ಲಾಭದತ್ತ ಮುನ್ನಡೆದ ಆರ್‌ಎಪಿಸಿಎಂಎಸ್: ಬೇಲೂರು ಸೋಮಶೇಖರ್

KannadaprabhaNewsNetwork |  
Published : Sep 28, 2026, 01:30 AM IST
೨೭ಕೆಎಂಎನ್‌ಡಿ-೩ಮಂಡ್ಯದ ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ೨೦೨೫-೨೬ನೇ ಸಾಲಿನ ೫೫ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಸಂಘದ ಆವರಣದಲ್ಲಿ ನಡೆಯಿತು. | Kannada Prabha

ಸಾರಾಂಶ

ಸೀಮೆಎಣ್ಣೆ ವಿಭಾಗದಿಂದ ೯ ಲಕ್ಷ ರು., ಫುಡ್ ವಿಭಾಗದಿಂದ ೧.೨೭ ಕೋಟಿ ರು., ಹಾರ್ಡ್‌ವೇರ್ ವಿಭಾಗದಿಂದ ೩.೨೦ ಕೋಟಿ ರು., ಪೆಟ್ರೋಲ್ ವಿಭಾಗದಿಂದ ೯ ಲಕ್ಷ ರು. ಹಾಗೂ ವ್ಯವಸಾಯ ಇಲಾಖೆಯಿಂದ ೧೫.೯೨ ಲಕ್ಷ ರು. ಆದಾಯ ಬಂದಿದೆ. ಬ್ಯಾಂಕಿಂಗ್ ವಿಭಾಗದಲ್ಲಿ ೭.೫೬ ಕೋಟಿ ಲಾಭ ಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ೨೦೨೫-೨೬ನೇ ಸಾಲಿನ ೫೫ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಸಂಘದ ಆವರಣದಲ್ಲಿ ನಡೆಯಿತು.

ಸಭೆಯಲ್ಲಿ ನಿರ್ದೇಶಕ ಬೇಲೂರು ಸೋಮಶೇಖರ್ ಮಾತನಾಡಿ, ರೈತ ಸಭಾಂಗಣದ ಅಭಿವೃದ್ಧಿಗೆ ಕೇಂದ್ರ ಸಚಿವ ಹಾಗೂ ಮಂಡ್ಯ ಲೋಕಸಭಾ ಸದಸ್ಯ ಎಚ್.ಡಿ.ಕುಮಾರಸ್ವಾಮಿ ಅವರು ೫ ಕೋಟಿ ರು. ಅನುದಾನ ನೀಡಿದ್ದು, ಇದರ ಮೂಲಕ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸುಸಜ್ಜಿತವಾಗಿ ಪೂರ್ಣಗೊಳಿಸಲಾಗಿದೆ ಎಂದರು.

ಸಭಾಂಗಣದ ಆವರಣದಲ್ಲಿ ಪಾರ್ಕ್ ಮುಂಭಾಗದ ಕಾಂಪೌಂಡ್, ಅಡುಗೆ ಮನೆ, ಲಿಫ್ಟ್ ಹಾಗೂ ಜನರೇಟರ್ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಸಂಘದ ಪ್ರಸಕ್ತ ಸಾಲಿನ ಆರ್ಥಿಕ ಪ್ರಗತಿ ಕುರಿತು ಮಾತನಾಡಿದ ಅವರು, ಸೀಮೆಎಣ್ಣೆ ವಿಭಾಗದಿಂದ ೯ ಲಕ್ಷ ರು., ಫುಡ್ ವಿಭಾಗದಿಂದ ೧.೨೭ ಕೋಟಿ ರು., ಹಾರ್ಡ್‌ವೇರ್ ವಿಭಾಗದಿಂದ ೩.೨೦ ಕೋಟಿ ರು., ಪೆಟ್ರೋಲ್ ವಿಭಾಗದಿಂದ ೯ ಲಕ್ಷ ರು. ಹಾಗೂ ವ್ಯವಸಾಯ ಇಲಾಖೆಯಿಂದ ೧೫.೯೨ ಲಕ್ಷ ರು. ಆದಾಯ ಬಂದಿದೆ. ಬ್ಯಾಂಕಿಂಗ್ ವಿಭಾಗದಲ್ಲಿ ೭.೫೬ ಕೋಟಿ ಲಾಭ ಬಂದಿದೆ ಎಂದರು.

