ಕನ್ನಡಪ್ರಭ ವಾರ್ತೆ ವಿಜಯಪುರ
ದೇಶ ಕಂಡ ವೀರ ಮಹಿಳೆ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿಯನ್ನು ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ಥಾಪಿಸಿರುವುದು ಶ್ಲಾಘನೀಯ. ಆದರೆ ಕಳೆದ 3 ವರ್ಷಗಳಾದರೂ ಮೂರ್ತಿ ಅನಾವರಣ ಗೊಳ್ಳದಿರುವುದು ರಾಣಿ ಚನ್ನಮ್ಮಳ, ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ನೋವು ತಂದಿದೆ. ಆದ್ದರಿಂದ ಆದಷ್ಟು ಬೇಗನೆ ಮೂರ್ತಿಯನ್ನು ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಅನಾವರಣ ಮಾಡುವ ಕಾರ್ಯವನ್ನು ಕೂಡಲೇ ಕೈಗೊಳ್ಳಬೇಕು ಎಂದು ಸಮಿತಿಯವರು ಆಗ್ರಹಿಸಿದರು.
ಚನ್ನಮ್ಮಳ ಮೂರ್ತಿ ಸುತ್ತಲೂ ಅಸ್ವಚ್ಛತೆಯಿಂದ ಕೂಡಿದ್ದು, ನಾಯಿ-ನರಿಗಳ ಆಶ್ರಯತಾಣವಾಗಿದೆ. ಇದು ರಾಷ್ಟ್ರ ನಾಯಕಿಗೆ ಮಾಡುತ್ತಿರುವ ಘೋರ ಅಪಮಾನ. ಈ ವಿಳಂಬ ನೀತಿ ಕೈಬಿಟ್ಟು, ಅಭಿಮಾನಿಗಳ ಹಾಗೂ ಸಾರ್ವಜನಿಕರ ಸಹನೆ ಪರೀಕ್ಷಿಸಬಾರದು. ಈ ವಿಷಯವನ್ನು ರಾಜಕೀಯಕರಣಗೊಳಿಸದೇ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆದಷ್ಟು ಬೇಗನೆ ಮೂರ್ತಿ ಅನಾವರಣಗೊಳಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹಾಗೂ ನಗರ ಶಾಸಕ ಶ್ರೀ ಬಸನಗೌಡ ಪಾಟೀಲ ಯತ್ನಾಳಗೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.ಎಸ್.ಬಿ.ಪಾಟೀಲ, ಎಂ.ಎಸ್.ಪಾಟೀಲ ಕೋರಳ್ಳಿ, ನ್ಯಾಯವಾದಿ ದಾನೇಶ ಅವಟಿ, ಡಾ.ಆನಂದ ಜಿ.ಕುಲಕರ್ಣಿ, ಪರಿಸರವಾದಿ ಅಂಬಾದಾಸ ಜೋಶಿ, ನಾಗರಾಜ ಬಿರಾದಾರ, ಸಚಿನಗೌಡ ಪಾಟೀಲ ಕೋರವಾರ, ಬಸವರಾಜ ಜಾನರೆಡ್ಡಿ, ಗುರುಪಾದಪ್ಪ ಓಜಿ, ವಿಜಯಕುಮಾರ ಜಾಬಾ, ನ್ಯಾಯವಾದಿಗಳಾದ ಎಸ್.ಎಂ.ಪೊಲೀಸ್ ಪಾಟೀಲ, ಎಸ್.ಎಂ.ಪೊಲೀಸ್‌ಪಾಟೀಲ, ಸಿ.ಎಂ.ಗಬ್ಬೂರ, ಎಂ.ಎಸ್.ಬಗಲಿ, ಆರ್.ಎಂ.ಮಣೂರ, ಡಾ.ಶಶಿಕಾಂತ ಸಕ್ರಿ, ಸುರೇಶಗೌಡ ಪಾಟೀಲ, ಪಾರೀಶ ಶಿರಹಟ್ಟಿ ಸೇರಿದಂತೆ ಮುಂತಾದವರಿದ್ದರು.