ಹೊಸದುರ್ಗ: ಭಾರತದ ಬಲಿಷ್ಠ ಉದ್ಯಮ ಕ್ಷೇತ್ರವನ್ನು ಜಗತ್ತಿಗೆ ಪರಿಚಯಿಸಿದ ಧೀಮಂತ ಉದ್ಯಮಿ ರತನ್ ಟಾಟಾ ಅಗಲಿಕೆ ಭಾರತದ ಉದ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟ ತಂದಿದೆ ಎಂದು ಹೊಸದುರ್ಗದ ಯುವ ಉದ್ಯಮಿ ಸದ್ಗುರು ಪ್ರದೀಪ್ ಹೇಳಿದರು.
ರತನ್ ಟಾಟಾ ಭಾರತದ ಉದ್ಯಮಿಗಳಿಗೆ ಸ್ಫೂರ್ತಿಯಾಗಿ ನಿಂತಿದ್ದರು. ಜೇಮ್ ಶೆಟ್ ಜಿ ಟಾಟಾ ಕಟ್ಟಿದ ಟಾಟಾ ಉದ್ಯಮವನ್ನು ಬಾನೆತ್ತರಕ್ಕೆ ಬೆಳೆಸಿ ತನ್ನ ಬದುಕಿನಲ್ಲಿ ಸರಳತೆಯನ್ನು ಮೈಗೂಡಿಸಿಕೊಂಡು ಬೆಳೆದವರು. ಸರಕು ವಾಹನಗಳು ಇಲ್ಲದೆ ಪರದಾಡುತ್ತಿರುವ ಗ್ರಾಮೀಣ ಭಾಗದ ರೈತ ಕುಟುಂಬಗಳಿಗೆ ತಾವು ಬೆಳೆದ ಧಾನ್ಯಗಳನ್ನು ಮಾರುಕಟ್ಟೆಗೆ ತರಲು ಟಾಟಾ ಏಸ್ ಪರಿಚಯಿಸಿದ ಕೀರ್ತಿ ಜೆ.ಎನ್.ರತನ್ ಟಾಟಾ ರವರಿಗೆ ಸಲ್ಲುತ್ತದೆ ಎಂದರು.
ರತನ್ ಡಾಟರ್ ಅವರು ತಮಗೆ ಬರುತ್ತಿದ್ದ ಆದಾಯದಲ್ಲಿ ಬಹುಪಾಲು ಹಣವನ್ನು ಸಾರ್ವಜನಿಕವಾಗಿ ಶಿಕ್ಷಣ ಸಂಸ್ಥೆ, ಆರೋಗ್ಯ, ಕ್ಷೇತ್ರಕ್ಕೆ ವಿನಿಯೋಗಿಸುತ್ತಿದ್ದರು. ಪ್ರಪಂಚದ ಬೇರೆ ಬೇರೆ ಪ್ರತಿಷ್ಠಿತ ಕಂಪನಿಗಳನ್ನು ಖರೀದಿಸಿ ಭಾರತದ ಉದ್ಯಮಿಗಳೂ ಪ್ರಬಲರು ಎಂದು ವಿಶ್ವದ ಮಾರುಕಟ್ಟೆಗೆ ತಿಳಿಸಿದ್ದರು ಎಂದು ಸ್ಮರಿಸಿದರು.ಶ್ರದ್ಧಾಂಜಲಿ ಸಭೆಯಲ್ಲಿ ನಿವೃತ್ತ ಯೋಧ ಗೋವಿಂದ ಸ್ವಾಮಿ, ಸಮಾಜ ಸೇವಕ ತುಂಬಿನಕೆರೆ ಬಸವರಾಜ್, ಅಣ್ಣಪ್ಪ, ತಿಪ್ಪೇಶ್ ಹಾಗೂ ಸದ್ಗುರು ಸಂಸ್ಥೆಯ ನೂರಾರು ಸಿಬ್ಬಂದಿ ಪಾಲ್ಗೊಂಡಿದ್ದರು.