ಮಾವತ್ತೂರು ಸಂಘಕ್ಕೆ ರವಿ ಅಧ್ಯಕ್ಷ

KannadaprabhaNewsNetwork |  
Published : Jul 16, 2026, 01:45 AM IST
ಮಾವತ್ತೂರು ಹಾಲು ಉತ್ಪಾದಕರ ಸಂಘಕ್ಕೆ ವಕೀಲ ಎಂ.ಎ. ರವಿ ಅಧ್ಯಕ್ಷರಾಗಿ ಆಯ್ಕೆ | Kannada Prabha

ಸಾರಾಂಶ

ಕೊರಟಗೆರೆ: ತಾಲೂಕಿನ ಮಾವತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಕೀಲ ಎಂ.ಎ. ರವಿ ಉಪಾಧ್ಯಕ್ಷರಾಗಿ ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೊರಟಗೆರೆ: ತಾಲೂಕಿನ ಮಾವತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಕೀಲ ಎಂ.ಎ. ರವಿ ಉಪಾಧ್ಯಕ್ಷರಾಗಿ ರಮೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಮಾವತ್ತೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸುಮಾರು ೩೫ಕ್ಕೂ ಹೆಚ್ಚು ರೈತರು ಹಾಲು ಹಾಕುತ್ತಿದ್ದು, ಪ್ರತಿದಿನ ಸುಮಾರು ೧೬೦೦ ಲೀ ಹಾಲು ಶೇಖರಣೆ ಮಾಡಲಾಗುತ್ತಿದ್ದು, ಇದರಿಂದ ಸಾಕಷ್ಟು ರೈತರು ಅನುಕೂಲ ಪಡೆಯುತ್ತಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು ಹಾಗೂ ಊರಿನ ಮುಖಂಡರ ಸಹಕಾರದಿಂದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನ ತಿಳಿಸಿದರು.ಇದೆ ವೇಳೆ ಉಪಾಧ್ಯಕ್ಷರಾದ ರಮೇಶ್, ನಿರ್ದೇಶಕರಾದ ವೆಂಕಟೇಶ್, ಶ್ರೀನಿವಾಸ್, ನಾಗರಾಜ್, ಕಾಳಪ್ಪ, ಸುವರ್ಣಮ್ಮ, ಮುಖಂಡರಾದ ಅರಸಪ್ಪ, ಚೇತನ್, ನಟರಾಜ್, ವೆಂಕಟೇಶ್, ಸಿದ್ದಪ್ಪ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಾಂದೋಲನ ಆಗುತ್ತಿದೆ ಪಾದಯಾತ್ರೆ: ಬಿವೈವಿ
41 ಶಿಕ್ಷಕರು, ಉಪನ್ಯಾಸಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