ನಾಫೆಡ್‌ನಿಂದ ಕೊಬ್ಬರಿ ಖರೀದಿ: ಅರಸೀಕೆರೆಯಲ್ಲಿ ರಾಷ್ಟ್ರಪತಿ ಭವನ ಚಲೋ

KannadaprabhaNewsNetwork |  
Published : Jan 16, 2024, 01:47 AM IST
ಗ್ರೇಡ್ 2 ತಹಸೀಲ್ದಾರ್‌  ಪಾಲಾಕ್ಷ ಅವರಿಗೆ ರೈತ ಸಂಘದ ವತಿಯಿಂದ ಮನವಿ ಸಲ್ಲಿಸಿದರು   | Kannada Prabha

ಸಾರಾಂಶ

ನಾಫೆಡ್ ಕೊಬ್ಬರಿ ಧಾರಣೆಯನ್ನು 20,000 ರು.ಗೆ ಏರಿಸಬೇಕು. ಎಲ್ಲಾ ಕಾಲದಲ್ಲೂ ನಾಫೆಡ್ ನಿಂದ ಕೊಬ್ಬರಿ ಖರೀದಿ ಮಾಡಬೇಕು ಹಾಗೂ ರೈತರು ವಂಶ ಪಾರಂಪರೆಯವಾಗಿ ಉಳುಮೆ ಮಾಡುತ್ತಿರುವ ಭೂಮಿಯನ್ನು ಅವರಿಗೆ ಮಂಜೂರು ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಅರಸೀಕೆರೆಯಲ್ಲಿ ಗ್ರೇಡ್ 2 ತಹಸೀಲ್ದಾರ್‌ ಪಾಲಾಕ್ಷ ಅವರಿಗೆ ರೈತ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ರೈತ ಸಂಘದ ವತಿಯಿಂದ ಗ್ರೇಡ್ 2 ತಹಸೀಲ್ದಾರ್‌ ಪಾಲಾಕ್ಷಗೆ ಮನವಿ ಕನ್ನಡಪ್ರಭ ವಾರ್ತೆ ಅರಸೀಕೆರೆ

ನಾಫೆಡ್ ಕೊಬ್ಬರಿ ಧಾರಣೆಯನ್ನು 20,000 ರು.ಗೆ ಏರಿಸಬೇಕು. ಎಲ್ಲಾ ಕಾಲದಲ್ಲೂ ನಾಫೆಡ್ ನಿಂದ ಕೊಬ್ಬರಿ ಖರೀದಿ ಮಾಡಬೇಕು ಹಾಗೂ ರೈತರು ವಂಶ ಪಾರಂಪರೆಯವಾಗಿ ಉಳುಮೆ ಮಾಡುತ್ತಿರುವ ಭೂಮಿಯನ್ನು ಅವರಿಗೆ ಮಂಜೂರು ಮಾಡಿಕೊಳ್ಳಬೇಕು. ಆನ್‌ಲೈನ್ ಗೇಮ್ ಆಟದಿಂದ ಅನೇಕ ಕುಟುಂಬಗಳು ಬೀದಿ ಪಾಲಾಗುತ್ತಿದ್ದು ತಕ್ಷಣವೇ ಈ ಆಟವನ್ನುನಿಲ್ಲಿಸಬೇಕು ಎಂದು ಕೆಂದ್ರ ಸರ್ಕಾರವನ್ನು ಆಗ್ರಹಿಸಿ ರಾಷ್ಟ್ರಪತಿ ಭವನಕ್ಕೆ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಗ್ರೇಡ್ 2 ತಹಸೀಲ್ದಾರ್‌ ಪಾಲಾಕ್ಷ ಅವರಿಗೆ ರೈತ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನ ಕುಮಾರ್ ಮಾತನಾಡಿ, ತೀವ್ರ ಬರಗಾಲ, ಮಳೆ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿದ್ದು ಅಲ್ಲದೆ ತೆಂಗಿಗೆ ತಗುಲಿದ ನಾನಾ ರೋಗಗಳಿಂದ ತೆಂಗು ಬೆಳೆ ನಾಶವಾಗಿ ಸುಳಿಬಿದ್ದು ಇಂದು ಬೆಲೆ ಇಲ್ಲದಂತಾಗಿ ಕಳೆದ ವರ್ಷ 20,000 ರು. ಆಸುಪಾಸಿನಲ್ಲಿದ್ದ ಕೊಬ್ಬರಿ ಧಾರಣೆ ಇಂದು ಕೇವಲ 8-10 ಸಾವಿರ ರು.ಗೆ ಇಳಿದಿದೆ. ನಾಫೆಡ್ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಂತೆ ಕೊಬ್ಬರಿ ಧಾರಣೆ ದಿನೇ ದಿನೇ ಏರಿಕೆಯಾಗುತ್ತದೆ. ಇಲ್ಲದಿದ್ದರೆ ಪ್ರತಿದಿನ ಕಡಿಮೆ ಮಾಡಿ ರೈತರನ್ನು ಶೂಷಣೆ ಮಾಡಲಾಗುತ್ತದೆ. ಇದನ್ನು ತಪ್ಪಿಸಲು ನಾಫೆಡ್ ಕೊಬ್ಬರಿ ಕೇಂದ್ರವನ್ನು ಎಲ್ಲಾ ವರ್ಷದ ಎಲ್ಲಾ ಕಾಲದಲ್ಲೂ ತೆರಯಬೇಕು. ಅಲ್ಲದೆ ಧಾರಣೆಯನ್ನು 20 ಸಾವಿರ ರು.ಗೆ ಏರಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು

