ಕನ್ನಡಪ್ರಭವಾರ್ತೆ,ಗುಳೇದಗುಡ್ಡ
ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರ ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿ ಸಂಗೊಳ್ಳಿ ರಾಯಣ್ಣ ನಾಡಿನ ಸ್ವಾತಂತ್ರಕ್ಕಾಗಿ ಹೋರಾಡಿ ತನ್ನ ಪ್ರಾಣವನ್ನೇ ಬಲಿದಾನ ಮಾಡಿದ ಮಹಾನ್ ವೀರ. ಅವರ ನಾಡಾಭಿಮಾನ, ಸಾಹಸ, ಸ್ವಾಭಿಮಾನದ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷೆ ರಕ್ಷಿತಾ ಈಟಿ ಹೇಳಿದರು.ಇತ್ತೀಚೆಗೆ ಪಟ್ಟಣದ ಹರದೊಳ್ಳಿ ಹನಮಪ್ಪನ ದೇವಸ್ಥಾನದ ಆವರಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಹರದೊಳ್ಳಿ-ಗುಳೇದಗುಡ್ಡ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಸಂಗೊಳ್ಳಿ ರಾಯಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಯಣ್ಣ ಎಲ್ಲ ಮನದಲ್ಲಿ ಇಂದಿಗೂ ಇದ್ದಾನೆ. ತಾಯಂದಿರು ರಾಯಣ್ಣನಂತಹ ಅಭಿಮಾನವುಳ್ಳ ನಾಡಿಗಾಗಿ, ದೇಶಕ್ಕಾಗಿ ಸೇವೆ ಸಲ್ಲಿಸುವಂತ ಮಕ್ಕಳನ್ನು ನೀಡಬೇಕು ಎಂದು ಹೇಳಿದರು.
ಸಿಪಿಐ ಕರಿಯಪ್ಪ ಬನ್ನಿ ಮಾತನಾಡಿ, ಸಂಗೊಳ್ಳಿ ರಾಯಣ್ಣನ ದೇಶಾಭಿಮಾನ ರೂಢಿಸಿಕೊಂಡು ತಾಯಂದಿರಾದವರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ತಿಳಿಸಿದರು.ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಸುರೇಶ ಗೋಕಾಕ ಮಾತನಾಡಿ, ಯಾವ ಸಂಗೊಳ್ಳಿ ರಾಯಣ್ಣನನ್ನು ಅವನತಿಗೆ ಕಾರಣರಾಗಿದ್ದರೋ ಅವರೆ ಇಂದು ರಾಯಣ್ಣನ ಕಟೌಟ್ ಹಾಕಿ ಅಭಿಮಾನ ಮೆರೆಯುತ್ತಿದ್ದಾರೆ. ಅವರ ಆದರ್ಶಗಳನ್ನು ದೇಶದೆಲ್ಲೆಡೆ ಬಿತ್ತುತ್ತಿದ್ದಾರೆ. ವಿರೋಧಿಗಳ ಎದೆ ಝಲ್ ಎನಿಸುವಂತ ಸಾಹಸಿ ರಾಯಣ್ಣ ಆಗಿದ್ದ. ಅವರ ಶೌರ್ಯವನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಭರಮು ಪೂಜಾರಿ, ಪಿಎಸ್ಐ ಸಿದ್ದು ಯಡಹಳ್ಳಿ, ಮಲ್ಲು ಹುನಗುಂಡಿ, ರವಿ ಶೇಬಿನಕಟ್ಟಿ ಸಂಗೊಳ್ಳಿ ರಾಯಣ್ಣ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಇತಿಹಾಸ ವಿವರಿಸಿದರು. ಆರಂಭದಲ್ಲಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ಕಿರಣ ಸಲಕಿ ಸ್ವಾಗತಿಸಿದರು. ಕೃಷಿ ಅಧಿಕಾರಿ ಆನಂದ ಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.ಆನಂದ ಮನ್ನಿಕಟ್ಟಿ, ಮಲ್ಲನಗೌಡ ಪಾಟೀಲ, ಗೌಡಪ್ಪ ಗೌಡರ, ಸಿದ್ದಪ್ಪ ಹಾಲಿಗೇರಿ, ಮುಕಪ್ಪ ಹೂನೂರ, ಬಸಪ್ಪ ಕಳ್ಳಿಗುಡ್ಡ, ಮೈಲಾರಪ್ಪ ಹಾದಿಮನಿ, ಮಹಾಂತೇಶ ಹಿರೇಗೌಡರ, ನೀಲಪ್ಪ ಗೌಡರ ಸೇರಿದಂತೆ ಸಮಾಜದ ಗುರು ಹಿರಿಯರು ಪಾಲ್ಗೊಂಡಿದ್ದರು.-----------
ಕೋಟ್.....ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್ ವೀರ. ಅವರ ದೇಶಪ್ರೇಮವನ್ನು ಇಂದಿನ ಯುವಕರು ಮಾತ್ರವಲ್ಲ, ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಅವರ ನಾಡಾಭಿಮಾನ, ಸಾಹಸ, ಸ್ವಾಭಿಮಾನ ಎಲ್ಲರ ಮೆಚ್ಚುವಂತಹದ್ದು.
- ರಕ್ಷಿತಾ ಈಟಿ, ಅಧ್ಯಕ್ಷರು, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕ, ಬಾಗಲಕೋಟೆ