ರತ್ನಾಪುರ ಭಂಡಾರ ನಿಧಿ ಚಲನಚಿತ್ರ ಇಂದು ಬಿಡುಗಡೆ

KannadaprabhaNewsNetwork |  
Published : Sep 12, 2025, 12:07 AM IST
ರಾಜ್ಯಾಧ್ಯಾಂತ ಸೆ. 12 ರಿಂದ  ಪ್ರದರ್ಶನಗೊಳ್ಳಲಿರುವ  ರತ್ನಾಪುರ ಭಂಡಾರದ ನಿಧಿ  ಚಲನಚಿತ್ರದ ನಿರ್ಮಾಪಕ ರವಿ ಪೂಜಾರಿ ಸುದ್ದಿಗೊಷ್ಟಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಭಾಷಾ ಶೈಲಿ ಮತ್ತು ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಲಾದ ರತ್ನಾಪುರ ಭಂಡಾರ ನಿಧಿ ಚಲನಚಿತ್ರವು ಇಂದು ಸೆ.೧೨ ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಯುವ ಉದ್ಯಮಿ ಹಾಗೂ ಚಲನಚಿತ್ರದ ನಿರ್ಮಾಪಕ ರವಿ ಪೂಜಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಉತ್ತರ ಕರ್ನಾಟಕದ ಭಾಷಾ ಶೈಲಿ ಮತ್ತು ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಲಾದ ರತ್ನಾಪುರ ಭಂಡಾರ ನಿಧಿ ಚಲನಚಿತ್ರವು ಇಂದು ಸೆ.೧೨ ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಯುವ ಉದ್ಯಮಿ ಹಾಗೂ ಚಲನಚಿತ್ರದ ನಿರ್ಮಾಪಕ ರವಿ ಪೂಜಾರಿ ಹೇಳಿದರು.

ಪಟ್ಟಣದ ಆರ್‌ಎಸ್‌ಪಿ ಸಭಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರನಟ ಹಾಲೇಶ್ ನಿರ್ದೇಶನ ಮಾಡಿದ ರತ್ನಾಪೂರ ಭಂಡಾರ ನಿಧಿ ನನ್ನ ಚೊಚ್ಚಲು ಸಿನಿಮಾ ಆಗಿದ್ದು, ಈ ಚಿತ್ರದ ಯಶಸ್ಸಿಗಾಗಿ ಎಲ್ಲರೂ ಚಿತ್ರಮಂದಿರಗಳಲ್ಲಿ ಚಲನಚಿತ್ರ ವೀಕ್ಷಿಸಿ ಹಾರೈಸಬೇಕು ಎಂದು ಮನವಿ ಮಾಡಿದರು.ಪುರಸಭೆಯ ಸದಸ್ಯ ರಾವಸಾಬ ಐಹೊಳಿ ಮಾತನಾಡಿ, ರವಿ ಪೂಜಾರಿ ಬಡತನವನ್ನು ಮೆಟ್ಟಿನಿಂತು ಯಶಸ್ವಿ ಉದ್ಯಮಿಯಾಗುವ ಮೂಲಕ ಈ ಗಡಿ ಭಾಗದಲ್ಲಿ ರತ್ನಾಪುರ ಭಂಡಾರ ನಿಧಿ ಎಂಬ ಸಿನಿಮಾಕ್ಕೆ ಬಂಡವಾಳ ಹೂಡಿ ಚಲನಚಿತ್ರ ನಿರ್ಮಾಣ ಮಾಡಿರುವುದು ನಮ್ಮಲ್ಲರಿಗೆ ಹೆಮ್ಮೆ ಮತ್ತು ಸಂತಸ ತಂದಿದೆ. ಈ ಚಲನಚಿತ್ರ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಗೊಳ್ಳಲಿ ಎಂದು ಶುಭಹಾರೈಸಿದರು.ಚಿತ್ರನಟ ಹಾಗೂ ನಿರ್ದೇಶಕ ಹಾಲೇಶ್ ಮಾತನಾಡಿ, ಪ್ರಾದೇಶಿಕ ಕಥೆಗಳು ಮತ್ತು ಭಾಷೆಗೆ ಒತ್ತು ನೀಡಿರುವ ಈ ಚಿತ್ರವನ್ನು ಎಲ್ಲರೂ ಕಡ್ಡಾಯವಾಗಿ ವೀಕ್ಷಿಸಬೇಕು. ನಮ್ಮ ಶ್ರಮಕ್ಕೆ ನಿಮ್ಮ ಬೆಂಬಲ ಮುಖ್ಯ ಎಂದು ತಿಳಿಸಿದರು.ಗೋಷ್ಠಿಯಲ್ಲಿ ತೇವರಟ್ಟಿಯ ವಿಠಲ ಮಹಾರಾಜರು, ಉದ್ಯಮಿ ರಾವಸಾಬ ಐಹೊಳೆ, ಸಿದ್ದು ಪಾಟೀಲ, ಪ್ರಕಾಶ ಹಿಡಕಲ್ಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ನಿರ್ಮಾಣದ ಹಂತದಲ್ಲಿ ಹಲವು ಸವಾಲುಗಳು ಎದುರಾಗಿದ್ದವು. ಎಲ್ಲ ಅಡೆತಡೆಗಳನ್ನು ನಿವಾರಿಸಿ, ಸೆನ್ಸಾರ್ ಸೇರಿದಂತೆ ಎಲ್ಲ ರೀತಿಯ ಅನುಮತಿಗಳನ್ನು ಪಡೆದು ಇಂದು ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರವನ್ನು ಯಶಸ್ವಿಗೊಳಿಸಲು ಪ್ರೋತ್ಸಾಹಿಸಿಬೇಕು. ರಾಜ್ಯದ ೫೦ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಏಕ ಕಾಲಕ್ಕೆ ಚಿತ್ರ ಬಿಡುಗಡೆಯಾಗಲಿದೆ.

-ರವಿ ಪೂಜಾರಿ, ಚಲನಚಿತ್ರದ ನಿರ್ಮಾಪಕರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