ಪೋಷಕರು, ಮಕ್ಕಳ ಕಣ್ಣು ತೆರೆಸುವ ನಾಟಕ ಮೈ ಫ್ಯಾಮಿಲಿ

KannadaprabhaNewsNetwork |  
Published : Mar 12, 2025, 12:45 AM IST
41 | Kannada Prabha

ಸಾರಾಂಶ

ಗಣೇಶ ಮಂದರ್ತಿ ಅವರ ಸಂಗೀತ ಮತ್ತು ನಿರ್ದೇಶನ

ಸಾಂಸ್ಕೃತಿಕ ನಗರ ಮೈಸೂರಿನಲ್ಲಿರುವ ರಂಗಾಯಣದಲ್ಲಿ '''''''' ಮೈ ಫ್ಯಾಮಿಲಿ'''''''' ನಾಟಕವು ಬಹಳ ಸದ್ದು ಮಾಡುತ್ತಿದೆ. ಮೈಸೂರು ವಿಶ್ವವಿದ್ಯಾನಿಲಯದ ಎಲ್ಲಾ ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಈ ನಾಟಕವನ್ನು ವೀಕ್ಷಿಸುತ್ತಾ ತಮ್ಮದೇ ಆದ ರೀತಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ಈ ನಾಟಕ ರಂಗಾಯಣದ ನಿರ್ದೇಶಕ ಸತೀಶ ತಿಪಟೂರು ಅವರ ಒತ್ತಾಸೆಯಿಂದ ಮೂಡಿಬಂದಿದೆ. ಇದರ ಮೂಲಕಥೆ ಗೌತಮಿಯವರದ್ದಾಗಿದೆ. ಗಣೇಶ ಮಂದರ್ತಿ ಅವರ ಸಂಗೀತ ಮತ್ತು ನಿರ್ದೇಶನ ಇದೆ. ಶ್ರವಣ್ ಹೆಗ್ಗೋಡು ಅವರು ಗೊಂಬೆಗಳ ಪರಿಕಲ್ಪನೆ ಮತ್ತು ವಿನ್ಯಾಸ ಮಾಡಿದ್ದು ರಂಗವಿನ್ಯಾಸ ಎಚ್.ಕೆ ದ್ವಾರಕನಾಥ ಅವರದು. ಅರಸೀಕೆರೆ ಯೋಗನಂದ ಸಂಚಾಲಕರಾಗಿದ್ದಾರೆ. ಬೆಳಕಿನ ವಿನ್ಯಾಸವನ್ನು ಮಹೇಶ ಕಲ್ಪತ್ತಿ ಅದ್ಭುತವಾಗಿ ರೂಪಿಸಿದ್ದಾರೆ. ಈ ನಾಟಕ ಮಕ್ಕಳಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೆ ಹೆಚ್ಚು ಪ್ರಸ್ತುತವಾಗಿದೆ. ನಾಟಕದ ಆರಂಭವು ನಾಟಕವು ಮಕ್ಕಳಿಗಾಗಿ ಹಾಗೂ ಮಕ್ಕಳು ಎಂದರೇ ಯಾರು? ಎಂಬ ಪ್ರಶ್ನೆಯೊಂದಿಗೆ ಪ್ರೇಕ್ಷಕರ ಹೃದಯಕ್ಕೆ ಛೂ ಬಾಣ ಬಿಟ್ಟು ಆನಾವರಣವಾಗುತ್ತದೆ. ಶಾಲೆಯಿಂದ ಮನೆಗೆ ಓಡೊಡಿ ಬರುವ ಮಕ್ಕಳ ಪಾತ್ರಗಳಾದ ಶ್ಯಾಮ್ ಮತ್ತು ಸಾನ್ವಿ ಅವರನ್ನು ಪೋಷಕರಿಲ್ಲದ ಟಿವಿ ಮತ್ತು ಮೊಬೈಲ್ ಸ್ವಾಗತಿಸುತ್ತವೆ. ಇವರಿಬ್ಬರು ಟಿವಿ ಮತ್ತು ಮೊಬೈಲ್ ಜಗತ್ತಿಗೆ ಹೊರಳುತ್ತಾರೆ. ಮೊಬೈಲ್ ನಲ್ಲಿರುವ ಗೇಮ್, ಪೇಸ್ ಬುಕ್, ವಾಟ್ಸ್ಪಾ ಪ್ ಪಬ್ಜಿಗಳ ಸೆಳೆತಕ್ಕೆ ಒಳಗಾಗಿರುತ್ತಾರೆ. ಸಾನ್ವಿಯು ಅಮ್ಮ ನಾನು ನಿನ್ನ ಜೊತೆ ಹೊರಗೆ ಬರುತ್ತೇನೆ ತುಂಬಾ ದಿನ ಆಯಿತು ಹೊರ ಹೋಗಿ ಎಂದಾಗ ಅವಳ ಅಮ್ಮ ಹೇಳುವ ಮಾತು ಮತ್ತೇ ಮತ್ತೇ ಆರ್ತನಾದವಾಗಿ ಕೇಳಿಸುತ್ತದೆ. ಬೇಡ ಮನೆಯಲ್ಲೇ ಇರಿ, ಟಿವಿ ನೋಡಿ, ಮೊಬೈಲ್ ನೋಡಿ ಎನ್ನುವ ಮಾತು ಇಂದು ಎಲ್ಲರ ಮನೆಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಈ ಮೂರು ವಾಕ್ಯಗಳು ಮಕ್ಕಳನ್ನು ಮತ್ತಷ್ಟು ದಾರಿ ತಪ್ಪಿಸುತ್ತೀವೆ.

