ಬೂಕನಕೆರೆ ಡೇರಿಗೆ ರವಿರಾಮೇಗೌಡ ನಾಮನಿರ್ದೇಶನ: ಅಭಿನಂದನೆ

KannadaprabhaNewsNetwork |  
Published : Jul 16, 2024, 12:33 AM IST
15ಕೆಎಂಎನ್ ಡಿ21 | Kannada Prabha

ಸಾರಾಂಶ

ರವಿರಾಮೇಗೌಡರು ಡೇರಿ ಆಡಳಿತ ಮಂಡಳಿಗೆ ಸರ್ಕಾರಿ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿರುವುದು ಸಂತಸದ ಸಂಗತಿ. ಇದರಿಂದ ಸಂಘವು ಹೆಚ್ಚಿನ ಅಭಿವೃದ್ಧಿ ಕಾಣಲಿದೆ. ಸಮಾಜ ಸೇವಕ ವಿಜಯ ರಾಮೇಗೌಡರ ಸಹೋದರರಾದ ರವಿರಾಮೇಗೌಡ ಅವರನ್ನು ಬೂಕನಕೆರೆ ಗ್ರಾಮದ ಮುಖಂಡರು ಮತ್ತು ಸಂಘದ ಎಲ್ಲಾ ಸದಸ್ಯರು ಸೇರಿ ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕು ಬೂಕನಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಸರ್ಕಾರಿ ನಾಮ ನಿರ್ದೇಶಿತ ಸದಸ್ಯರಾಗಿ ರವಿರಾಮೇಗೌಡ ನೇಮಕಗೊಂಡಿದ್ದಾರೆ.

ಸಮಾಜ ಸೇವಕ ವಿಜಯ ರಾಮೇಗೌಡರ ಸಹೋದರರಾದ ರವಿರಾಮೇಗೌಡ ಅವರನ್ನು ಬೂಕನಕೆರೆ ಗ್ರಾಮದ ಮುಖಂಡರು ಮತ್ತು ಸಂಘದ ಎಲ್ಲಾ ಸದಸ್ಯರು ಸೇರಿ ಅಭಿನಂದಿಸಿದರು.

ತಾಪಂ ಮಾಜಿ ಅಧ್ಯಕ್ಷ ಜವರಾಯಿಗೌಡ ಮಾತನಾಡಿ, ರವಿರಾಮೇಗೌಡರು ಡೇರಿ ಆಡಳಿತ ಮಂಡಳಿಗೆ ಸರ್ಕಾರಿ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿರುವುದು ಸಂತಸದ ಸಂಗತಿ. ಇದರಿಂದ ಸಂಘವು ಹೆಚ್ಚಿನ ಅಭಿವೃದ್ಧಿ ಕಾಣಲಿದೆ ಎಂದರು.

ಅಭಿನಂದನೆ ಸ್ವೀಕರಿಸಿದ ರವಿರಾಮೇಗೌಡ, ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಸಂಘದ ಆಡಳಿತ ಮಂಡಳಿ ಜೊತೆ ಕೈಜೋಡಿಸಿ ಸಂಘದ ಹಾಗೂ ಹಾಲು ಉತ್ಪಾದಕರ ಸರ್ವಾಂಗೀಣ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ವಿಜಯ ರಾಮೇಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಸರಹಳ್ಳಿ ಗೋವಿಂದರಾಜು, ಡೇರಿ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷೆ ಕೋಕಿಲಾ, ತಾಲೂಕು ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಮಲ್ಲಿಕಾರ್ಜುನ, ಗ್ರಾಪಂ ಸದಸ್ಯ ರಂಗಪ್ಪ, ಮಾಜಿ ಸದಸ್ಯ ಶಂಭುಲಿಂಗಶೆಟ್ಟಿ, ಮಂಜುನಾಥ್, ರಂಗಸ್ವಾಮಿ, ಕೆಂಚಣ್ಣರವಿ, ತ್ಯಾಗರಾಜ, ಸುರೇಶ್, ಮಂಜು, ಸಂಘದ ನಿರ್ದೇಶಕರಾದ ರಾಜೇಗೌಡ, ರಂಗೇಗೌಡ, ನಂದೀಶ್, ಸುಬ್ರಾಯ್ ಶೆಟ್ಟಿ, ಪಂಕಜ, ಜಯಲಕ್ಷ್ಮಮ್ಮ, ಮಂಜುಳಾ ಸೇರಿದಂತೆ ಸಂಘದ ಎಲ್ಲಾ ಮಾಜಿ ನಿರ್ದೇಶಕರು ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು. ಶರಣರ ಸಂಘಟನಾ ವೇದಿಕೆಗೆ ಪದಾಧಿಕಾರಿಗಳ ಆಯ್ಕೆ

