ರಾಣಿ ಚೆನ್ನಮ್ಮ ದೇಶಕ್ಕಾಗಿ ಹೋರಾಡಿದ ಧೀರ ಮಹಿಳೆ: ಸೋಮಶೇಖರ ಕೆರಿಮನಿ

KannadaprabhaNewsNetwork |  
Published : Oct 26, 2025, 02:00 AM IST
ಪೊಟೋ-ಸಮೀಪದ ಶಿಗ್ಲಿಯಲ್ಲಿ ರಾಣಿ ಚನ್ನಮ್ಮನ ಜಯಂತಿ ಕಾರ್ಯಕ್ರಮವನ್ನು ಚನ್ನಮ್ಮನ ಭಾವಚಿತ್ರಕ್ಕೆ ಪುಷ್ರ್ಪಾಣೆ ಮಾಡಿದ ಗಣ್ಯರು.  | Kannada Prabha

ಸಾರಾಂಶ

ಶಿಗ್ಲಿಯ ಗ್ರಾಪಂ ಸಭಾಂಗಣದಲ್ಲಿ ಶನಿವಾರ ಕಿತ್ತೂರ ರಾಣಿ ಚೆನ್ನಮ್ಮನ ಜಯಂತ್ಯುತ್ಸವದಲ್ಲಿ ಉಪನ್ಯಾಸಕ ಸೋಮಶೇಖರ ಕೆರಿಮನಿ ಉಪನ್ಯಾಸ ನೀಡಿದರು.

ಲಕ್ಷ್ಮೇಶ್ವರ: ಕಿತ್ತೂರು ರಾಣಿ ಚೆನ್ನಮ್ಮ ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಣೆ ಮಾಡಿದ ವೀರ ಮಹಿಳೆಯಾಗಿದ್ದರು ಎಂದರೆ ತಪ್ಪಾಗಲಾರದು ಎಂದು ಉಪನ್ಯಾಸಕ ಸೋಮಶೇಖರ ಕೆರಿಮನಿ ಹೇಳಿದರು.

ಸಮೀಪದ ಶಿಗ್ಲಿಯ ಗ್ರಾಪಂ ಸಭಾಂಗಣದಲ್ಲಿ ಶನಿವಾರ ಕಿತ್ತೂರ ರಾಣಿ ಚೆನ್ನಮ್ಮನ ಜಯಂತ್ಯುತ್ಸವ ಆಚರಣೆಯಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.

ಜಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಿಂದ 35 ವರ್ಷ ಮೊದಲೇ ಕರ್ನಾಟಕದಲ್ಲಿ ಬ್ರಿಟೀಷರ ವಿರುದ್ದ ರಣಕಹಳೆ ಮೊಳಗಿಸಿದ್ದು ನಮ್ಮ ನಾಡಿನ ಹೆಮ್ಮೆಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ. ಈ ಹೋರಾಟ 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿ ಆಯಿತು. ಕಾಕತಿಯ ಮಗಳಾಗಿ ಅಕ್ಟೋಬರ್ 23, 1778ರಲ್ಲಿ ದೇಸಾಯಿ ಮನೆತನದಲ್ಲಿ ಜನಿಸಿ ಕಿತ್ತೂರಿನ ಸೊಸೆಯಾಗಿ ಹೋರಾಟ ಮಾಡಿದ್ದು ಇತಿಹಾಸದಲ್ಲಿ ದಾಖಲೆಯಾಗಿದೆ, ಧಾರವಾಡದ ಡಿಸ್ಟ್ರಿಕ್ಟ್ ಕಲೆಕ್ಟರ್ ಥ್ಯಾಕರೆಯನ್ನು ತನ್ನ ಸಹಚರರಾದ ಆಮಟೂರ ಬಾಳಪ್ಪನ ಗುಂಡಿಗೆ ಬಲಿಯಾಗಿ ಕಿತ್ತೂರಿನ ಕೀರ್ತಿ ಪತಾಕೆಯನ್ನು ನಾಡಿನ ತುಂಬ ಹಬ್ಬಿಸಿದ್ದು ಇತಿಹಾಸ.