ಗ್ರಾಮಿಣ ಬದುಕಿನಲ್ಲೂ ತಂದೆ -ತಾಯಿ ಇಬ್ಬರು ದುಡಿಯುತ್ತಿದ್ದರು ಮಕ್ಕಳು ನೆರೆಹೊರೆಯ ಮಕ್ಕಳೊಂದಿಗೆ ಕಾಲ ಕಳೆಯುತ್ತವೆ. ನಗರಗಳಲ್ಲಿ ಪಕ್ಕದ ಮನೆಯವರ ಪರಿಚಯವೇ ಇರುವುದಿಲ್ಲ. ಮಗುವಿಗೆ ಹೊರಗಿನ ಪ್ರಪಂಚದ ಅರಿವೆ ಇರುವುದಿಲ್ಲ. ಮಗುವಿಗೆ ಊಟ ಮಾಡಿಸಲು ಮೊಬೈಲ್ ಬೇಕು, ಅಳು ನಿಲ್ಲಿಸಲು ಮೊಬೈಲ್ ಬೇಕು, ಮಲಗಿಸಲು ಮೊಬೈಲ್ ಬೇಕು, ಟೈಂಪಾಸ್ ಮಾಡಲು ಮೊಬೈಲ್ ಬೇಕು. ಅದರಲ್ಲೂ ಕೋವಿಡ್ ನಂತರದ ಕಾಲಘಟ್ಟದಲ್ಲಿ ಮೊಬೈಲ್ ಎಲ್ಲರ ಮನೆ ಮತ್ತು ಮನಗಳನ್ನು ಮಕ್ಕಳಿಂದ ಹಿಡಿದು ವಯೋವೃದ್ದದವರಿಗೂ ಎಲ್ಲರ ಕೈಯಲ್ಲಿ ಕುಣಿಯುತ್ತಿದೆ.

ಅಂದು ಮಕ್ಕಳಿಗೆ ಊಟ ಮಾಡಿಸಲು ತಾಯಿ ಚಂದಮಾಮನನ್ನು ತೋರಿಸುತ್ತಿದ್ದಳು. ಮಲಗಿಸಲು ಜೋಗುಳ ಹಾಡುತ್ತಿದ್ದಳು. ಅಜ್ಜಿ- ತಾತ ಕಥೆ ಹೇಳುತ್ತಿದ್ದರು. ಅವೆಲ್ಲ ಮಾಯವಾಗಿ ಮೊಬೈಲ್ ನೋಡಿ ನೋಡಿ ರಾತ್ರಿಯಲ್ಲೂ ಮಕ್ಕಳು ಭಯದಿಂದ ಕನವರಿಸುತ್ತಿವೆ. ತಾತ ತಂಬೂರಿ ಜವರಯ್ಯ ಹೇಳುವ ರಾಗಿ ಬೊಮ್ಮನ ಕಥೆಗಳು ಮಕ್ಕಳ ಮನಸ್ಸನ್ನು ಮುದಗೊಳಿಸುತ್ತಿದ್ದವು. ಶ್ಯಾಮ್ ಮೊಬೈಲ್ ನೋಡಿ ಅದರಿಂದ ರಾತ್ರಿ ಪರಿತಪಿಸುವ ದೃಶ್ಯವಂತು ಅಮೋಘವಾಗಿ ಮೂಡಿಬಂದಿದೆ. ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿ ಎಲ್ಲರನ್ನು ಬೆರಗುಗೊಳಿಸುತ್ತದೆ. ಮಕ್ಕಳ ಮುಂದೆ ತಂದೆ-ತಾಯಿ ಜಗಳ ವಾಡಿದರೆ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಹಲವು ಸಂಗತದಲ್ಲಿ ಮೂಡಿದೆ.

ಸಾಮಾಜಿಕ ಕಥೆಯೊಳಗೆ ರಾಮಾಯಣದ ಕಥೆಯು ನಾಟಕದಲ್ಲಿ ಕಾಣಿಸುತ್ತದೆ. ಕೊನೆಗೆ ಶ್ಯಾಮ ಮತ್ತು ಸ್ಟಾನ್ವಿ ಅವರ ಅಪ್ಪ, ಅವನ ಹೆಂಡತಿ, ತಂಬೂರಿ ಜವರ ಎಲ್ಲರೂ ಒಂದು ಗೂಡಿ ಸೆಲ್ಪಿ ತೆಗೆದು ಕೊಳ್ಳುತ್ತಾ ಒಂದಾಗುತ್ತಾರೆ. ಸಿರಿಯನ್ನು ಮಾದಪ್ಪ ಮೇಸ್ಷ್ರು ಮತ್ತೆ ಶಾಲೆಗೆ ಸೇರಿಸುವುದರ ಮೂಲಕ ನಾಟಕ ಅಂತ್ಯವಾಗುತ್ತದೆ.-ಫೋಟೋ 10 ಎಂವೈಎಸ್‌ 40-- ಡಾ. ಮಹೇಶ್‌ ದಳಪತಿ, ಪ್ರಾಂಶುಪಾಲರು. ಶ್ರೀ ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೃಢ ಸಂಕಲ್ಪ, ಅಚಲ ವಿಶ್ವಾಸದಿಂದ ಯಶಸ್ಸು ಸಾಧ್ಯ
ಧಾರ್ಮಿಕ, ಪ್ರಾಚೀನ ಮಾಹಿತಿಯುಳ್ಳ ಕ್ಯಾಲೆಂಡರ್ ಬಿಡುಗಡೆ