಲೂರ, ಶೇಖರ ಗೊಳಸಂಗಿ, ರವಿ ಪಟ್ಟಣಶೆಟ್ಟಿ, ಅಶೋಕ ಹಾರಿವಾಳ, ಶಂಕರಗೌಡ ಬಿರಾದಾರ, ರವಿ ರಾಠೋಡ, ಶ್ರೀಕಾಂತ ಕೊಟ್ರಶೆಟ್ಟಿ, ಸಂಗಯ್ಯ ಕಾಳಹಸ್ತೇಶ್ವರಮಠ, ಶಿವಾನಂದ ಮಂಗಾನವರ, ಡಾ.ಬಸವರಾಜ ಕೋಟಿ, ರವಿಗೌಡ ಚಿಕ್ಕೊಂಡ, ಸಿದ್ದು ಉಕ್ಕಲಿ, ಸಿ.ಎಸ್.ಪಾಟೀಲ, ಸುರೇಶಗೌಡ ಪಾಟೀಲ, ಸದಾನಂದ ಯಳಮೇಲಿ, ಶಿವಲಿಂಗಯ್ಯ ತೆಗ್ಗಿನಮಠ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ವಿವೇಕಾನಂದ ಕಲ್ಯಾಣಶೆಟ್ಟಿ, ಆರ್.ಜಿ.ಅಳ್ಳಗಿ, ಮುತ್ತು ಕಿಣಗಿ, ಜಟ್ಟಿಂಗರಾಯ ಮಾಲಗಾರ, ರಮೇಶ ಯಳಮೇಲಿ, ಪ್ರವೀಣ ಪೂಜಾರಿ, ಅಮರ ಗಾಯಕವಾಡ, ಶ್ರೀಕಾಂತ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಅವಟಿ, ಬಸವಂತ ಅಡಗಿಮನಿ, ಸಿದ್ದಣ್ಣ ಕಲ್ಲೂರ, ಮಹಾಂತೇಶ ಯಳಮೇಲಿ, ಅಶೋಕ ಕಲ್ಲೂರ, ಬಸವರಾಜ ಚೌರಿ, ಉದಯ ಮಾಂಗಲೇಕರ, ಶಂಕರ ಕ್ಷೀರಸಾಗರ, ಮುದಕಣ್ಣ ಹೊರ್ತಿ, ಎಚ್.ಬಿ.ಬಾರಿಕಾಯಿ, ಶ್ರೀಶೈಲ ಪತ್ತಾರ ಸೇರಿ ನೂರಾರು ಜನರು ಸೇರಿದ್ದರು.