ಕುಕನೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಆದರ್ಶ ಯುವ ಪೀಳಿಗೆಗೆ ಸ್ಫೂರ್ತಿದಾಯಕ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣವರ ಹೇಳಿದರು.
ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ, ಸಂಗೋಳ್ಳಿ ರಾಯಣ್ಣನ ದೇಶಪ್ರೇಮ ಅನನ್ಯ. ತಾಯ್ನಾಡಿಗಾಗಿ ತನ್ನ ಪ್ರಾಣ ಪಣಕ್ಕಿಟ್ಟು ಹೋರಾಡಿದ ಅಪ್ರತಿಮ ನಾಯಕ ರಾಯಣ್ಣ ಆಗಿದ್ದಾರೆ. ಬ್ರೀಟಿಷರ ಹಿಮ್ಮೆಟ್ಟಿಸಲು ದಿಟ್ಟ ಹೆಜ್ಜೆ ಇಟ್ಟಿದ್ದರು. ಅಂತವರ ಶೌರ್ಯದ ಹೋರಾಟದ ಹಾದಿಯಲ್ಲಿ ಪ್ರತಿಯೊಬ್ಬರು ನಾಯಕತ್ವ ಗುಣ ಬೆಳೆಸಿಕೊಂಡು ರಾಷ್ಟ್ರ ಪ್ರೇಮ ತಾಳಬೇಕು ಎಂದರು.
ಬಾದಾಮಿನಾಳ ಶಾಖಾಮಠದ ಪೂಜ್ಯರು ಭಾಗವಹಿಸಿ ಆಶೀರ್ವಚನ ನೀಡಿದರು.ಈ ಸಂದರ್ಭದಲ್ಲಿ ಈರಪ್ಪ ಕುಡಗುಂಟಿ, ಅನೀಲ ಆಚಾರ, ತಾಪಂ ಮಾಜಿ ಅಧ್ಯಕ್ಷ ಜಗನ್ನಾಥಗೌಡ, ಮಲ್ಲಿಕಾರ್ಜುನ ಗುಳಗಣ್ಣವರ, ಸಿದ್ದಯ್ಯ ಕಳ್ಳಿಮಠ, ಜಯಸಿಂಗರಾವ್ ಜಾಧವ್, ಮಹೇಶ್ ಗಾವರಳ, ಮಂಜನಾಥ ಕಡೆಮನಿ, ಈಶಪ್ಪ ಅಡ್ಡಮಾಳಗಿ, ಲಕ್ಷ್ಮಣ ಯಡಿಯಾಪುರ, ಪಪಂ ಸದಸ್ಯ ಗಗನ ನೋಟಗಾರ್, ವಿರೇಶ ಸಬರದ, ಚಂದ್ರಕಾಂತ ಯರೇಹಂಚಿನಾಳ ಇತರರಿದ್ದರು.