ಭಾರತೀನಗರ:ಶರಣರ ಸಂಘಟನಾ ವೇದಿಕೆಯ ಜಿಲ್ಲೆ ಯುವ ಘಟಕದ ಅಧ್ಯಕ್ಷರಾಗಿ ಭುಜುವಳ್ಳಿ ನಾಗೇಶ್, ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷರಾಗಿ ಕವಿತಾ ವೈಬಿಶ್ರೀ ಆಯ್ಕೆಯಾಗಿದ್ದಾರೆ.

ಮದ್ದೂರು ತಾಲೂಕು ಅಧ್ಯಕ್ಷರಾಗಿ ಎಚ್.ಹೊಸಹಳ್ಳಿ ಗ್ರಾಮದ ಎಚ್.ಎಂ.ವಿಜಯ್‌ಕುಮಾರ್, ಉಪಾಧ್ಯಕ್ಷರಾಗಿ ಅರೆಚಾಕನಹಳ್ಳಿ ಚಂದ್ರಕೀರ್ತಿ, ಪ್ರಧಾನ ಕಾರ್ಯದರ್ಶಿ ಎಚ್.ಹೊಸಹಳ್ಳಿ ಗ್ರಾಮದ ಎಚ್.ಎಂ.ಶಿವಮೂರ್ತಿ, ತಾಲೂಕು ಸಂಚಾಲಕರಾಗಿ ಎಚ್.ಕೆ.ಮಹದೇವಸ್ವಾಮಿ, ಸಹಕಾರ್ಯದರ್ಶಿ ಚಂದೂಪುರ ಪ್ರಶಾಂತ್, ಮದ್ದೂರು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಅಜ್ಜಹಳ್ಳಿ ಶಿವಮ್ಮ, ಸಲಹೆಗಾರರಾಗಿ ಸಬ್ಬನಹಳ್ಳಿ ಎಸ್.ಮಹೇಶ್, ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಹೊನ್ನಾಯಕನಹಳ್ಳಿ ಎಚ್.ಎಸ್.ನವೀನ್‌ಕುಮಾರ್, ಸಿ.ಎ.ಕೆರೆ ಹೋಬಳಿ ಘಟಕದ ಅಧ್ಯಕ್ಷರಾಗಿ ಚಾಕನಹಳ್ಳಿ ಶಿವಕುಮಾರ್ ಆಯ್ಕೆಗೊಂಡಿದ್ದಾರೆ.ಇದೇ ವೇಳೆ ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.

ಈ ವೇಳೆ ವೇದಿಕೆ ಜಿಲ್ಲಾಧ್ಯಕ್ಷ ಕಾಡುಕೊತ್ತನಹಳ್ಳಿ ನಂದೀಶ್, ಉಪಾಧ್ಯಕ್ಷ ಮೆಣಗೆರೆ ಶಿವಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಕೆ.ಹಳ್ಳಿ ಶಿವಕುಮಾರ್, ಜಿಲ್ಲಾ ಪದಾಧಿಕಾರಿ ಕ್ಯಾತಘಟ್ಟದ ಸಿದ್ದಲಿಂಗಸ್ವಾಮಿ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