ಹರ ಹರ ಮಹಾದೇವ್ ಎಂಬ ಘೋಷಣೆಯನ್ನು ಕೂಗಿ ಹೋರಾಟದ ಕಿಚ್ಚನ್ನು ಹಚ್ಚಿದಳು. ಬ್ರಿಟಿಷರ ಗುಂಡಿಗೆ ನಡುಗಿಸಿದ ಏಕೈಕ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರಿನ ವೀರರಾಣಿ ಚೆನ್ನಮ್ಮ ಎಂದು ಹೇಳಿದರು.

ಜಿಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಮಾತನಾಡಿ, ರಾಣಿ ಚೆನ್ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದನ್ನು ಯಾರೂ ಮರೆಯಬಾರದು ಎಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಲೋಕಾಯುಕ್ತ ಎಸ್ಪಿ ಶಂಕರ ರಾಗಿ, ಸಮಾಜದ ಹಿರಿಯ ಮುಖಂಡ ಸೋಮಣ್ಣ ಡಾಣಗಲ್ಲ ಮಾತನಾಡಿದರು.

ಸಭೆಯ ಸಾನ್ನಿಧ್ಯವನ್ನು ಹೂವಿನಶಿಗ್ಲಿಯ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ವಹಿಸಿದ್ದರು. ಸಭೆಯಲ್ಲಿ ರಾಜ್ಯ ಪಂಚಮಸಾಲಿ ಸಮಾಜದ ಉಪಾಧ್ಯಕ್ಷ ಎಫ್.ಸಿ. ಮರಿಗೌಡರ, ಗದಗ ಜಿಲ್ಲಾಧ್ಯಕ್ಷ ಈರಣ್ಣ ಕರಿಬಿಷ್ಟಿ, ಶಿರಹಟ್ಟಿ ತಾಲೂಕಾಧ್ಯಕ್ಷ ಬಸವರಾಜ ತುಳಿ, ಲಕ್ಷ್ಮೇಶ್ವರ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ, ಆರ್.ಎಂ. ಹೊನಕೇರಿ, ಶಿಗ್ಲಿ ಗ್ರಾಪಂ ಅಧ್ಯಕ್ಷೆ ಸಂಗೀತಾ ಪೂಜಾರ, ಸಿದ್ದಣ್ಣ ಯಲಿಗಾರ, ನಿಂಗಪ್ಪ ಹುನಗುಂದ, ಎಚ್.ಎಫ್. ತಳವಾರ, ಎಚ್.ಎಫ್. ಗೂಡೂರ, ಡಿ.ವೈ. ಹುನಗುಂದ, ಆಸೋಕ ಶಿರಹಟ್ಟಿ, ಬಸಣ್ಣ ಹಂಜಿ, ರಾಮಣ್ಣ ಲಮಾಣಿ, ಅಜ್ಜಪ್ಪ ಕೆಂಚಕ್ಕನವರ, ಮುದಕಣ್ಣ ಗಡಾದ, ಡಾ. ಬಿ.ವಿ. ಮೇಲ್ಮುರಿ, ಚನ್ನಪ್ಪ ಹುನಗುಂದ, ಪ್ರವೀಣ ಕಾಳಪ್ಪನವರ. ಮಂಜುನಾಥ ಇಚ್ಚಂಗಿ ಅವರನ್ನು ಸನ್ಮಾನಿಸಲಾಯಿತು.

ಈರಣ್ಣ ಅಕ್ಕೂರ ಸ್ವಾಗತಿಸಿದರು. ನಿಂಗಪ್ಪ ಹತ್ತಿಕಾಳ ಹಾಗೂ ಬಿ.ಬಿ. ಬಳಿಗಾರ ನಿರೂಪಿಸಿದರು. ವಿ.ಕೆ. ಹತ್ತಿಕಾಳ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