ಅಲ್ಲದೆ ಬೇಲೂರು ತಾಲೂಕು ಹಳೇಬೀಡು ಹೋಬಳಿಯ ಕಾವಲು ಸರ್ವೇ ನಂಬರ್ ಒಂದರಲ್ಲಿ ಎರಡುವರೆ ಸಾವಿರ ಎಕರೆ ಸರ್ಕಾರಿ ಜಮೀನಿದ್ದು ಅದನ್ನು ೬೫೦ ರೈತರು ಉಳುಮೆ ಮಾಡುತ್ತಿದ್ದಾರೆ. ಅದೇ ರೀತಿ ಗುಬ್ಬಿ ತಾಲೂಕು ಚೇಳೂರು ಚೋಳರಿನಲ್ಲಿ ಏಳು ಸಾವಿರದ ನೂರು ಎಕರೆ ಹಾಗೂ ತಿಪಟೂರು ತಾಲೂಕು ಚೌಡ್ಲಾಪುರದಲ್ಲಿ 5600 ಎಕರೆ ಸರ್ಕಾರಿ ಜಮೀನು ಅದನ್ನು ಹತ್ತಾರು ವರ್ಷಗಳಿಂದ ಸಾವಿರಾರು ಮಂದಿ ರೈತರು ಉಳುಮೆ ಮಾಡುತ್ತಿದ್ದು ಈಗ ಅರಣ್ಯ ಇಲಾಖೆಯವರು ಜಮೀನು ತಮಗೆ ಸೇರಿದ್ದು ಎಂದು ನೋಟಿಸ್ ಕೊಟ್ಟು ರೈತರನ್ನು ಒಕ್ಕಲು ಏಳಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ರೈತರಿಗೆ ಜಮೀನು ಮಂಜೂರು ಮಾಡಿ ಮಂಜೂರಾತಿ ಪತ್ರವನ್ನು ನೀಡುವ ಮೂಲಕ ಅವರ ಜೀವನಕ್ಕೆ ದಾರಿ ಮಾಡಿ ಕೊಡಬೇಕು ಎಂದು ವಿನಂತಿಸಿದರು

ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ತುರ್ತು ಆರೋಗ್ಯ ಸೇವೆ ಲಭ್ಯವಾಗುತ್ತಿಲ್ಲ, ಅಲ್ಲದೆ ಗ್ರಾಮೀಣ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಘಟಕ, ರಕ್ತಪರೀಕ್ಷೆ ಸೇರಿದಂತೆ ಕೆಲವು ಸೌಲಭ್ಯಗಳ ಕೊರತೆ ಇದೆ, ವೈದ್ಯರ ನೇಮಕ ಹಾಗೂ ಕೆಲವು ಸವಲತ್ತುಗಳನ್ನು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದು.

ಆನ್‌ಲೈನ್ ಆಟದಿಂದ ಹಲವಾರು ರೈತರ ಮಕ್ಕಳು ಹಾಳಾಗುತ್ತಿದ್ದು ಆನೇಕರು ಸಾಲ ಮಾಡಿ ತಮ್ಮ ಬದುಕನ್ನು ಕೊನೆಗಾಣಿಸಿಕೊಳ್ಳುತ್ತಿದ್ದಾರೆ. ಲಾಟರಿಯಿಂದ ಜನರ ಬದುಕು ಹಾಳಾಗುತ್ತದೆ. ಆದ್ದರಿಂದ ತಕ್ಷಣವೇ ಆನ್‌ಲೈನ್ ಗೇಮ್‌ನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಈ ಬೇಡಿಕೆಗಳ ಜತೆಗೆ ಒಟ್ಟು ೪೦ ವಿವಿಧ ಬೇಡಿಕೆಗಳ ಈಡೇರಿಸುವಂತೆ ಮನವಿ ಪತ್ರದಲ್ಲಿ ತಿಳಿಸಿರುವುದಾಗಿ ತಿಳಿಸಿದರು.

ರೈತ ಮುಖಂಡರಾದ ಅಯೂಬ್ ಪಾಶ, ಎಜಾಜ್ ಪಾಶ, ನಂಜಮ್ಮ, ಮಹಮ್ಮದ್ ದಸ್ತಗಿರಿ , ಜವೇನಹಳ್ಳಿ ನಿಂಗಪ್ಪ, ಚಂದ್ರಪ್ಪ ರೆಡ್ಡಿ ,ಅಬ್ದುಲ್ ಕುನ್ನಿ, ಹನುಮಂತ, ಮಮತಾ, ಕಾಂತರಾಜು, ಶಿವಣ್ಣ ,ಗಂಗಣ್ಣ, ಅರೇಹಳ್ಳಿ ರಮೇಶ್ ಇದ್ದರು.ಗ್ರೇಡ್ 2 ತಹಸೀಲ್ದಾರ್‌ ಪಾಲಾಕ್ಷ ಅವರಿಗೆ ರೈತ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ಅವಕಾಶ ತೆರೆದ ಸಮಕಾಲೀನ ಭಾಷಾ ತಂತ್ರಜ್ಞಾನ: ಗೀತಾ ವಾಲೀಕಾರ್
ವಸಾಹತುಶಾಹಿತ್ವ ಒಳಿತು ಕೆಡಕಿನ ಸಂತೆ: ಡಾ. ಕೆ. ವೆಂಕಟೇಶ