ರಸಗೊಬ್ಬರ ಮತ್ತು ಹಾರ್ಡ್‌ವೇರ್ ವಿಭಾಗದಲ್ಲಿ ನಷ್ಟ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಹೆಚ್ಚುವರಿ ಸಂಬಳದ ಹೊರೆ ತಪ್ಪಿಸಿ ನಷ್ಟವನ್ನು ನಿಯಂತ್ರಿಸುವ ಉದ್ದೇಶದಿಂದ ಹಾರ್ಡ್‌ವೇರ್ ವಿಭಾಗವನ್ನು ರದ್ದು ಪಡಿಸಲಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ಜೆ.ಪಿ.ಮಹೇಶ್ ಅವರು ಮಹಾಸಭೆಯನ್ನು ಉದ್ಘಾಟಿಸಿದರು. ನಿರ್ದೇಶಕರಾದ ಕೆ.ಸಿ.ರವೀಂದ್ರ, ಎನ್. ಪುನೀತ್, ಎಚ್.ಎಸ್.ಯೋಗೇಶ್‌ಕುಮಾರ್, ಎಂ.ಪಿ.ಶ್ರೀಧರ್, ಜಿ.ಎನ್.ಉದಯ್‌ಕುಮಾರ್, ಸಿ.ಕೆ.ಪಾಪಯ್ಯ, ಕೆ.ಹೇಮಲತಾ, ಜಿ.ಎಸ್. ಅಂಜನಾ, ಸಾತನೂರು ಸತೀಶ್, ಪಿ.ಕೆ.ದೊರೆಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಲಕ್ಷ್ಮಣಗೌಡಗೆ ಪಿಎಚ್‌.ಡಿ ಪದವಿ

ನಾಗಮಂಗಲ:ತಾಲೂಕಿನ ಬ್ಯಾಲದಕೆರೆ ಗ್ರಾಮದ ಬಿ.ಎಚ್.ಲಕ್ಷ್ಮಣಗೌಡರು ಮೈಸೂರು ವಿಶ್ವವಿದ್ಯಾನಿಲಯದ ಬೆಂಗಳೂರಿನ ಸೃಷ್ಟಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ.ಬಿ.ಜಿ.ಗುರುಪ್ರಸಾದ್ ಅವರ ಮಾರ್ಗದರ್ಶನದಲ್ಲಿ ‘ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸಂಸ್ಥೆಗಳ ಸೇವಾ ಗುಣಮಟ್ಟದ ಮೌಲ್ಯಮಾಪನ ಮತ್ತು ಗ್ರಾಹಕರ ನಿಷ್ಠೆಯ ಮೇಲಿನ ಅದರ ಪ್ರಭಾವ’ ಎಂಬ ವಿಷಯ ಕುರಿತು ಸಂಶೋಧನೆ ನಡೆಸಿ ಸಲ್ಲಿಸಿದ ಮಹಾ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್‌.ಡಿ ಪದವಿಗಾಗಿ ಅಂಗೀಕರಿಸಿದೆ. ಪ್ರಸ್ತುತ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಬಿ.ಎಚ್.ಲಕ್ಷ್ಮಣಗೌಡರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮುಂದಿನ ವಾರ್ಷಿಕ ಘಟಿಕೋತ್ಸವದಲ್ಲಿ ಬಿ.ಎಚ್.ಲಕ್ಷ್ಮಣಗೌಡ ಅವರಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಗುವುದೆಂದು ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಿ.ಎಚ್.ಲಕ್ಷ್ಮಣಗೌಡ ಅವರ ಸಾಧನೆಗೆ ಕುಟುಂಬಸ್ಥರು ಹಾಗೂ ಹಿತೈಷಿಗಳು ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರು, ಬಡವರ ಸೇವೆಗೆ ಸಹಕಾರ ಸಂಘ ಬದ್ಧ: ಯುವರಾಜ್
ಪೋಷಣ್ ಅಭಿಯಾನ ದೇಶದ ಪ್ರಗತಿ ಪ್ರತಿಬಿಂಬಿ: ನ್ಯಾ. ಹೇಮಂತ್ ಕುಮಾರ್